ಶಿಯೋಮಿ ಎಂ.ಐ ನೋಟ್ 2: ಸೋರಿಕೆಯಾದ ಮಾಹಿತಿಗಳು.

|

ಕಳೆದ ಕೆಲವು ದಿನಗಳಿಂದ ಶಿಯೋಮಿ ಸುದ್ದಿಯಲ್ಲಿದೆ. ಕಾರಣ ಅದರ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಎಂ.ಐ ನೋಟ್ 2. ಈ ಸ್ಮಾರ್ಟ್ ಫೋನ್ ಯಾವಾಗ ಬಿಡುಗಡೆಯಾಗಬಹುದು ಎನ್ನುವ ಬಗ್ಗೆ ಕೆಲವು ಮಾಹಿತಿಗಳು ಸೋರಿಕೆಯಾದಂತಿದೆ.

ಶಿಯೋಮಿ ಎಂ.ಐ ನೋಟ್ 2: ಸೋರಿಕೆಯಾದ ಮಾಹಿತಿಗಳು.

ವ್ಯೀಬೋದ ಇತ್ತೀಚಿನ ಲೇಖನದ ಪ್ರಕಾರ, ಸೆಪ್ಟೆಂಬರ್ 14ರಂದು ಶಿಯೋಮಿ ಎಂ.ಐ ನೋಟ್ 2 ಬಿಡುಗಡೆಯಾಗುತ್ತದೆ ಮತ್ತಿದಕ್ಕೆ ಒಂದು ವಾರವಷ್ಟೇ ಉಳಿದಿದೆ. ಶಿಯೋಮಿ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

ಓದಿರಿ: ಜಿಯೋ ಬಳಸಿ 2ಜಿ/3ಜಿ ಕರೆಗಳನ್ನು ಮಾಡಬಹುದು! ಹೇಗೆ ಅಂತೀರಾ?

ಶಿಯೋಮಿ ಎಂ.ಐ ನೋಟ್ 2 ಬಗ್ಗೆ ಹಲವು ಮಾಹಿತಿಗಳು ಸೋರಿಕೆಯಾಗಿತ್ತು. ಈಗಿರುವ ವರದಿಗಳ ಪ್ರಕಾರ ಎಂ.ಐ ನೋಟ್ 2 ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ರೀತಿಯಲ್ಲಿಯೇ ಡುಯಲ್ ಕರ್ವ್ಡ್ ಎಡ್ಜ್ ಪರದೆಯನ್ನು ಹೊಂದಲಿದೆ. ಈ ಸಾಧನದ ಬೆಲೆಯೂ ಆನ್ ಲೈನಿನಲ್ಲಿ ಸೋರಿಕೆಯಾಗಿದೆ.
ಓದಿರಿ: ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಶಿಯೋಮಿ ಎಂ.ಐ ನೋಟ್ 2 ಬಗ್ಗೆ ನಮಗೆ ಇಲ್ಲಿವರೆಗೆ ಗೊತ್ತಿರುವ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಕಣ್ಣಾಡಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಪ್ಟೆಂಬರ್ ಹದಿನಾಲ್ಕಕ್ಕೆ ಬಿಡುಗಡೆ.

ಸೆಪ್ಟೆಂಬರ್ ಹದಿನಾಲ್ಕಕ್ಕೆ ಬಿಡುಗಡೆ.

ವ್ಯೀಬೋದಲ್ಲಿ ಬಂದಿರುವ ಲೇಖನದ ಪ್ರಕಾರ ಎಂ.ಐ ನೋಟ್ 2 ಸೆಪ್ಟೆಂಬರ್ 14ರಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಕಂಪನಿಯು ಈ ಮಾಹಿತಿಯನ್ನು ಇನ್ನೂ ಘೋಷಿಸಿಲ್ಲವಾದರೂ, ವ್ಯೀಬೋದ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.

ಎಂ.ಐ ನೋಟ್ 2 ಫೋನಿನ ಎರಡು ಆವೃತ್ತಿಗಳು ಬರುವ ಸಾಧ್ಯತೆಯಿದೆ.

ಎಂ.ಐ ನೋಟ್ 2 ಫೋನಿನ ಎರಡು ಆವೃತ್ತಿಗಳು ಬರುವ ಸಾಧ್ಯತೆಯಿದೆ.

