ಜಿಯೋ ಬಳಸಿ 2ಜಿ/3ಜಿ ಕರೆಗಳನ್ನು ಮಾಡಬಹುದು! ಹೇಗೆ ಅಂತೀರಾ?

By Shwetha
|

ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಅಲೆ ಎಬ್ಬಿಸಿದ ಜಿಯೋ ತನ್ನ 4ಜಿ ಸೇವೆಗಳನ್ನು ಜನತೆಗೆ ಒದಗಿಸುವ ಮೂಲಕ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಟ್ಟಿದೆ. 90 ದಿನಗಳ ಉಚಿತ ಪ್ರಿವ್ಯೂ ಆಫರ್‌ನಲ್ಲಿಯೇ ಜಿಯೋ ಸವಾಲಿಗೆ ಮೈಯೊಡ್ಡಿ ನಿಂತಿತ್ತು. ಮೋದಿಯವರ ಕನಸನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಇಂಟರ್ನೆಟ್ ಒದಗಿಸುವ ಆಶಾಭಾವನೆ ರಿಲಾಯನ್ಸ್ ಕಂಪೆನಿಯ ತಲೆಯಲ್ಲಿತ್ತು ಅದಕ್ಕೆ ಜಿಯೋವನ್ನು ಅದು ರೂಪಿಸಿತ್ತು.

ಓದಿರಿ: ಜಿಯೋನ ಆಫರ್ ಏನೇ ಇರಲಿ ನಾವು ಸಮರಕ್ಕೆ ಸಿದ್ಧ: ಬಿಎಸ್‌ಎನ್‌ಎಲ್

ಅಂತೂ ಅಧಿಕೃತವಾಗಿ ಜಿಯೋ ಬಳಕೆದಾರರನ್ನು ಇದೀಗ ತಲುಪಿದೆ. ಬಹಳಷ್ಟು ವದಂತಿ, ಊಹಾಪೋಹಗಳನ್ನು ಇದು ಸೃಷ್ಟಿಸಿದೆ. ಈಗಲೂ ಜನರ ಮನದಲ್ಲಿ ಇದನ್ನು ಖರೀದಿಸುವುದು ಬೇಕೋ ಬೇಡವೋ ಎಂಬ ಜಿಜ್ಞಾಸೆ ಜನರ ಮನದಲ್ಲಿ ಮೂಡಿದೆ. ಅದಾಗ್ಯೂ ರಿಲಾಯನ್ಸ್ ತನ್ನ ಆಫರ್‌ಗಳ ಪಟ್ಟು ಬಿಟ್ಟಿಲ್ಲ ಮತ್ತು ಕೊಟ್ಟ ಭಾಷೆಯನ್ನು ಉಳಿಸುವಂತೆ ಕಾರ್ಯನಿರ್ವಹಿಸುತ್ತಿದೆ.

ಓದಿರಿ: ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಇಂದಿನ ಲೇಖನದಲ್ಲಿ ಜಿಯೋಫೈ ಹಾಟ್‌ಸ್ಪಾಟ್ ಸಹಾಯದೊಂದಿಗೆ 2ಜಿ ಅಥವಾ 3ಜಿ ಸ್ಮಾರ್ಟ್‌ಫೋನ್‌ಗಳಿಗೆ ಕರೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಜಿಯೋ ಜಾಯಿನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಜಿಯೋ ಜಾಯಿನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ನೀವು ಮೊದಲಿಗೆ ಮೈಜಿಯೋ ಮತ್ತು ಜಿಯೋ ಜಾಯಿನ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಮೈಜಿಯೋ ಅಪ್ಲಿಕೇಶನ್ ತೆರೆಯಿರಿ

ಮೈಜಿಯೋ ಅಪ್ಲಿಕೇಶನ್ ತೆರೆಯಿರಿ

ಸ್ವಯಂಚಾಲಿತವಾಗಿ ಜಿಯೋಫೈ ಡಿವೈಸ್‌ಗೆ ನೀವು ಈಗಾಗಲೇ ಸೈನ್ ಇನ್ ಆಗಿದ್ದೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆದ್ದರಿಂದ, ಮೈಜಿಯೋ ಅಪ್ಲಿಕೇಶನ್ ಲಾಂಚ್ ಮಾಡಿ. ಸೈನ್ ಇನ್ ಮತ್ತು ಸೈನ್ ಅಪ್ ಮಾಡಿ ಅಂತೆಯೇ ನೀವು ಸೈನ್ ಇನ್ ಆಗುತ್ತಿರುವಂತೆ ಇತರ ಪ್ರೊಸೆಸ್ ಅನ್ನು ಕೈಬಿಡಿ.

ಅನುಮತಿಗಳನ್ನು ಪಡೆದುಕೊಳ್ಳಿ

ಅನುಮತಿಗಳನ್ನು ಪಡೆದುಕೊಳ್ಳಿ

ಜಿಯೋ ಜಾಯಿನ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿ ಹಾಗೂ ನಿಮ್ಮ ಜಿಯೋಫೈ ಡಿವೈಸ್‌ನಲ್ಲಿ ಸೇರಿಸಿಕೊಂಡಿರುವ ಜಿಯೋ ಸಂಖ್ಯೆಯನ್ನು ಬಳಸಿಕೊಂಡು ಅದು ಲಾಗಿನ್ ಆಗುತ್ತದೆ. ಕರೆಗಳನ್ನು ಮಾಡಲು, ಸಂದೇಶ ಕಳುಹಿಸಲು, ಅಪ್ಲಿಕೇಶನ್ ಅನುಮತಿಗಳ ಪ್ರವೇಶಕ್ಕೆ ನೀವು ಅನುಮತಿಗಳನ್ನು ಕೇಳಬೇಕಾಗುತ್ತದೆ.

ನಿಮ್ಮ ಕೆಲಸ ಆದಂತೆಯೇ

ನಿಮ್ಮ ಕೆಲಸ ಆದಂತೆಯೇ

ಮೈಜಿಯೋ ಅಪ್ಲಿಕೇಶನ್‌ಗೆ ನೀವು ಅಗತ್ಯ ಅನುಮತಿಗಳನ್ನು ಒದಗಿಸಿದ ನಂತರ, ನಿಮ್ಮ ಕೆಲಸ ಆದಂತೆಯೇ. ನಿಮ್ಮ 2ಜಿ ಅಥವಾ 3ಜಿ ಫೋನ್ ಬಳಸಿಕೊಂಡು ಜಿಯೋ ಜಾಯಿನ್ ಆಪ್ ಬಳಸಿ ಫೋನ್ ಕರೆಗಳನ್ನು ನಿಮಗೆ ಮಾಡಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ ಮತ್ತು ವೆಲ್‌ಕಮ್ ಸ್ಕ್ರೀನ್‌ನಲ್ಲಿ ಡಯಲರ್‌ಗೆ ಹೋಗಿ

ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದು

ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದು

ವಾಯ್ಸ್ ಕರೆಗಳಲ್ಲದೆ, ನಿಮ್ಮ 2ಜಿ ಅಥವಾ 3ಜಿ ಬಳಸಿಕೊಂಡು ಜಿಯೋ ಜಾಯಿನ್ ಅಪ್ಲಿಕೇಶನ್ ಉಪಯೋಗಿಸಿ ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದಾಗಿದೆ.

Best Mobiles in India

English summary
Here, we have come up with the steps on how you can use the Jio Join app to make calls on your 2G or 3G smartphone that is connected to JioFi Hotspot via Wi-Fi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X