Home
ಮೊಬೈಲ್

ಮಕ್ಕಳ ಸ್ಮಾರ್ಟ್‌ಫೋನ್ ಬಿಡುಗಡೆ; 108MP ಮುಖ್ಯ ಕ್ಯಾಮೆರಾ.. 50MP ಸೆಲ್ಫಿ ಶೂಟರ್.. ಕಡಿಮೆ ಬೆಲೆ

ಸ್ಮಾರ್ಟ್​ಫೋನ್ (Smartphone) ಇಂದು ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ನಮ್ಮ ದಿನನಿತ್ಯದ ಹಲವು ಕೆಲಸಗಳನ್ನು ಈಗ ಮೊಬೈಲ್ ಫೋನ್ ಮೂಲಕವೇ ಮಾಡಲಾಗುತ್ತಿದೆ. ಮಕ್ಕಳಿಗೂ ಸ್ಮಾರ್ಟ್‌ಫೋನ್ ಅಗತ್ಯವಾಗಿದೆ. ಹೌದು, ಈ ಅಗತ್ಯವನ್ನು ಅರ್ಥಮಾಡಿಕೊಂಡು, ಪ್ರಸಿದ್ಧ ಟೆಕ್ ಕಂಪನಿ ಎಚ್‌ಎಂಡಿ (HMD) ಕಿಡ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಎಚ್‌ಎಂಡಿ ಫ್ಯೂಷನ್ X1 (HMD Fusion X1) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬನ್ನಿ, ಈ ಮಕ್ಕಳ ಸ್ಮಾರ್ಟ್‌ಫೋನ್‌ನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಮಾರ್ಟ್​ಫೋನ್ ಪ್ರತಿಯೊಬ್ಬರ ಮನೆಯಲ್ಲಿ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಅಗತ್ಯವಾಗಿದೆ ಎಂದರೆ ಬಹುಶಃ ತಪ್ಪಾಗಲಾರದು. ಮೊದಲು ವಯಸ್ಕರು ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದರು. ಆದರೆ, ಪ್ರಸ್ತುತ ಮಕ್ಕಳು ಸಹ ಆನ್‌ಲೈನ್ ತರಗತಿಗಳು ಮತ್ತು ಇತರೆ ಚಟುವಟಿಕೆಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ, ಮನೆಯಿಂದ ಹೊರಗೆ ಹೋಗುವ ಮಕ್ಕಳಿಗೆ ಫೋನ್ ನೀಡಲೇಬೇಕು. ಈ ಅಗತ್ಯವನ್ನು ಅರ್ಥಮಾಡಿಕೊಂಡು, ಎಚ್‌ಎಂಡಿ ಕಂಪನಿಯು MWC 2025 ರಲ್ಲಿ ಕಿಡ್ಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.

ಮಕ್ಕಳ ಫೋನ್! 108MP ಮುಖ್ಯ ಕ್ಯಾಮೆರಾ, 50MP ಸೆಲ್ಫಿ ಶೂಟರ್; ಬೆಲೆ ಎಷ್ಟು?

ನೂತನ ಮಕ್ಕಳ ಫೋನನ್ನು ಹೆಚ್‌ಎಂಡಿ ಫ್ಯೂಷನ್ X1 ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿದೆ. ಈ ಮೊಬೈಲ್‌ನಲ್ಲಿ ಅಂತರ್ನಿರ್ಮಿತ ಆಪರೇಟಿಂಗ್ ಸಿಸ್ಟಂ ಮಟ್ಟದ ಪೋಷಕರ ನಿಯಂತ್ರಣಗಳಿವೆ. ಇದರ ಮೂಲಕ ಪೋಷಕರು ತಮ್ಮ ಮಕ್ಕಳ ಫೋನ್‌ಗಳನ್ನು ನಿಯಂತ್ರಿಸಬಹುದು. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.56 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್ ಮತ್ತು 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಸೋಶಿಯಲ್ ಮೀಡಿಯಾಗಳ ಮೇಲೆ ನಿಯಂತ್ರಣ

ಎಚ್‌ಎಂಡಿ ಫ್ಯೂಷನ್ X1 ಮೊಬೈಲ್ ಗ್ರಾಹಕೀಯಗೊಳಿಸಬಹುದಾದ ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್ ಪ್ರವೇಶದೊಂದಿಗೆ ಬರುತ್ತದೆ. ಇವುಗಳ ಮಿತಿಗಳನ್ನು ಪೋಷಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಹೊಂದಿಸಬಹುದು. ಸೋಶಿಯಲ್ ಮೀಡಿಯಾ, ಇಂಟರ್ನೆಟ್ ಬ್ರೌಸಿಂಗ್ ಮತ್ತು ಡಿಸ್ಪ್ಲೇ ಸಮಯದ ಮೇಲೆ ಮಿತಿಗಳನ್ನು ಹೊಂದಿಸಬಹುದು. ತುರ್ತು SOS ಕರೆ, ಕಡಿಮೆ ಬ್ಯಾಟರಿ ಅಲರ್ಟ್ ಮತ್ತು ಸ್ಥಳ ಟ್ರ್ಯಾಕಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ, ಈ ಫೋನ್ ಪೋಷಕರಿಗೆ ಫೋನಿಗೆ ರಿಮೋಟ್ ಸಾಧನ ಪ್ರವೇಶವನ್ನು ಸಹ ನೀಡುತ್ತದೆ.

ತಮ್ಮ ಫೋನಿನಿಂದಲೇ ಕಂಟ್ರೋಲ್ ಮಾಡಬಹುದು

ಎಚ್‌ಎಂಡಿ ಫ್ಯೂಷನ್ X1 ಫೋನ್ 'ಸ್ಕೂಲ್ ಮೋಡ್' ಹೊಂದಿದೆ. ಇದನ್ನು ಸಕ್ರಿಯಗೊಳಿಸಿದಾಗ ಫೋನಿನಲ್ಲಿರುವ ಆಪ್‌ಗಳು ಮತ್ತು ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಹಾಗೆಯೇ ಮಕ್ಕಳ ಗಮನ ಬೇರೆಡೆ ಸೆಳೆಯುವುದನ್ನು ತಡೆಯುತ್ತದೆ. ಈ ಫೋನಿನಲ್ಲಿ ಕುಟುಂಬ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಸುರಕ್ಷಿತ ವಲಯಗಳನ್ನು ಗುರುತಿಸಬಹುದು. ವಿಶೇಷವೆಂದರೆ, ಈ ಎಲ್ಲಾ ಸೆಟ್ಟಿಂಗ್‌ಗಳು ಮತ್ತು ಮೋಡ್‌ಗಳನ್ನು ಪ್ರವೇಶಿಸಲು, ಫೋನಿನ ಅಗತ್ಯವಿಲ್ಲ. ಬದಲಿಗೆ ಪೋಷಕರು ತಮ್ಮ ಫೋನಿನಿಂದಲೇ ಕಂಟ್ರೋಲ್ ಮಾಡಬಹುದು.

ಈ ಸುದ್ದಿ ಓದಿದ್ದೀರಾ?: 4000 ಉಳಿತಾಯ.. 50MP ಕ್ಯಾಮೆರಾ, 5000mAh ಬ್ಯಾಟರಿ.. ಈ Motorola ಫೋನಿಗೆ ಭರ್ಜರಿ ಆಫರ್‌

ಎಚ್‌ಎಂಡಿ ಫ್ಯೂಷನ್ X1 ಬೆಲೆ ಮತ್ತು ಲಭ್ಯತೆ

ಎಚ್‌ಎಂಡಿ ಫ್ಯೂಷನ್ X1 ಮೊಬೈಲ್ 25,185 ರೂ. (USD 288) ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಮೇ ತಿಂಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಮಕ್ಕಳ ಫೋನ್! 108MP ಮುಖ್ಯ ಕ್ಯಾಮೆರಾ, 50MP ಸೆಲ್ಫಿ ಶೂಟರ್; ಬೆಲೆ ಎಷ್ಟು?

ಎಚ್‌ಎಂಡಿ ಫ್ಯೂಷನ್ X1 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಎಚ್‌ಎಂಡಿ ಫ್ಯೂಷನ್ X1 ಸ್ಮಾರ್ಟ್‌ಫೋನ್ 6.56 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ದರ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೆಚ್‌ಎಂಡಿ ಫ್ಯೂಷನ್ X1 ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಮಕ್ಕಳ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 2 ವರ್ಷಗಳ ಓಎಸ್ ಅಪ್ಡೇಟ್ ಮತ್ತು 3 ವರ್ಷಗಳ ಭದ್ರತಾ ನವೀಕರಣದೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್

HMD ಫ್ಯೂಷನ್ X1 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ವಿಶೇಷವೆಂದರೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಎಚ್‌ಎಂಡಿ ಫ್ಯೂಷನ್ X1 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
HMD Fusion X1 with focused at kids safety Smartphone Launched : check price, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+