Subscribe to Gizbot

ಎಚ್‌ಟಿಸಿ ಮೂರು ಸ್ಮಾರ್ಟ್‌ಫೋನ್‌ಗಳು ದೇಶೀಯ ಮಾರುಕಟ್ಟೆಗೆ ಬಿಡುಗಡೆ

Written By:

ತೈವಾನ್‌ ಮೂಲದ ಎಚ್‌ಟಿಸಿ ಕಂಪೆನಿಯ ಮೂರು ಸ್ಮಾರ್ಟ್‌ಫೋನ್‌‌‌‌ಗಳು ದೇಶೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ದುಬಾರಿ ಬೆಲೆಯ ಒನ್‌ ಎಂ8 ಸ್ಮಾರ್ಟ್‌ಫೋನಿಗೆ ಎಚ್‌ಟಿಸಿ 49,900 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದರೂ ಮೇ.8ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಎಚ್‌ಟಿಸಿ ಎಂ8 ನೊಂದಿಗೆ ಎರಡು ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸಿಂಗಲ್‌ ಸಿಮ್‌ ಹಾಕಬಹುದಾದ 5.5 ಇಂಚಿನ ಕೆಪಾಸಿಟಿವ್‌ ಸ್ಕ್ರೀನ್‌ ಹೊಂದಿರುವ ಡಿಸೈರ್‌ 816 ಫ್ಯಾಬ್ಲೆಟ್‌ಗೆ ಎಚ್‌ಟಿಸಿ 23,990 ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದರೆ, ಡ್ಯುಯಲ್‌ ಸಿಮ್‌ ಹಾಕಬಹುದಾದ ಡಿಸೈರ್‌ 210ಗೆ ಎಚ್‌‌ಟಿಸಿ 8,700 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.ಈ ಎರಡು ಸ್ಮಾರ್ಟ್‌ಫೋನ್‌‌ಗಳು ಎರಡು ವಾರದೊಳಗಡೆ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಎಚ್‌‌ಟಿಸಿ ಹೇಳಿದೆ. ಇಂದು ಬಿಡುಗಡೆಯಾದ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌‌ಗೆ ನೀಡಿರುವ ಆಡ್ರಾಯ್ಡ್‌‌ ಓಎಸ್‌‌‌ ಯಾವುದು ಎಂಬುದನ್ನು ಎಚ್‌ಟಿಸಿ ಇನ್ನು ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: ಎಚ್‌ಟಿಸಿ ಒನ್‌ ವರ್ಸಸ್‌ ಎಚ್‌ಟಿಸಿ ಎಂ8
ಇದನ್ನೂ ಓದಿ: ಎಚ್‌ಟಿಸಿ ಎಂ8 ಸ್ಮಾರ್ಟ್‌ಫೋನ್‌ನಲ್ಲಿರುವ ವಿಶೇಷತೆಗಳೇನು?
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಚ್‌‌ಟಿಸಿ ಒನ್‌ ಎಂ8

ಎಚ್‌‌ಟಿಸಿ ಒನ್‌ ಎಂ8

ಬೆಲೆ:49,900

ವಿಶೇಷತೆ:
ಸಿಂಗಲ್‌ ಸಿಮ್‌ (ನ್ಯಾನೋ ಸಿಮ್‌)
5 ಇಂಚಿನ ಸುಪರ್‍ ಅಮೊಲೆಡ್ ಕೆಪಾಸಿಟಿವ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,441 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್‌ ಕೋರ್‌ ಪ್ರೊಸೆಸರ್‍
Adreno 330 ಗ್ರಾಫಿಕ್‌ ಪ್ರೊಸೆಸರ್‌
16/32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
ಹಿಂದುಗಡೆ 4 ಆಲ್ಟ್ರಾ ಪಿಕ್ಸೆಲ್‌ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾ
ಮುಂದುಗಡೆ 5 ಎಂಪಿ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,
ಎಕ್ಸಲರೋಮೀಟರ್‌,ಲೈಟ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌
2600 mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌ 816

ಎಚ್‌ಟಿಸಿ ಡಿಸೈರ್‌ 816

ಬೆಲೆ:23,990

ವಿಶೇಷತೆ:
ಸಿಂಗಲ್‌ ಸಿಮ್‌
5.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್ ಓಎಸ್‌
1.6GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
1.5 ಜಿಬಿ ರ್‍ಯಾಮ್‌
8ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2600 mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌ 210 ಡ್ಯುಯಲ್‌

ಎಚ್‌ಟಿಸಿ ಡಿಸೈರ್‌ 210 ಡ್ಯುಯಲ್‌

ಬೆಲೆ:8,700

ವಿಶೇಷತೆ
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1GHz ಮಿಡಿಯಾಟೆಕ್‌ ಡ್ಯುಯಲ್‌ ಕೋರ್‌‌ ಪ್ರೊಸೆಸರ್‌
512MB RAM
4 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಬ್ಲೂಟೂತ್‌‌,ಜಿಪಿಎಸ್‌
1300 mAh ಬ್ಯಾಟರಿ

ಎಚ್‌‌ಟಿಸಿ ಒನ್‌ ಎಂ8

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot