ಆಂಡ್ರಾಯ್ಡ್‌ ಹೊಸ ಕಿಟ್‌ಕ್ಯಾಟ್‌ ಓಎಸ್‌ನಲ್ಲಿರುವ 11 ಹೊಸ ವಿಶೇಷತೆಗಳು

By Ashwath
|

ಗೂಗಲ್‌ ತನ್ನ ಹೊಸ ಓಎಸ್‌ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ 4.4 ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಜೆಲ್ಲಿ ಬೀನ್‌ ಓಎಸ್‌ನಲ್ಲಿರುವ ವಿಶೇಷತೆಗಳಿಗಿಂತಲೂ ಮತ್ತಷ್ಟು ಹೊಸ ವಿಶೇಷತೆಗಳನ್ನು ಸೇರಿಸಿ ಹೊಸ ಓಎಸ್‌ನ್ನು ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್‌ ಮುಖ್ಯಸ್ಥ ಸುಂದರ್‌ ಪಿಚಾಯ್‌ ಸೆಪ್ಟೆಂಬರ್‌ನಲ್ಲಿ ಕಿಟ್‌ಕ್ಯಾಟ್‌‌ ಓಎಸ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದರು.ಹೀಗಾಗಿ ಇಲ್ಲಿ ಹೊಸ ಓಎಸ್‌ನಲ್ಲಿರುವ ಹೊಸ ವಿಶೇಷತೆಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

#1

#1


ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಸಾಧನದಲ್ಲಿ ಧ್ವನಿಯಾಧರಿತ ಸರ್ಚ್‌ ಇಂಜಿನ್‌ ಗೂಗಲ್‌ ನೌ ಬಳಕೆಯನ್ನು ಗೂಗಲ್‌ ಮತ್ತಷ್ಟು ಸುಲಭಗೊಳಿಸಿದೆ. ಈಗ ಮೆಸೇಜ್‌ ಕಳುಹಿಸುವಾಗ,ಸಂಗೀತಾ ಕೇಳುತ್ತಿರುವಾಗಲೂ 'Ok Google' ಎಂದು ಹೇಳಿದರೆ ಸಾಕು ಗೂಗಲ್‌ ನೌ ಕೂಡಲೇ ಸ್ಕ್ರೀನ್‌ಲ್ಲಿ ಕಾಣುತ್ತದೆ.

#2

#2


ಕಿಟ್‌ಕ್ಯಾಟ್‌ ಓಎಸ್‌ ಸಾಧನದಲ್ಲಿ ಪುಸ್ತಕವನ್ನು ಓದುತ್ತೀರಿ, ಗೇಮ್ಸ್‌ ಆಡುತ್ತೀರಿ, ಅಥವಾ ಚಲನಚಿತ್ರ ಒಂದೇ ಸಮಯದಲ್ಲಿ ವೀಕ್ಷಿಸುತ್ತಿರುತ್ತೀರಿ.ಇದರಲ್ಲಿ ಹೊಸ ಮೋಡ್‌ ಇದ್ದು ಈ ಚಟುವಟಿಕೆಯನ್ನು immersive ಮೋಡ್‌ ಹಾಕುವ ಮೂಲಕ ಬೇಡಾವಾದ ಚಟವಟಿಕೆಯನ್ನು ಕಾಣದಂತೆ ಮಾಡಿ ಬೇಕಾಗಿರುವ ಒಂದೇ ಕ್ರೀಯೆಯನ್ನು ನೋಡಬಹುದು.

#3

#3


ಇಲ್ಲಿವರೆಗಿನ ಆಂಡ್ರಾಯ್ಡ್‌ ಓಎಸ್‌ನದ್ದಲ್ಲಿ ಮಲ್ಟಿ ಟಾಸ್ಕಿಂಗ್‌ಗಿಂತಲೂ ಹೊಸ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಮತ್ತಷ್ಟು ವೇಗವಾಗಿ ಮಾಡಬಹುದು. ಮೆಸೇಜ್‌ ಚಾಟ್‌,ವಿಡಿಯೋ ಬ್ರೌಸಿಂಗ್‌, ಆಪ್‌ಗಳನ್ನು ವೇಗವಾಗಿ ಡೌನ್‌ಲೋಡ್‌ ಮಾಡುವಾಗ ಹ್ಯಾಂಗ್‌ ಆಗದೇ ಸುಲಭವಾಗಿ ಕೆಲಸ ಮಾಡಬಹುದು.

