ಚೀನಾ ಐಫೋನ್‌ ಸ್ಪೋಟ:ಮಹಿಳೆಯ ಕಣ್ಣಿಗೆ ಬಲವಾದ ಗಾಯ

Posted By:

ಚೀನಾದಲ್ಲಿ ಮತ್ತೊಂದು ಐಫೋನ್‌ ಸ್ಪೋಟಗೊಂಡಿದೆ. ಮಹಿಳೆಯ ಕೈಯಲ್ಲಿದ್ದ ಐಫೋನ್‌ ಸ್ಪೋಟಗೊಂಡ ಪರಿಣಾಮವಾಗಿ ಮಹಿಳೆಯ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ.

ಇತ್ತೀಚಿಗೆ ಖರೀದಿಸಿದ ಐಫೋನ್‌ 5ನಲ್ಲಿ ಲಿ (Li ) ಎನ್ನುವ ಮಹಿಳೆ ತನ್ನ ಸ್ನೇಹಿತೆಯ ಜೊತೆ 40 ನಿಮಿಷ ಮಾತನಾಡುತ್ತಿರುವ ವೇಳೆ, ಐ ಫೋನ್‌ ಸ್ಕ್ರೀನ್‌ ಬಿಸಿಯಾಗತೊಡಗಿದಂತೆ. ಸ್ಕ್ರೀನ್‌ ಬಿಸಿಯಾಗುತ್ತಿದ್ದಂತೆ ಐಫೋನ್‌ ಸ್ಕ್ರೀನ್‌ ಮೇಲೆ ಕಾಲ್‌ ನಿಲ್ಲಿಸಲು ಬಟನ್‌ ಒತ್ತಿದ್ದರೂ ಟಚ್‌ಸ್ಕ್ರೀನ್‌‌ ಯಾವುದೇ ಪ್ರತಿಕ್ರಿಯೇ ನೀಡದೇ ಇದ್ದಕ್ಕಿದಂತೆ ಕೈಯಲ್ಲೇ ಸ್ಟೋಟಗೊಂಡಿತು ಎಂದು ಲಿ ಚೀನಾದ ಸುದ್ದಿ ವೆಬ್‌ಸೈಟ್‌ಗೆ ತಿಳಿಸಿದ್ದಾಳೆ.

ಚೀನಾ ಇಂಟರ್‌ನೆಟ್‌ನಲ್ಲಿ ಈಗ ಆಪಲ್‌ ಐಫೋನ್‌ ಬಗ್ಗೆ ಕಟು ಟೀಕೆ ವ್ಯಕ್ತವಾಗುತ್ತಿದೆ. ಆಪಲ್‌ ಈ ಐಫೋನ್‌ ಬ್ಲ್ಯಾಸ್ಟ್‌ ಆಗಿದ್ದಕ್ಕೆ ತನಿಖೆಗೆ ಮುಂದಾಗಿದೆ.

ಚೀನಾ ಐಫೋನ್‌ ಸ್ಪೋಟ:ಮಹಿಳೆಯ ಕಣ್ಣಿಗೆ ಬಲವಾದ ಗಾಯ

ಕಳೆದ ಜುಲೈ ತಿಂಗಳಿನಲ್ಲಿ ಐಫೋನ್‌ 5 ಚಾರ್ಜ್‌ ಹಾಕಿ ಮಾತನಾಡುತ್ತಿರುವ ವೇಳೆಯಲ್ಲಿ ವಿದ್ಯುತ್‌ ಶಾಕ್‌ ಹೊಡೆದು ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಸುದ್ದಿ ಪ್ರಕಟವಾದ ಒಂದು ತಿಂಗಳೊಳಗೆ ಚೀನದಲ್ಲಿ ಮತ್ತೊಂದು ಐಫೋನ್‌ ಬ್ಲ್ಯಾಸ್ಟ್‌ ಆಗಿದೆ.

ಇದನ್ನೂ ಓದಿ: ಚೀನಾ ಆಪಲ್‌ ಫ್ಯಾಕ್ಟರಿಯಲ್ಲಿ ಕಳಪೆ ಗುಣಮಟ್ಟದ ಐಫೋನ್‌ ತಯಾರಿ!Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot