ಕಡಿಮೆ ಬೆಲೆಗೆ ಉತ್ತಮ 4G VoLTE ಸಪೋರ್ಟ್ ಪೋನ್ ಹಾನರ್ ಬಿ 2
ಚೀನಾ ಮೂಲದ ಹಾನರ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಫೋನ್ ಬಿಡುಗಡೆ ಮಾಡಿದೆ. ರೂ.7,499ಗೆ ಲಭ್ಯವಿದೆ.
ಚೀನಾ ಮೂಲದ ಹಾನರ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ರೂ.7,499ಗೆ ಲಭ್ಯವಿದ್ದು, ಈ ಪೋನಿಗೆ ಹಾನರ್ ಬಿ 2 ಎಂದು ಹೆಸರಿಡಲಾಗಿದೆ. ಈ ಹಿಂದೆ ಮಾರುಕಟ್ಟೆಗೆ ಬಂದಿದ್ದ ಹಾನರ್ ಬಿ ಫೋನಿನ ಮುಂದಿನ ಅವತರಣಿಕೆಯಾಗಿದೆ.

ಓದಿರಿ: ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!
ಹಾನರ್ ಬಿ 2 ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷತೆ ಎಂದರೆ ಫೋನಿನ ಹಿಂಬದಿ ಇರುವ ಕ್ಯಾಮೆರಾ ಸುತ್ತ ಎಲ್‌ಇಡಿ ಲೈಟ್ ನೀಡಲಾಗಿದ್ದು, ಇದು ಒಂದೊಂದು ನೋಟಿಫಿಕೆಷನ್‌ಗೆ ಒಂದೊಂದು ಬಣ್ಣದಲ್ಲಿ ಬೆಳಗಲಿದೆ. ಈ ಹಿನ್ನಲೆಯಲ್ಲಿ ಈ ಫೋನಿನ ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಓದಿರಿ: ಯೂಟೂಬ್‌ನಲ್ಲಿ ಹೆಚ್ಚು ವಿಡಿಯೋ ನೋಡುವವರಿಗಾಗಿ...!!!

4.5 ಇಂಚಿನ ಡಿಸ್‌ಪ್ಲೇ:
ಹಾನರ್ ಬಿ 2 ಬಜೆಟ್ ಸ್ಮಾರ್ಟ್‌ಫೋನಾಗಿರುವುದರಿಂದ 4.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 480×854 p ಗುಣಮಟ್ಟದಿಂದ ಕೂಡಿದೆ ಎನ್ನಲಾಗಿದೆ. ಈ ಫೋನ್ ಆಂಡ್ರಾಯ್ಡ್ 5.1ನಲ್ಲಿ ಕಾರ್ಯನಿರ್ವಹಿಸಲಿದೆ.

5 MP ಕ್ಯಾಮೆರಾ:
ಹಾನರ್ ಬಿ 2 ಬಜೆಟ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2 MP ಕ್ಯಾಮೆರಾವನ್ನು ನೀಡಿದೆ. ಅಲ್ಲದೇ ಡ್ಯುಯಲ್ ಟೋನ್ ಎಲ್‌ಇಟಿ ಫ್ಲಾಷ್ ಸಹ ಆಳವಡಿಸಲಾಗಿದೆ. ಇದರಲ್ಲಿ ಮಿಡಿಯಾ ಟೆಕ್ ಪ್ರೊಸೆಸರ್ ಅಳವಡಿಸಲಾಗಿದೆ.

1GB RAM/ 8GB ROM:
ಹಾನರ್ ಬಿ 2 ಫೋನಿನಲ್ಲಿ 1GB RAM ಅಳವಡಿಸಲಾಗಿದ್ದು, ಇದರೊಂದಿಗೆ 8GB ಇಂಟರ್ನಲ್ ಮೆಮೊರಿ ಸಹ ಈ ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

4G VoLTE ಸಫೋರ್ಟ್ ಮಾಡಲಿದೆ:
ಸದ್ಯ ಮಾರುಕಟ್ಟೆಯಲ್ಲಿ 4G VoLTE ಸಫೋರ್ಟ್ ಮಾಡುವ ಫೋನುಗಳಿಗೆ ಮಾತ್ರವೇ ಹೆಚ್ಚಿನ ಬೇಡಿಕೆ ಇದ್ದು ಇದಕ್ಕೆ ಪ್ರಮುಖ ಕಾರಣ ಜಿಯೋ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ ಈ ಫೋನ್ ಸಹ 4G VoLTE ಸಫೋರ್ಟ್ ಮಾಡಲಿದೆ.


Click it and Unblock the Notifications