Subscribe to Gizbot

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ

Posted By:

ಗೂಗಲ್‌ನ ನೆಕ್ಸಸ್‌ ಸ್ಮಾರ್ಟ್‌‌ಫೋನ್‌‌ ಮತ್ತು ಟ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಈಗ ನೆಕ್ಸಸ್‌ 5 ಮತ್ತು ನೆಕ್ಸಸ್‌ 7 ಟ್ಯಾಬ್ಲೆಟ್‌ 2 ಗೂಗಲ್‌ ಪ್ಲೇ ಸ್ಟೋರ್‌‌ನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.

ಹೊಸದಾಗಿ ಬಿಡುಗಡೆಯಾಗಿರುವ ಕಿಟ್‌ಕ್ಯಾಟ್‌ ಓಎಸ್‌ನ್ನು ಹೊಂದಿರುವ 16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ 28,999 ರೂಪಾಯಿ, 32GB ಆಂತರಿಕ ಮೆಮರಿಯ ಸ್ಮಾರ್ಟ್‌‌‌ಫೋನ್‌ಗೆ 32,999 ಬೆಲೆಯನ್ನು ಗೂಗಲ್‌ ನಿಗದಿ ಮಾಡಿದೆ. ಇನ್ನೂ ವೈಫೈ ಇರುವ 16GB ಆಂತರಿಕ ಮೆಮೊರಿಯ ನೆಕ್ಸಸ್‌ 7 ಟ್ಯಾಬ್ಲೆಟ್‌ಗೆ 20,999 ರೂಪಾಯಿ,32GB ಆಂತರಿಕ ಮಮೊರಿಯ ಟ್ಯಾಬ್ಲೆಟ್‌ಗೆ 23,999 ರೂಪಾಯಿಯನ್ನು ಗೂಗಲ್‌ ನಿಗದಿ ಮಾಡಿದೆ.ಇನ್ನೂ 32GB ಸೆಲ್ಯುಲರ್‌ ಸಂಪರ್ಕ ಹೊಂದಿರುವ ಟ್ಯಾಬ್ಲೆಟ್‌ 27,999 ರೂಪಾಯಿ ಬೆಲೆಯಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಗೂಗಲ್‌ ಭಾರತದ ಮಾರುಕಟ್ಟೆಗೆ ನೆಕ್ಸಸ್‌ ಸರಣಿಯ ಯಾವುದೇ ಹೊಸ ಸ್ಮಾರ್ಟ್‌ಫೋನ್‌‌ ಮತ್ತು ಟ್ಯಾಬ್ಲೆಟ್‌ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಬಿಡುಗಡೆ ಮಾಡಿರುವ ಉದಾಹರಣೆ ಇಲ್ಲ.ಈ ಹಿಂದೆ ಬಿಡುಗಡೆಯಾದ ನೆಕ್ಸಸ್‌ 7 ಟ್ಯಾಬ್ಲೆಟ್‌ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾದ 9 ತಿಂಗಳ ಬಳಿಕ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.

ನೆಕ್ಸಸ್‌ 5 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ

ಆಪಲ್‌ ಈಗಾಗಲೇ ಐಫೋನ್‌ 5 ಎಸ್‌ ಮತ್ತು 5 ಸಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗ ಹೊಸ ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ ಗೂಗಲ್‌ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಗೂಗಲ್‌ ಕಡಿಮೆ ಬೆಲೆಯ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಮೋಟೋ ಜಿ ಸ್ಮಾರ್ಟ್‌ಫೋನ್‌ನ್ನು ಜನವರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನೆಕ್ಸಸ್‌ 5 ಮತ್ತು ನೆಕ್ಸಸ್‌ 7 ಟ್ಯಾಬ್ಲೆಟ್‌ ಬೇಗನೆ ಬಿಡುಗಡೆಗೆ ಇದು ಸಹ ಒಂದು ಕಾರಣ ಎಂದು ಹೇಳಲಾಗುತ್ತಿದೆ.ಬೆಂಗಳೂರು ಮತ್ತು ನೋಯ್ಡಾದಲ್ಲಿ ಆರಂಭವಾಗಿರುವ ಆಂಡ್ರಾಯ್ಡ್‌ಲ್ಯಾಂಡ್‌ನಲ್ಲಿ ಈ ಹೊಸ ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ನ್ನು ಗ್ರಾಹಕರು ಖರೀದಿಸಬಹುದು

ನೆಕ್ಸಸ್‌ 7 ಟ್ಯಾಬ್ಲೆಟ್‌ 2
ವಿಶೇಷತೆ:
7 ಇಂಚಿನ ಎಚ್‌ಡಿ ಐಪಿಎಸ್‌ಸ್ಕ್ರೀನ್‌(1920x1200 ಪಿಕ್ಸೆಲ್)
ಆಂಡ್ರಾಯ್ಡ್‌ 4.3 ಜೆಲ್ಲಿಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16/32GB ಆಂತರಿಕ ಮೆಮೋರಿ
2GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,ಜಿಪಿಎಸ್‌
3950 mAh ಬ್ಯಾಟರಿ


ಎಲ್‌ಜಿ ನೆಕ್ಸಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2,300 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot