ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅಭಿಮಾನಿಗಳಿಗೆ ಈಗ ಗೂಗಲ್‌ನ ಹೊಸ ಸ್ಮಾರ್ಟ್‌ಫೋನ್‌ ನೆಕ್ಸಸ್‌ 5ರ ಮೇಲೆ ಕಣ್ಣು ಬಿದ್ದಿದೆ. ಮಾಹಿತಿಗಳ ಪ್ರಕಾರ ಅಕ್ಟೋಬರ್‌ 14 ರಂದು ಈ ಸ್ಮಾರ್ಟ್‌ಫೋನ್‌ನ್ನು‌ ಗೂಗಲ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಹೇಳಿಕೇಳಿ ಇದು ಗೂಗಲ್‌ ಸ್ಮಾರ್ಟ್‌ಫೋನ್‌,ಅಷ್ಟೇ ಅಲ್ಲದೇ ಮೊನ್ನೆಯಷ್ಟೇ 15 ವರ್ಷದ ಹುಟ್ಟುಹಬ್ಬವನ್ನು ಗೂಗಲ್‌ ಆಚರಿಸಿದೆ.ಹೀಗಾಗಿ ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ಹೇಗಿರುತ್ತದೆ ಅದರ ವಿಶೇಷತೆ ಬಗ್ಗೆ ಟೆಕ್‌ ಮಾಧ್ಯಮಗಳಲ್ಲಿ ಈಗ ಸಿಕ್ಕಾಪಟ್ಟೆ ವದಂತಿ ಹರಡುತ್ತಿದೆ. ಏನೇನು ವದಂತಿಗಳು ಹರಡುತ್ತಿದೆ,ನೆಕ್ಸಸ್‌ ಸ್ಮಾರ್ಟ್‌ಫೋನಿನ ವಿಶೇಷತೆ ಮತ್ತು ಗ್ರಾಹಕರು ಯಾಕೆ ಈ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ? ಎನ್ನುವುದಕ್ಕೆ ಇಲ್ಲಿ ವಿವರಣೆ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ಗಳು


ಗೂಗಲ್‌ ಎಲ್ಲಾ ಕಂಪೆನಿಯಂತೆ ನೆಕ್ಸಸ್‌ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ ತಯಾರಿಸುವುದಿಲ್ಲ.ನೆಕ್ಸಸ್‌ ಹಾರ್ಡ್‌ವೇರ್‌ನ್ನು ಒಂದು ಕಂಪೆನಿ ತಯಾರಿಸಿದರೆ ಸಾಫ್ಟ್‌ವೇರ್‌ ಭಾಗವನ್ನು ಗೂಗಲ್‌ ತಯಾರಿಸುತ್ತದೆ. ಇಲ್ಲಿಯವರಗೆ ನೆಕ್ಸಸ್‌ ಸರಣಿಯಲ್ಲಿ ನಾಲ್ಕು ಸ್ಮಾರ್ಟ್‌ಫೋನ್‌‌ಗಳು ಬಿಡುಗಡೆಯಾಗಿದೆ. ಎಚ್‌ಟಿಸಿ ಕಂಪೆನಿ ನೆಕ್ಸಸ್‌ ಒನ್‌, ನೆಕ್ಸಸ್‌ ಎಸ್‌ ಮತ್ತು ಗೆಲಾಕ್ಸಿ ನೆಕ್ಸಸ್‌ ಸ್ಮಾಟ್‌‌ಫೋನ್‌ ಸ್ಯಾಮ್‌ಸಂಗ್‌ನಲ್ಲಿ ತಯಾರಾದರೆ, ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ನ್ನು ಎಲ್‌ಜಿ ತಯಾರಿಸಿದೆ.

 ಗ್ರಾಹಕರು ಯಾಕೆ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ?

ಗ್ರಾಹಕರು ಯಾಕೆ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ?

ಗ್ರಾಹಕರು ಯಾಕೆ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ?


ಮುಖ್ಯ ಕಾರಣ ನೆಕ್ಸಸ್‌ ಸಾಧನಗಳನ್ನು ಆಂಡ್ರಾಯ್ಡ್‌ ಓಎಸ್‌ಗೆ ಬಹಳ ಬೇಗ ಅಪ್‌ಡೇಟ್‌ ಮಾಡಬಹುದು. ಈ ವರ್ಷ‌ ಬಿಡುಗಡೆಯಾದ ಕೆಲವು ಟಾಪ್‌ ಕಂಪೆನಿಗಳ ಕೆಲವು ಸ್ಮಾರ್ಟ್‌ಫೋನ್‌ಗಳು ಈಗಷ್ಟೇ ಹೊಸ ಜೆಲ್ಲಿ ಬೀನ್‌ 4.3ಗೆ ಅಪ್‌ಡೇಟ್‌ ಆಗುತ್ತಿದೆ. ಆದರೆ ನವೆಂಬರ್‌ 2011ರಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್‌ನ ಗೆಲಾಕ್ಸಿ ನೆಕ್ಸಸ್‌ ಸ್ಮಾರ್ಟ್‌ಫೋನ್‌ ನೀವು ಹೊಸ ಜೆಲ್ಲಿ ಬೀನ್‌ 4.3ಗೆ ಅಪ್‌ಡೇಟ್‌ ಮಾಡಬಹುದು.ಓಎಸ್‌ ಸುಲಭವಾಗಿ ಬೇಗ ಅಪ್‌ಡೇಟ್‌ ಆಗುವುದರ ಜೊತೆಗೆ ಗೂಗಲ್‌ ಉತ್ಪನ್ನ ಎನ್ನುವ ಕಾರಣಕ್ಕಾಗಿ ಆಂಡ್ರಾಯ್ಡ್ ಬಳಕೆದಾರರು ನೆಕ್ಸಸ್‌ ಸಾಧನಗಳನ್ನು ಖರೀದಿಸುತ್ತಾರೆ.

