Subscribe to Gizbot

ಮೈಕ್ರೋಮ್ಯಾಕ್ಸ್ 4 ಪ್ಲಸ್ ಮೇಲೆ ಭರ್ಜರಿ ದರಕಡಿತ

Written By:

ಸಪ್ಟೆಂಬರ್ ಕೊನೆಯಲ್ಲಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4 ಪ್ಲಸ್ ಎ315 ಅನ್ನು ರೂ 16,999 ಕ್ಕೆ ಲಾಂಚ್ ಮಾಡಿತ್ತು. ಈ ಭಾರತೀಯ ಮೂಲದ ಬ್ರ್ಯಾಂಡ್ ಸೋನಿ ಮತ್ತು ಸ್ಯಾಮ್‌ಸಂಗ್‌ನಂತೆ ಹೆಚ್ಚು ಪ್ರಸಿದ್ಧಿಯನ್ನು ಪಡೆಯದೇ ಇದ್ದರೂ ಇದಕ್ಕಿರುವ ಅಭಿಮಾನಿಗಳ ಸಂಖ್ಯೆ ಮಾತ್ರ ಅಸದಳವಾದುದು.

ಬ್ರ್ಯಾಂಡ್‌ನ ಜನಪ್ರಿಯತೆ ಹೆಚ್ಚುತ್ತಿರುವಂತೆ, ಡಿವೈಸ್‌ನ ಮಾರಾಟ ಹೆಚ್ಚಾಗುತ್ತಾ ಹೋಗುತ್ತಿದೆ. ಇಂದಿನ ಲೇಖನದಲ್ಲಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4 ಪ್ಲಸ್ ಎ315 ಸ್ಮಾರ್ಟ್‌ಫೋನ್ ಲಭ್ಯವಾಗುವ ಹತ್ತು ಆನ್‌ಲೈನ್ ತಾಣಗಳ ಮಾಹಿತಿಯನ್ನು ನಾವು ನಿಮಗಿಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: ವೈಫೈ ಪಾಸ್‌ವರ್ಡ್ ಅನ್ನು ಮರುಪಡೆದುಕೊಳ್ಳುವುದು ಹೇಗೆ?

ಇದಕ್ಕೂ ಮುನ್ನ ಹ್ಯಾಂಡ್‌ಸೆಟ್‌ನ ವಿಶೇಷತೆಗಳತ್ತ ಗಮನಹರಿಸೋಣ. ಮೈಕ್ರೋಮ್ಯಾಕ್ಸ್ ಎ 315 ಕ್ಯಾನ್‌ವಾಸ್ 4 ಪ್ಲಸ್, 5 ಇಂಚಿನ ಅಮೋಲೆಡ್ ಸ್ಕ್ರೀನ್‌ನೊಂದಿಗೆ ಬಂದಿದ್ದು, ಇದು 1280x720 ಪಿಕ್ಸೆಲ್‌ಗಳ ರೆಸಲ್ಯೂಶನ್‌ಗೆ ಬೆಂಬಲವನ್ನು ಒದಗಿಸುತ್ತಿದೆ. ಇದು ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್ 1.7GHZ ಜೊತೆಗೆ ಮಾಲಿ 450 ಎಮ್‌ಪಿ ಜಿಪಿಯುನೊಂದಿಗೆ ಇದು ಬಂದಿದೆ. ಇದು ಬಹು ಕೆಲಸಗಳಿಗೆ 1 ಜಿಬಿ RAM ಅನ್ನು ಬಳಸುತ್ತಿದ್ದು ಇದರಲ್ಲಿ ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದೆ.

ಫೋನ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು 5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಇನ್ನು ಕ್ಯಾಮೆರಾ ವಿಶೇಷತೆಗಳತ್ತ ನಾವು ನೋಡುವುದಾದರೆ ಇದು ಆಟೋ ಫೋಕಸ್, ಫ್ಲ್ಯಾಶ್ ಬೆಂಬಲ, ಪ್ರಿ ಲೋಡೆಡ್ ವಿಶುವಲ್ ಇಫೆಕ್ಟ್, ಫೇಸ್ ಬ್ಯೂಟಿ, ಲೈವ್ ಫೋಟೋ, ಎಚ್‌ಡಿಆರ್, ಆಟೋ ಗೆಸ್ಚರ್, ಪನೋರಮಾ, ಸೋನಿ ಇಮೇಜ್ ಸೆನ್ಸಾರ್, ಇಮೇಜ್ ಸ್ಟೆಬಿಲೈಸೇಶನ್ ಮೋಡ್ ಅನ್ನು ಹೊಂದಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಭರ್ಜರಿ ದರಕಡಿತ

ಫೋನ್ 16 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು ಮೈಕ್ರೋ ಎಸ್‌ಡಿ ಸ್ಲಾಟ್ ಅನ್ನು ಇದು ಹೊಂದಿದೆಯೇ ಎಂಬುದನ್ನು ಸೈಟ್ ತಿಳಿಸಿಲ್ಲ. ಸಂಪರ್ಕ ಅಂಶಗಳತ್ತ ನೋಡುವುದಾದರೆ ಇದು 3ಜಿ, 2ಜಿ, ವೈ-ಫೈ, ಜಿಪಿಎಸ್ ಮತ್ತು ಬ್ಲ್ಯೂಟೂತ್ ಅನ್ನು ಒಳಗೊಂಡಿದೆ. ಮೈಕ್ರೋಮ್ಯಾಕ್ಸ್ ಎ 315 ಮೈಕ್ರೋ ಸಿಮ್ ಮತ್ತು ನಾರ್ಮಲ್ ಸಿಮ್ ಹೀಗೆ ಎರಡು ಸಿಮ್ ಸ್ಲಾಟ್‌ಗಳೊಂದಿಗೆ ಬಂದಿದೆ.

ಫೋನ್‌ನ ಆನ್‌ಲೈನ್ ಡೀಲ್‌ಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ಪರಿಶೀಲಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Back in September, Micromax launched the Canvas 4 Plus A315 in India at the price of Rs. 16,999. And although, the biggest domestic brand may not the as popular as Samsung or Sony in the International market, it has quite the fan following in the native soil.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more