#4

#4


ಹೊಸ ಆಪ್‌ನಲ್ಲಿ ಅತೀ ಹೆಚ್ಚು ಸಮಯ ಮಾತನಾಡಿದ ಫೋನ್‌ ನಂಬರ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಅದ್ಯತಾ ಅನುಸರ ತೋರಿಸುತ್ತದೆ. ಅಷ್ಟೇ ಅಲ್ಲದೇ ಯಾವುದೋ ಪ್ರದೇಶಕ್ಕೆ ಹೊದಾಗ ಗೂಗಲ್‌ ಫೋನ್‌ ಆಪ್ಸ್‌ ಡೊಮೈನ್‌ನಲ್ಲಿ ಸೇವ್‌ ಆಗಿರುವ ಪರಿಚಯಸ್ಥರ ನಂಬರ್‌ಗಳನ್ನು ಗೂಗಲ್‌ ಮ್ಯಾಪ್‌ ಮೂಲಕ ಸುಲಭವಾಗಿ ಪತ್ತೆ ಮಾಡಿ ಸ್ಕ್ರೀನ್‌ಲ್ಲಿ ತೋರಿಸುವಂತೆ ಹೊಸ ವಿಶೇಷತೆಯನ್ನು ಸೇರಿಸಲಾಗಿದೆ.

#5

#5


ಟೈಪ್‌ ಮಾಡುವಾಗ ಭಾವನೆಗಳನ್ನು ಸೂಚಿಸಲು ಗೂಗಲ್‌ ಸ್ಮೈಲಿಗಳೊಂದಿಗೆ ಜಪಾನಿನ ಇಮೊಜಿ( Emoji)ಯನ್ನು ಸೇರಿಸಿದ್ದು. ಇಮೊಜಿ ಚಿತ್ರದ ಮೂಲಕ ಕಡಿಮೆ ಪದದಲ್ಲಿ ಬೇಕಾದ ವಿಚಾರ,ಭಾವನೆಯನ್ನು ಸೇರಿಸಿ ವ್ಯಕ್ತಪಡಿಸಬಹುದು.

#6

#6


ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಸಾಧನದ ಮೂಲಕ ಗೂಗಲ್‌‌ ಕ್ಲೌಡ್‌ ಪ್ರಿಂಟ್‌ ಮೂಲಕ ದೂರದಿಂದಲೇ ಫೋಟೋ, ದಾಖಲೆ ವೆಬ್‌ ಪುಟಗಳನ್ನು ಪ್ರಿಂಟ್‌ ತೆಗೆಯಬಹುದಾಗಿದೆ. ಗೂಗಲ್‌‌ ಕ್ಲೌಡ್‌ ಪ್ರಿಂಟ್‌ ಸಹಾಯದಿಂದ ಎಚ್‌ಪಿ ಇ ಪ್ರಿಂಟ್‌‌ ಅಥವಾ ಇನ್ಯಾವುದೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಪ್ರಿಂಟರ್‌ ಆಪ್‌ ಮೂಲಕ ಪ್ರಿಂಟ್‌ ತೆಗೆಯಬಹುದಾಗಿದೆ.

# 7

# 7


ಗೂಗಲ್‌ ಹೊಸದಾಗಿ ಖರೀದಿಸಿದ QuickOffice document editor ನಲ್ಲಿ ವರ್ಡ್‌,ಎಕ್ಸೆಲ್‌,ಪವರ್‌ಪಾಯಿಂಟ್‌ ಕ್ರಿಯೆಟ್‌ ಮಾಡುವುದರ ಜೊತೆಗೆ ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಮಾಡಬಹುದಾಗಿದೆ. ಜೊತಗೆ ಕೂಡಲೇ ಯಾವುದೇ ಫೈಲ್‌ಗಳನ್ನು ಆರಿಸಿ.ಕಳುಹಿಸ ಬೇಕಾದವರಿಗೆ ಬೇಕಾದ ಫಾರ್ಮೆಟ್‌ನಲ್ಲಿ ಕಳುಹಿಸಬಹುದಾಗಿದೆ.

#8

#8


ಕಿಟ್‌ಕ್ಯಾಟ್‌ ಓಎಸ್ ಹೊಂದಿರುವ ಸಾಧನಗಳಿವೆ ಕ್ರೋಮ್‌ಕಾಸ್ಟ್‌‌ ಕನೆಕ್ಟ್‌ ಮಾಡುವ ಮೂಲಕ ಆನ್‌ಲೈನ್‌ ವಿಡಿಯೋ, ಹೆಚ್‌ಡಿ ಟವಿಗಳನ್ನು ನೋಡಬಹುದಾಗಿದೆ.

# 9

# 9

512MB ರ್‍ಯಾಮ್‌ ಅಥವಾ ಇದಕ್ಕಿಂತಲೂ ಕಡಿಮೆ ರ್‍ಯಾಮ್‌ ಹೊಂದಿರುವ ಸಾಧನದಲ್ಲೂ ಈ ಓಎಸ್‌ನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.ಹೀಗಾಗಿ ಈಗಾಗಲೇ ಕಡಿಮೆ ಬೆಲೆಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿಕೊಂಡು ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗುತ್ತಿರುವ ಮೈಕ್ರೋಮ್ಯಾಕ್ಸ್‌,ಕಾರ್ಬನ್‌... ಕಂಪೆನಿಗಳು ಕಡಿಮೆ ಬೆಲೆಯಲ್ಲೇ ಗುಣಮಟ್ಟದ ಫೋನ್‌ಗಳನ್ನು ತಯಾರಿಸಲು ಅನುಕೂಲವಾಗಲಿದೆ.

#10

#10


ಕಿಟ್‌ಕ್ಯಾಟ್ ಓಎಸ್‌ ಹೊಂದಿರುವ ಸಾಧನದಲ್ಲಿ ಏನೇನು ಕಾರ್ಯ ಚಟುವಟಿಕೆ ಮಾಡುತ್ತಿರೋ ಅದೆಲ್ಲವನ್ನು ಇನ್ನೂ ವಿಡಿಯೋದಲ್ಲಿ ರೆಕಾರ್ಡ್‌ ಮಾಡಬಹುದಾಗಿದೆ. ಹೊಸ ವಿಶೇಷತೆ ಸ್ಕ್ರೀನ್‌ ರೆಕಾರ್ಡಿಂಗ್‌ ಸೇರಿಸಿದ್ದು, ಎಂಪಿ4 ಫೈಲ್‌ನಲ್ಲಿ ಸೇವ್‌ ಮಾಡಬಹುದಾಗಿದೆ. ವಿಶೇಷವಾಗಿ ಸ್ಮಾರ್ಟ್‌ಫೋನ್‌ ಟಿಪ್ಸ್‌, ಟ್ಯುಟೋರಿಯಲ್‌‌,ಮಾರ್ಕೆಟಿಂಗ್‌‌ ವಿಡಿಯೋಗಳನ್ನು ರೂಪಿಸುವವರಿಗೆ ಈ ಹೊಸ ವಿಶೇಷತೆ ನೆರವಾಗಲಿದೆ.

#11

#11

ಹೊಸ ಓಎಸ್‌ನಲ್ಲಿ ಸ್ಟೆಪ್‌ ಡಿಟೆಕ್ಟರ್‌ ಮತ್ತು ಸ್ಟೆಪ್‌ ಕೌಂಟರ್‌ ಎರಡು ಹೊಸ ಸೆನ್ಸರ್‌ ವಿಶೇಷತೆಯನ್ನು ಗೂಗಲ್‌ ಪರಿಚಯಿಸಿದೆ. ಈ ಸೆನ್ಸರ್‌ನಲ್ಲಿ ದಾಖಲಾಗುವ ಮಾಹಿತಿ ಹೊಸ ಹಾರ್ಡ್‌ವೇರ್‌ ಸಾಧನವನ್ನು ಕನೆಕ್ಟ್‌ ಮಾಡಬೇಕು.


ಸ್ಟೆಪ್‌ ಡಿಟೆಕ್ಟರ್‌ನಲ್ಲಿ ಮೆಟ್ಟಿಲು ಹತ್ತಲು ಎಷ್ಟು ಪ್ರಮಾಣದ ದೇಹದ ಕ್ಯಾಲೋರಿ ಖರ್ಚಾಯಿತು? ನಡೆಯುವ ವೇಗ ಎಷ್ಟು? ಈ ಎಲ್ಲಾ ಮಾಹಿತಿಗಳು ದಾಖಲಾಗುತ್ತವೆ.
ಸ್ಟೆಪ್‌ ಕೌಂಟರ್‌ನಲ್ಲಿ ಬಳಕೆದಾರ ಮೆಟ್ಟಿಲು ಹತ್ತಲು ಎಷ್ಟು ಎಷ್ಟು ನಿಮಷ ತೆಗೆದುಕೊಂಡ ಎನ್ನುವ ಮಾಹಿತಿ ದಾಖಲಾಗುತ್ತದೆ.

#12

#12


ಈಗಾಗಲೇ ಹೊಸದಾಗಿ ಬಿಡುಗಡೆಯಾಗಿರುವ ನೆಕ್ಸಸ್‌5 ಸ್ಮಾರ್ಟ್‌ಫೋನ್‌ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಿದೆ.ಮುಂದಿನ ಕೆಲವು ದಿನದೊಳಗೆ,ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ ನೆಕ್ಸಸ್‌ 10 ಟ್ಯಾಬ್ಲೆಟ್‌,ನೆಕ್ಸಸ್‌ 7 ಟ್ಯಾಬ್ಲೆಟ್‌,ಸ್ಯಾಮ್‌ಸಂಗ್‌ ಎಸ್‌ 4,ಎಚ್‌ಟಿಸಿ 1 ಸ್ಮಾರ್ಟ್‌ಫೋನ್‌ ಹೊಂದಿರುವ ಬಳಕೆದಾರು ಜೆಲ್ಲಿ ಬೀನ್‌ನಿಂದ ಹೊಸ ಓಎಸ್‌ಗೆ ಆಪ್‌ಡೇಟ್‌ ಮಾಡವ ಅವಕಾಶವನ್ನು ಪಡೆಯಲಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X