ಎಂ.ಐ ನೋಟ್ 2 ಫೋನಿನ ಎರಡು ಆವೃತ್ತಿಗಳನ್ನು ನಾವು ನೋಡಬಹುದು. ಈ ಗಾಳಿ ಸುದ್ದಿ ಬಹು ಹಿಂದಿನಿಂದಲೂ ಇದೆ. ಒಂದು ಆವೃತ್ತಿಯಲ್ಲಿ ಸ್ನಾಪ್ ಡ್ರಾಗನ್ 821 ಪ್ರೊಸೆಸರ್ ಹಾಗೂ 6ಜಿಬಿ ರ್ಯಾಮ್ ಇದ್ದರೆ ಮತ್ತೊಂದು ಆವೃತ್ತಿಯಲ್ಲಿ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಹಾಗೂ 4ಜಿಬಿ ರ್ಯಾಮ್ ಇರಲಿದೆ. ವ್ಯೀಬೋ ಪೋಸ್ಟಿನ ಪ್ರಕಾರವೂ ಎಂ.ಐ ನೋಟ್ 2ನಲ್ಲಿ ಸ್ನಾಪ್ ಡ್ರಾಗನ್ 821 ಪ್ರೊಸೆಸರ್ ಇರಲಿದೆ.

2ಕೆ ಕರ್ವ್ಡ್ ಪರದೆ.

2ಕೆ ಕರ್ವ್ಡ್ ಪರದೆ.

ಗಾಳಿ ಸುದ್ದಿಗಳ ಪ್ರಕಾರ ಎಂ.ಐ ನೋಟ್ 2 ನಲ್ಲಿ 5.7 ಇಂಚಿನ ಕ್ಯು.ಹೆಚ್.ಡಿ 2560 x 1440 ಪರದೆಯಿರಲಿದೆ. ಸ್ಯಾಮ್ಸಂಗ್ ತಯಾರಿಸಿರುವ ಅಮೊಲೆಡ್ ಪರದೆಯೂ ಇದರಲ್ಲಿರಲಿದೆ ಎನ್ನಲಾಗುತ್ತಿದೆ.

ಡುಯಲ್ ಕ್ಯಾಮೆರ ಇರುವ ಸಾಧ್ಯತೆಯಿದೆ.

ಡುಯಲ್ ಕ್ಯಾಮೆರ ಇರುವ ಸಾಧ್ಯತೆಯಿದೆ.

ಶಿಯೋಮಿ ಎಂ.ಐ ನೋಟ್ 2ದ ಹಿಂಬದಿಯಲ್ಲಿ ಎರಡು 13 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಇರುತ್ತದೆ ಎನ್ನುವ ಸುದ್ದಿಗಳಿವೆ. ಅನೇಕ ಪ್ರೀಮಿಯಂ ಸಾಧನಗಳಲ್ಲಿರುವ ಡುಯಲ್ ಕ್ಯಾಮೆರಾ ಸೆಟ್ ಅಪ್ ಎಂ.ಐ ನೋಟ್ 2ನಲ್ಲೂ ಇರಲಿದೆ.

ಬೆಲೆ ಕಡಿಮೆಯಿರಲಿದೆ.

ಬೆಲೆ ಕಡಿಮೆಯಿರಲಿದೆ.

ವ್ಯೀಬೋದ ಲೇಖನದ ಪ್ರಕಾರ, ಎಂ.ಐ ನೋಟ್ 2ನ ಬೆಲೆ ಸುಮಾರು 2,999 ಯುವಾನ್ ಇರಲಿದೆ ಅಂದರೆ $450 ಅಥವಾ 30,000 ರುಪಾಯಿ. ಇದು ಸತ್ಯವಾದರೆ ಶಿಯೋಮಿ ಇಲ್ಲಿಯವರೆಗೂ ಹೊರತಂದಿರುವ ಎಲ್ಲಾ ಫೋನುಗಳಿಗಿಂತಲೂ ಎಂ.ಐ ನೋಟ್ 2 ದುಬಾರಿ ಎನ್ನಿಸಲಿದೆ.

Best Mobiles in India

English summary
Xiaomi Mi Note 2 is all set to be launched on September 14 and the device is alleged to come with a dual curved edge display as in the Samsung Galaxy Note 7. Take a look at the fresh set of specs and pricing of the smartphone as per the rumors from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X