64 ಬಿಟ್‌ ಆರ್ಕಿಟೆಕ್ಚರ್

64 ಬಿಟ್‌ ಆರ್ಕಿಟೆಕ್ಚರ್

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ಗೂಗಲ್‌ ತನ್ನ ಪ್ರೊಸೆಸರ್‌ ಕಾರ್ಯ‌ಕ್ಷಮತೆಯನ್ನು ಹೆಚ್ಚಿಸಲು 64 ಬಿಟ್‌ ಆರ್ಕಿಟೆಕ್ಚರ್ ಹೊಂದಿರುವ ಪ್ರೊಸೆಸರ್‌ನ್ನು ನೆಕ್ಸಸ್‌ 5ರಲ್ಲಿ ಬಳಸಲಾಗುತ್ತದೆ ಎನ್ನುವ ಒಂದು ಸುದ್ದಿಯಿದೆ. ಹೊಸದಾಗಿ ಬಿಡುಗಡೆಯಾದ ಆಪಲ್‌ ಐಫೋನ್‌ 5 ಎಸ್‌ ಈಗಾಗಲೇ ಈ ಪ್ರೊಸೆಸರ್‌‌ ಬಂದಿದ್ದು ವಿಶ್ವದ ವೇಗದ ಸ್ಮಾರ್ಟ್‌ಫೋನ್‌ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಜೊತೆಗೆ ಸ್ಯಾಮ್‌ಸಂಗ್ ಸಹ 64 ಬಿಟ್‌ ಆರ್ಕಿಟೆಕ್ಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದೆ.ಹೀಗಾಗಿ ಗೂಗಲ್‌ ಸಹ ತಾನೇನು ಕಮ್ಮಿಯಿಲ್ಲ ಎನ್ನುವಂತೆ 64 ಬಿಟ್‌ ಆರ್ಕಿಟೆಕ್ಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆ.

 ಐದು ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌

ಐದು ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?

ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌ನಲ್ಲಿ ಈಗ ಆರು ಇಂಚಿನ ಸ್ಮಾರ್ಟ್‌ಫೋನ್‌ಗಳನ್ನು ಬೇರೆ ಬೇರೆ ಕಂಪೆನಿಗಳು ಬಿಡುಗಡೆ ಮಾಡುತ್ತಿದ್ದರೂ ಐದು ಇಂಚಿನ ಸ್ಮಾರ್ಟ್‌ಫೋನ್‌ಗಳೇ ಹೆಚ್ಚು ಬಿಕಾರಿಯಾಗುತ್ತಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ನೆಕ್ಸಸ್‌4 ಸ್ಮಾರ್ಟ್‌ಫೋನ್‌ 4.7 ಇಂಚಿನ ಸ್ಕ್ರೀನ್‌(1280x768 ಪಿಕ್ಸೆಲ್‌)ಹೊಂದಿತ್ತು.ಐದು ಇಂಚಿನ ಸ್ಮಾರ್ಟ್‌ಫೋನ್‌ ಹೆಚ್ಚು ಜನರು ಇಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಗೂಗಲ್‌ ಹೊಸ ಸ್ಮಾರ್ಟ್‌ಫೋನನ್ನು‌ ಐದು ಇಂಚಿನ ಫುಲ್‌ ಎಚ್‌ಡಿ(1080x1920 ಪಿಕ್ಸೆಲ್‌)ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

 13 ಎಂಪಿ ಕ್ಯಾಮೆರಾ

13 ಎಂಪಿ ಕ್ಯಾಮೆರಾ

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ಕ್ಯಾಮೆರಾದಲ್ಲೂ ಅಷ್ಟೇ ಆಂಡ್ರಾಯ್ಡ್‌ನಲ್ಲಿ ಸ್ಯಾಮ್‌ಸಂಗ್‌16 ಎಂಪಿ, ಸೋನಿ 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌‌ಫೋನ್‌‌ ಬಿಡುಗಡೆ ಮಾಡಿದೆ. ಆದರೆ ಗೂಗಲ್‌ ಈ ಕಂಪೆನಿಗಳಂತೆ ಹೆಚ್ಚಿನ ಮೆಗಾಪಿಕ್ಸೆಲ್‌ ಕ್ಯಾಮೆರಾ ಬಿಡುಗಡೆ ಮಾಡುದಿಲ್ಲ.ಬದಲಾಗಿ
13 ಎಂಪಿ ಕ್ಯಾಮೆರಾವನ್ನು ಬಿಡುಗಡೆ ಮಾಡುಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಮುಂದುಗಡೆ ಎರಡು ಎಂಪಿ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದೆ. ನೆಕ್ಸಸ್‌4 ರಲ್ಲಿ ಹಿಂದುಗಡೆ 8 ಎಂಪಿ ಮುಂದುಗಡೆ 1.3 ಎಂಪಿ ಕ್ಯಾಮೆರಾವನ್ನು ಗೂಗಲ್‌ ನೀಡಿತ್ತು

