ಲಾವಾ ಐರಿಸ್‌ ಎನ್‌400 VS ಕಾರ್ಬನ್‌ ಎ15

Posted By: Vijeth

ಲಾವಾ ಐರಿಸ್‌ ಎನ್‌400 VS ಕಾರ್ಬನ್‌ ಎ15

ಭಾರತೀಯ ಮಾರುಕಟ್ಟೆ ಡ್ಯುಯೆಲ್ ಸಿಮ್ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಗಳಿಸುತ್ತುರುವ ಜನಪ್ರಿಯತೆ ಹಾಗೂ ಯಶಸ್ಸಿನ ಹಿನ್ನೆಲೆಯಲ್ಲಿ ಹಲವು ಸ್ಥಳೀಯ ಸ್ಮಾರ್ಟ್‌ಫೋನ್‌ ತಯಾರಕರುಗಳು ತಮ್ಮ ನೂತನ ಬಜೆಟ್‌ ಸ್ನೇಹಿ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ತರುವ ಮೂಲಕ ಮಾರುಕಟ್ಟೆಯಲ್ಲಿನ ಉತ್ತಮ ಶೇರ್ಸ್ ಪಾಲುದಾರಿಕೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈಸಾಲಿಗೆ ಇದೀಗತಾನೆ ಸ್ಥಳೀಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ್ದಂತಹ ಲಾವಾ ಇತ್ತೀಚೆಗಷ್ಟೇ ಆಂಡ್ರಾಯ್ಡ್‌ ಜಿಂಜರ್ಬ್ರೆಡ್‌ ಚಾಲಿತ ಐರಿಸ್‌ ಎನ್‌350 ಹಾಗೂ ಐರಿಸ್‌ ಎನ್‌320 ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದಿತ್ತು, ಈ ಸ್ಮಾರ್ಟ್‌ಫೋನ್‌ಗಳ ಯಶಸ್ಸಿನ ಬಳಿಕ ಸಂಸ್ಥೆಯು ಇದೀಗ ತನ್ನಯ ನೂತನ ಆಂಡ್ರಾಯ್ಡ್‌ ಐಸಿಎಸ್‌ 4.0 ಆಪರೇಟಿಂಗ್‌ ಸಿಸ್ಟಂ ಚಾಲಿತ ಐರಿಸ್‌ ಎನ್‌400 ಸ್ಮಾರ್ಟ್‌ಫೋನ್‌ ಅನ್ನು ರೂ. 6,399 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದಕ್ಕೂ ಮುನ್ನ ಮತ್ತೊಂದು ಸ್ಥಳೀಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಕಾರ್ಬನ್‌ ಮೊಬೈಲ್ಸ್‌ ಕೂಡ ನೂತನ ಕಾರ್ಬನ್‌ ಎ15 ಬಜೆಟ್‌ ಸ್ಮಾರ್ಟ್‌ಪೋನ್‌ ಅನ್ನು ರೂ. 5,899 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ನೂತನವಾಗಿ ಮಾರುಕಟ್ಟೆಗೆ ಕಾಲಿರಿಸಿರುವ ಲಾವಾ ಐರಿಸ್‌ ಎನ್‌400 ಸ್ಮಾರ್ಟ್‌ಫೋನ್‌ಗೆ ಪ್ರಬಲ ಪ್ರತಿಸ್ರ್ಧಿ ಎಂದೇ ಅಂದಾಜಿಸಲಾಗಿದೆ. ಅಂದಹಾಗೆ ನೀವೂ ಕೂಡಾ ಈ ಬಜೆಟ್‌ ಸ್ಮಾರ್ಟ್‌ಪೋನ್‌ ಖರೀದಿಸ ಬೇಕೆಂದಿದ್ದೀರಾ? ಅದಕ್ಕಾಗಿಯೇ ಗಿಜ್ಬಾಟ್‌ ನಿಮಗಾಗಿ ಈ ಎರಡೂ ನೂತನ ಸ್ಮಾರ್ಟ್‌ಪೋನ್‌ಗಳ ನಡುವಿನ ಹೋಲಿಕೆಯನ್ನು ತಂದಿದೆ ಖರೀದಿಸುವ ಮೊದಲ್ಲು ಒಮ್ಮೆ ಓದಿ ನೋಡಿ ನಂತರ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ ಯಾವುದೆಂದು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ.

ದರ್ಶಕ: ಐರಿಸ್‌ ಎನ್‌400 ಹಾಗೂ ಎ15 ಎರಡೂ ಸ್ಮಾರ್ಟ್‌ಪೋನ್‌ಗಳಲ್ಲಿ 4 ಇಂಚಿನ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 800 x 480 ಪಿಕ್ಸೆಲ್ಸ್‌ ನೀಡಲಾಗಿದೆ.

ಪ್ರೊಸೆಸರ್‌: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಬರಾಬರಿಯಾದ೦ 1GHz ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಸ್ಮಾರ್ಟ್‌ಫೋನ್‌ಗಳಾದ್ದರಿಂದ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಈ ವಿಚಾರದಲ್ಲಿ ಲಾವಾ ಐರಿಸ್‌ ಎನ್‌400 ನಲ್ಲಿ ಹಿಂಬದಿಯ 5MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ 0.3MP ಕ್ಯಾಮೆರಾ ನೀಡಲಾಗಿದ್ದರೆ, ಕಾರ್ಬನ್‌ನ ಎ15 ನಲ್ಲಿ ಹಿಂಬದಿಯ 3MPಕ್ಯಾಮೆರಾ ಮಾತ್ರ ನೀಡಲಾಗಿದ್ದು ಮುಂಬದಿಯ ಕ್ಯಾಮೆರಾ ಹೊಂದಿಲ್ಲ.

ಸ್ಟೋರೇಜ್‌: ಆಂತರಿಕ ಸ್ಟೋರೇಜ್‌ RAM ಕುರಿತಾಗಿ ಹೇಳುವುದಾದರೆ ಕಾರ್ಬನ್‌ ಎ15 ಸ್ಮಾರ್ಟ್‌ಫೋನ್‌ನ ವಿವರಗಳು ಲಭ್ಯವಿಲ್ಲ, ಆದರೆ ಲಾವಾ ಐರಿಸ್‌ ಎನ್‌400 ನಲ್ಲಿ 127MB ಆನ್‌ ಬೋರ್ಡ್‌ ಸ್ಟೋರೇಜ್‌ ಹಾಗೂ 512MB RAM ನೀಡಲಾಗಿದೆ. ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೋ ಡಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದ್ದು 32 ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಯುಎಸ್‌ಬಿ 2.0, ವೈ-ಫೈ, 3ಜಿ ಹಾಗೂ ಬ್ಲೂಟೂತ್‌ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ: ಐರಿಸ್‌ N400 ನಲ್ಲಿ 1,500 mAh Li-ion ಬ್ಯಾಟರಿ ನೀಡಲಾಗಿದ್ದರೆ, ಕಾರ್ಬನ್‌ನ A15 ಸ್ಮಾರ್ಟ್‌ಫೋನ್‌ನಲ್ಲಿ ಕೊಂಚ ಕಡಿಮೆ ಸಾಮರ್ತ್ಯದ ಅಂದರೆ 1,420 mAh Li-ion ಬ್ಯಾಟರಿ ನೀಡಲಾಗಿದೆ.

ಬೆಲೆ: ಖರೀದಿಸುವುದಾದರೆ ಲಾವಾ ಐರಿಸ್‌ ಎನ್‌400 ಹಾಗೂ ಕಾರ್ಬನ್‌ ಎ15 ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ರೂ. 6,399 ಹಾಗೂ ರೂ. 5,899 ಧರದಲ್ಲಿ ಆನ್‌ಲೈನ್‌ ಮಳಿಗೆಗಳಲ್ಲಿ ಖರೀದಿಸ ಬಹುದಾಗಿದೆ.

Read In English...

ಕಡಿಮೆ ಬೆಲೆಯ ಟಾಪ್‌ 10 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು

ನೋಕಿಯಾ ಆಶಾ 206 : ಟಾಪ್‌ 5 ಫೀಚರ್ಸ್‌

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot