Home
ಮೊಬೈಲ್

ಎಸ್‌ಡಿ ಕಾರ್ಡ್‌ಗೆ ಅಪ್ಲಿಕೇಶನ್ ಅನ್ನು ಸರಿಸುವುದು ಹೇಗೆ?

By Shwetha

ಹೊಸದೊಂದು ಅಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡುವ ಸಮಯದಲ್ಲಿ ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದಿರುವ ಸಮಸ್ಯೆಯನ್ನು ಹೆಚ್ಚಾಗಿ ಎಲ್ಲರೂ ಅನುಭವಿಸುತ್ತಿರುತ್ತಾರೆ. ಆದರೆ ಈ ಸಮಸ್ಯೆಗೂ ಒಂದು ಪರಿಹಾರವಿದೆ ಎಂಬುದನ್ನು ನಿಮಗೆ ಗೊತ್ತೇ?

ಇದನ್ನೂ ಓದಿ: ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ?

ಈ ಸಮಸ್ಯೆಯನ್ನು ನೀವು ಅನುಭವಿಸಿದಾಗಲೆಲ್ಲಾ, ಹೆಚ್ಚುವರಿ ಸ್ಥಳಾವಕಾಶ ಇರುವ ಫೋನ್ ಅನ್ನು ಖರೀದಿಸಬೇಕೆಂದು ಬಯಸಿರುತ್ತೀರಾ? ಆದರೆ ಹೆಚ್ಚು ವೇಗವಾಗಿರುವ ಮತ್ತು ಸರಳವಾಗಿರುವ ಅದೇ ರೀತಿ ಹೆಚ್ಚಿನ ಖರ್ಚು ಇರದ ಒಂದು ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ 4 ಪ್ಲಸ್ ಮೇಲೆ ಭರ್ಜರಿ ದರಕಡಿತ

ನೀವು ಈ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಲ್ಲಿ, ನಿಮ್ಮ ಅಪ್ಲಿಕೇಶನ್ ಅನ್ನು ಎಸ್‌ಡಿ ಕಾರ್ಡ್‌ಗೆ ಸ್ಥಾನಾಂತರಿಸಬಹುದಾಗಿದೆ. ಇದನ್ನು ಹೇಗೆ ಮಾಡುವುದು ಎಂಬ ಗೊಂದಲ ನಿಮ್ಮಲ್ಲಿದ್ದಲ್ಲಿ ಇಲ್ಲಿದೆ ಸರಳ ಸಲಹೆಗಳು

#1

#1

ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ಸೆಟ್ಟಿಂಗ್‌ಗಳ ಪ್ಯಾನಲ್ ಅನ್ನು ತೆರೆಯಿರಿ ಇಲ್ಲಿ ನಿಮ್ಮ ಹೋಮ್‌ ಸ್ಕ್ರೀನ್ ಪರದೆಯಲ್ಲಿ ಐಕಾನ್ ಅನ್ನು ಕಾಣಬಹುದು.

#2

#2

ಅಪ್ಲಿಕೇಶನ್ಸ್, ಅಪ್ಲಿಕೇಶನ್ ಅಥವಾ ಅಪ್ಲಿಕೇಶನ್ ಮ್ಯಾನೇಜರ್ (ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ಏನಿದೆಯೋ ಅದನ್ನು ಅನುಸರಿಸಿ) ಇಲ್ಲಿ ತಟ್ಟಿರಿ. ಅದನ್ನು ಪಡೆದುಕೊಳ್ಳಲು ಸ್ಕ್ರಾಲ್ ಡೌನ್ ಮಾಡಿ. ನಿಮ್ಮ ಫೋನ್ ಮತ್ತು ನೀವು ಬಳಸುತ್ತಿರುವ ಆವೃತ್ತಿಯನ್ನು ಆಧರಿಸಿ ಲೇಬಲ್ ಬದಲಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಿ.

#3

#3

ಮ್ಯಾನೇಜ್ ಅಪ್ಲಿಕೇಶನ್ಸ್ ಇಲ್ಲಿ ತಟ್ಟಿರಿ. ನೀವು ಆಂಡ್ರಾಯ್ಡ್ 2.2 ನಲ್ಲಿದ್ದರೆ, ನಿಮ್ಮ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಇದನ್ನು ತೆರೆಯಲು ತಟ್ಟಬೇಕಾಗುತ್ತದೆ. ನೀವು ನಂತರ ಆವೃತ್ತಿಯಲ್ಲಿ ಇದ್ದೀರಿ ಎಂದಾದಲ್ಲಿ, ನಿಮ್ಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೀವು ಈಗಾಗಲೇ ಕಾಣುತ್ತೀರಿ.

#4

#4

ನಂತರ, ನೀವು ಎಸ್‌ಡಿ ಕಾರ್ಡ್‌ಗೆ ಸರಿಸಬೇಕೆಂದು ಬಯಸಿರುವ ಅಪ್ಲಿಕೇಶನ್ ಅನ್ನು ತಟ್ಟಿರಿ. "ಮೂವ್ ಟೂ ಎಸ್‌ಡಿ ಕಾರ್ಡ್" ಎನ್ನುವ ಒಂದು ಬಟನ್ ಇರುತ್ತದೆ. ಅಪ್ಲಿಕೇಶನ್ ಅನ್ನು ಸರಿಸಲು ಇದನ್ನು ತಟ್ಟಿರಿ. ನಿಮ್ಮ ಬಟನ್ ಬೂದು ಬಣ್ಣಕ್ಕೆ ತಿರುಗಿದೆ ಎಂದಾದಲ್ಲಿ, ನಿಮ್ಮ ಎಸ್‌ಡಿ ಕಾರ್ಡ್ ಇದಕ್ಕೆ ಬೆಂಬಲವನ್ನು ಒದಗಿಸುತ್ತಿಲ್ಲ ಎಂಬುದು ಇದರರ್ಥವಾಗಿದೆ. ಈ ಬಟನ್ ನಿಮ್ಮ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾಣುತ್ತಿಲ್ಲ ಎಂದಾದಲ್ಲಿ ಎಸ್‌ಡಿ ಕಾರ್ಡ್‌ಗೆ ಅಪ್ಲಿಕೇಶನ್ ಅನ್ನು ಸರಿಸಲು ನಿಮ್ಮ ಫೋನ್ ಬೆಂಬಲಿಸುತ್ತಿಲ್ಲ ಎಂದಾಗಿದೆ.

#5

#5

ಇದನ್ನು ಸಾಮಾನ್ಯವಾಗಿ ನಿರ್ವಹಿಸಬಹುದಾಗಿದೆ. ಹೀಗೆ ಮಾಡಲು ಆಗುವುದಿಲ್ಲ ಎಂದಾದಲ್ಲಿ, ನೀವು ಅಪ್ಲಿಕೇಶನ್ ಆದ Link2SD ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಸ್‌ಡಿ ಕಾರ್ಡ್‌ಗೆ ಯಾವ ಅಪ್ಲಿಕೇಶನ್‌ಗಳನ್ನು ಸರಿಸಬಹುದಾಗಿದೆ ಎಂಬುದನ್ನು ಇದು ನಿಮಗೆ ಅನುಮತಿಸುತ್ತದೆ.

Best Mobiles in India

English summary
This article tells about How to Move Android Apps From Internal Memory to SD Card: Here are 5 Easy Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+