 3GB ರ್‍ಯಾಮ್‌

3GB ರ್‍ಯಾಮ್‌

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌3 3 GB ರ್‍ಯಾಮ್‌ನೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ ಗೂಗಲ್‌ ಸಹ ಮಲ್ಟಿಟಾಸ್ಕಿಂಗ್‌ಗಾಗಿ 3GB ರ್‍ಯಾಮ್‌ ನೀಡುವ ಸಾಧ್ಯತೆಯಿದೆ. ನೆಕ್ಸಸ್‌4 2 GB ರ್‍ಯಾಮ್‌ನಲ್ಲಿ ಬಿಡುಗಡೆಯಾಗಿತ್ತು.

 ಕಿಟ್‌ಕ್ಯಾಟ್‌ ಓಎಸ್‌ನ ಹೊಸ ಸ್ಮಾರ್ಟ್‌ಫೋನ್‌

ಕಿಟ್‌ಕ್ಯಾಟ್‌ ಓಎಸ್‌ನ ಹೊಸ ಸ್ಮಾರ್ಟ್‌ಫೋನ್‌

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ಗೂಗಲ್‌ ತನ್ನ ಆಪ್‌ಡೇಟ್‌‌ ಓಎಸ್‌ ಅಥವಾ ಹೊಸ ಆಂಡ್ರಾಯ್ಡ್‌‌ ಓಎಸ್‌ ಬಿಡುಗಡೆ ಮಾಡುವಾಗ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿಕೊಂಡೇ ಬಂದಿದೆ. ಈ ಹಿಂದೆ ಆಂಡ್ರಾಯ್ಡ್‌ ಜೆಲ್ಲಿ ಬೀನ್‌ 4.3 ಅಪ್‌ಡೇಟ್‌ ಆದಾಗ ಹೊಸ ನೆಕ್ಸಸ್‌ 7 ಟ್ಯಾಬ್ಲೆಟ್‌ 2ನ್ನು ಬಿಡುಗಡೆ ಮಾಡಿತ್ತು.ಹೀಗಾಗಿ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆಯಾದ ಸಂದರ್ಭದಲ್ಲೇ ನೆಕ್ಸಸ್‌ 5 ಸಹ ಬಿಡುಗಡೆಯಾಗಲಿದೆ.

 ಬ್ಯಾಟರಿ

ಬ್ಯಾಟರಿ

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ಗೂಗಲ್‌ ತನ್ನ ಎಲ್‌ಜಿ ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ಗೆ 2100 mAh ಬ್ಯಾಟರಿಯನ್ನು ನೀಡಿತ್ತು. ಈ ಸ್ಮಾರ್ಟ್‌ಫೋನ್‌ ಬೆಲೆ ದುಬಾರಿಯಾಗಿದ್ದರೂ ಬ್ಯಾಟರಿ ಅಷ್ಟೇನು ಶಕ್ತಿಶಾಲಿಯಿಲ್ಲ ಎನ್ನುವ ದೂರನ್ನು ಬಹಳಷ್ಟು ಗ್ರಾಹಕರು ಹೇಳಿಕೊಂಡಿದ್ದರು. ಹೀಗಾಗಿ ಗೂಗಲ್‌ನ ಹೊಸ ಸ್ಮಾರ್ಟ್‌ಫೋನ್‌ 2,700mAh ಬ್ಯಾಟರಿಯಲ್ಲಿ ಬರುವ ಸಾಧ್ಯತೆಯಿದೆ.

 ಬೆಲೆ:

ಬೆಲೆ:

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?


ನೋಕಿಯಾವನ್ನು ಮೈಕ್ರೋಸಾಫ್ಟ್‌ ಖರೀದಿಸುವ ಮೂಲಕ ಗೂಗಲ್‌ಗೆ, ಓಎಸ್‌ ಮತ್ತು ಸ್ಮಾರ್ಟ್‌ಫೋನ್‌ನಲ್ಲೂ ತಾನು ಸ್ಪರ್ಧೆ‌ಯಲ್ಲಿದ್ದೇನೆ ಎನ್ನುವ ಎಚ್ಚರಿಕೆ ನೀಡಿದೆ. ಹೀಗಾಗಿ ತನ್ನ ಬ್ಯ್ರಾಂಡ್‌ ಉಳಿಸಲು ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಈ ಹಿಂದಿನ ಮಾರುಕಟ್ಟೆಯ ತಂತ್ರದ ಬದಲಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಲ್ಲಾ ದೇಶಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot