ಭಾರತದಲ್ಲಿ ಗೂಗಲ್‌'ನ 'ಪಿಕ್ಸೆಲ್‌ ಫೋನ್‌' ದರ ಎಷ್ಟು: ಇಲ್ಲಿದೆ ಡೀಟೇಲ್ಸ್

By Suneel
|

ಗೂಗಲ್‌ ತನ್ನ ಹೊಸ 'ಪಿಕ್ಸೆಲ್‌ ಸ್ಮಾರ್ಟ್‌ಫೋನ್'ನ ಭಾರತದ ಖರೀದಿ ಬೆಲೆ ಮತ್ತು ಲಭ್ಯವಿರುವ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಿದೆ. ಗೂಗಲ್‌ ಕಂಪನಿ ಮಂಗಳವಾರ( ಅಕ್ಟೋಬರ್‌ 4) ಬ್ಲಾಗ್‌ ಪೋಸ್ಟ್‌ನಲ್ಲಿ 'ಪಿಕ್ಸೆಲ್‌ ಸ್ಮಾರ್ಟ್‌ಫೋನ್' ಭಾರತದಲ್ಲಿ ರೂ.57,000 ($855) ದಿಂದ ಆರಂಭವಾಗಲಿದೆ ಎಂದು ಪ್ರಕಟ ಮಾಡಿದೆ.

ಐಫೋನ್ 8ರ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು

ಭಾರತದಲ್ಲಿ ಗೂಗಲ್‌'ನ 'ಪಿಕ್ಸೆಲ್‌ ಫೋನ್‌' ದರ ಎಷ್ಟು: ಇಲ್ಲಿದೆ ಡೀಟೇಲ್ಸ್

ಅಂದಹಾಗೆ ರೂ.57,000 ಬೆಲೆಯು 32GB 'ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗೆ. 128GB ಮಾಡೆಲ್‌ ಡಿವೈಸ್‌ಗೆ 66,000 ರೂ, ಹಾಗೂ ದೊಡ್ಡ ಡಿವೈಸ್‌ 'ಪಿಕ್ಸೆಲ್‌ XL'ಗೆ 67,000 ರೂ ಬೆಲೆಯಾಗಿದೆ. ಈ ಫೋನ್‌ಗಳ ವಿಶೇಷ ವೆಂದರೆ ಇದೇ ಮೊದಲ ಬಾರಿಗೆ ಗೂಗಲ್ ಅಸಿಸ್ಟಂಟ್‌ ಅನ್ನು ಇನ್‌ಬಿಲ್ಟ್‌ ಆಗಿ ಡಿವೈಸ್‌ಗಳು ಹೊಂದಿವೆ.

ಪಿಕ್ಸೆಲ್‌ ಡಿವೈಸ್‌ಗಳು ಕಪ್ಪು ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದ್ದು, ಭಾರತದಲ್ಲಿ ಖರೀದಿಗಾಗಿ ಅಕ್ಟೋಬರ್‌ 13 ರಿಂದ ಮುಂಚಿನವಾಗಿ ಬುಕ್‌ ಮಾಡಬಹುದು. ಬುಕ್ಕಿಂಗ್‌ ಅನ್ನು ಫ್ಲಿಪ್‌ಕಾರ್ಟ್, ಕ್ರೊಮ, ರಿಲಾಯನ್ಸ್ ಡಿಜಿಟಲ್‌ ಮತ್ತು ಇತರೆ ರೀಟೇಲ್‌ ಸ್ಟೋರ್‌ಗಳಲ್ಲಿ ಮಾಡಬಹುದು.

ಭಾರತದಲ್ಲಿ ಗೂಗಲ್‌'ನ 'ಪಿಕ್ಸೆಲ್‌ ಫೋನ್‌' ದರ ಎಷ್ಟು: ಇಲ್ಲಿದೆ ಡೀಟೇಲ್ಸ್

ಪಿಕ್ಸೆಲ್‌ ಡಿವೈಸ್‌ ಬಳಕೆದಾರರು ಟಾಲ್ ಫ್ರೀ ಫೋನ್‌ ನಂಬರ್ ಸಪೋರ್ಟ್‌ ಆಕ್ಸೆಸ್ ಅನ್ನು ಭಾರತದಾದ್ಯಂತ 30 ಸಿಟಿಗಳಲ್ಲಿ ಇರುವ 54 ವಾಕ್‌ ಇನ್‌ ಸರ್ವೀಸ್ ಸೆಂಟರ್‌ಗಳಿಗೆ ಪಡೆಯಬಹುದಾಗಿದೆ.

'ನೋಕಿಯಾ ಡಿ1ಸಿ' ಆಂಡ್ರಾಯ್ಡ್ ನ್ಯೂಗಾ ಓಎಸ್‌ ಜೊತೆಗೆ, 3GB RAM

Best Mobiles in India

English summary
India pricing for Google's new Pixel phones revealed. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X