Home
ಮೊಬೈಲ್

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ಬೆಲೆ 349 ಡಾಲರ್‌!

By Ashwath

ಹೊಸ ನೆಕ್ಸಸ್‌ ಸ್ಮಾರ್ಟ್‌ಫೋನನ್ನು ಗೂಗಲ್‌ ಬಿಡುಗಡೆ ಮಾಡುವವರೆಗೆ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಬರುತ್ತಲೇ ಇರುತ್ತದೆ.ಈಗ ಹೊಸದಾಗಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನಿನ ದರವನ್ನು ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಪ್ರಕಟಿಸಿದೆ.

ತನ್ನ ಹೊಸ ಎಲ್‌ಜಿ ನೆಕ್ಸಸ್‌ 5 ಸ್ಮಾರ್ಟ್‌ ಫೋನ್‌ಗೆ 349 ಡಾಲರ್‌( ಅಂದಾಜು21300 ರೂಪಾಯಿ) ಎನ್ನುವ ಸುದ್ದಿಯನ್ನು ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಅಕಸ್ಮಿಕವಾಗಿ ಪ್ರಕಟಿಸಿದೆ. ಈ ಸುದ್ದಿಯನ್ನು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಗೂಗಲ್‌ ಈ ಮಾಹಿತಿಯನ್ನು ಪ್ಲೇ ಸ್ಟೋರ್‌ನಿಂದ ತೆಗೆದ್ದರೂ ಅಮೆರಿಕ Marques Brownlee ಎಂಬವರು ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್‌ ಆಗಿರುವ ನೆಕ್ಸಸ್‌ 5 ಸ್ಮಾರ್ಟ್‌ಫೋನಿರುವ ಪೇಜ್‌ನ್ನು ಪ್ರಿಂಟ್‌ ಸ್ಕ್ರೀನ್‌ ಮೂಲಕ ತೆಗದು ಫೋಟೋವನ್ನು ಟ್ವೀಟರ್‌ನ್ನು ಹಾಕಿದ್ದಾರೆ.

ಇಲ್ಲಿಯವರಗೆ ಲೀಕ್‌ ಆಗಿರುವ ಚಿತ್ರದಂತೆ ಈ ಸ್ಮಾರ್ಟ್‌ಫೋನ್‌ ಬಂದಿದ್ದು ಇದೇ ರೀತಿ ಇರುತ್ತದೆ ಮತ್ತು ನೆಕ್ಸಸ್‌ 5 ಬೆಲೆ ಪ್ಲೇ ಸ್ಟೋರ್‌ನಲ್ಲಿ ನಿಗದಿಯಾಗಿದಂತೆ ಇರುತ್ತದೆ ಎಂದು ಹೇಳಲಾಗಿದೆ. ಇದೇ 28ಕ್ಕೆ ಗೂಗಲ್‌ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಎಲ್‌ಜಿ ನೆಕ್ಸಸ್‌ 5 ಸ್ಮಾರ್ಟ್‌‌ಫೋನ್‌ ಈ ವಿಶೇಷತೆಗಳೊಂದಿಗೆ ಬರುವ ಸಾಧ್ಯತೆ ಇದೆ.
ವಿಶೇಷತೆ:
4.95 ಇಂಚಿನ ಐಪಿಎಸ್‌ ಎಲ್‌ಸಿಡಿ ಫುಲ್‌ ಎಚ್‌ಡಿ ಸ್ಕ್ರೀನ್‌
ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮರಾ

ಇದನ್ನೂ ಓದಿ: ಗ್ರಾಹಕರು ಯಾಕೆ ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ?

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ! ಸುದ್ದಿಯನ್ನು ಶೇರ್‌ ಮಾಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+