ರಿಲಾಯನ್ಸ್ ಜಿಯೋ ಬೆಂಬಲಿತ ಲೀ ಮ್ಯಾಕ್ಸ್2 ವಿಶೇಷತೆ ಬಲ್ಲಿರಾ?
ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಲೀಕೊ ಇಂದು ಅಮೆಜಾನ್ ಇಂಡಿಯಾ ಮತ್ತು ಸ್ನ್ಯಾಪ್‌ಡೀಲ್‌ನೊಂದಿಗೆ ತನ್ನ ಇ ಕಾಮರ್ಸ್ ಪಾಲುದಾರಿಕೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ತನ್ನ ಗ್ರಾಹಕರ ಬೇಡಿಕೆಗಳನ್ನು ಇನ್ನಷ್ಟು ಪೂರೈಸುವ ಸಲುವಾಗಿ ಲೀಕೊ, ಹೊಸ ಆಫರ್ ಅನ್ನು ರೂ 17,999 ಕ್ಕೆ ಘೋಷಿಸಿದ್ದು ತನ್ನ ಫ್ಲ್ಯಾಗ್‌ಶಿಪ್ ಫೋನ್ ಆದ ಲೀ ಮ್ಯಾಕ್ಸ್2 ಮೇಲೆ ಈ ದರವನ್ನು ವಿಧಿಸಿದೆ.
ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ
ಈ ಬೆಲೆಯಲ್ಲಿ ಲೀ ಮ್ಯಾಕ್ಸ್2, 5.7 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡು ಬಂದಿದ್ದು 21 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದೆ, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಇದರಲ್ಲಿದ್ದು 4ಜಿಬಿ RAM ಮತ್ತು 32 ಜಿಬಿ ROM ಅನ್ನು ಡಿವೈಸ್ ಒಳಗೊಂಡಿದೆ. ಇತರ ಫ್ಲ್ಯಾಗ್‌ಶಿಪ್ ಫೋನ್‌ಗಳಿಗೆ ಲೀ ಮ್ಯಾಕ್ಸ್ ಕಠಿಣ ಪೈಪೋಟಿಯನ್ನು ನೀಡುವುದಂತೂ ಖಂಡಿತ.
ಓದಿರಿ: ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

ಹಬ್ಬದ ಸೀಸನ್
ಹಬ್ಬದ ಈ ಸೀಸನ್‌ನಲ್ಲಿ ಲೀಮ್ಯಾಕ್ಸ್2 ಹೊಸ ಆಫರ್‌ಗಳು ಮತ್ತು ಬೆಲೆಗಳೊಂದಿಗೆ ಬಂದಿದ್ದು ಲೀಮಾಲ್, ಫ್ಲಿಪ್‌ಕಾರ್ಟ್, ಅಮೆಜಾನ್ ಇಂಡಿಯಾ ಮತ್ತು ಸ್ನ್ಯಾಪ್‌ಡೀಲ್‌ನಲ್ಲಿ ನಿರ್ದಿಷ್ಟ ಸಮಯದಲ್ಲಿ ಫೋನ್ ಲಭ್ಯವಾಗಲಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಲೀ ಮ್ಯಾಕ್ಸ್2 ರೂ 17,999 ಕ್ಕೆ ಲಭ್ಯವಾಗುತ್ತಿದ್ದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಮತ್ತು ಸ್ನ್ಯಾಪ್‌ಡೀಲ್ ಅನ್‌ಬಾಕ್ಸ್ ದಿವಾಲಿ ಸೇಲ್ ಅಕ್ಟೋಬರ್ 1 ರಿಂದ 6 ರವರೆಗೆ ನಡೆಯಲಿದೆ. ಲೀಮಾಲ್‌ನಿಂದ ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರಿಗೆ ಫ್ಲ್ಯಾಶ್ ಸೇಲ್ ಅನ್ನು ಸಪ್ಟೆಂಬರ್ 3೦ ಕ್ಕೆ ನೀಡಲಾಗಿದ್ದು ರೂ 2000 ದರದ ವಿಶೇಷ ವೋಚರ್ ಅನ್ನು ಗ್ರಾಹಕರಿಗೆ ಲೀ ಮಾಲ್ ನೀಡಲಿದೆ.

ವಿಶೇಷತೆ
ಲೀ ಮ್ಯಾಕ್ಸ್2, 5.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 2560x1440 ಪಿಕ್ಸೆಲ್‌ಗಳಲ್ಲಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಜೊತೆಗೆ 4ಜಿಬಿ RAM ಅನ್ನು ನೀವು ಪಡೆದುಕೊಳ್ಳಲಿದ್ದು 32 ಜಿಬಿ ಮೆಮೊರಿಯನ್ನು ನೀವು ಪಡೆದುಕೊಳ್ಳಲಿರುವಿರಿ.

ಸೂಪರ್ ಫೋನ್
ಸೂಪರ್ ಫೋನ್ 3,100mAh ಬ್ಯಾಟರಿಯೊಂದಿಗೆ ಬಂದಿದ್ದು ವಿಶ್ವದ ತ್ವರಿತ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ ಅಂತೆಯೇ 3ಜಿ, 4ಜಿ ಜೊತೆಗೆ ವೋಲ್ಟ್ ಬೆಂಬಲವನ್ನು ಇದು ನೀಡಲಿದೆ. ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಇದು ಹೊಂದಿದ್ದು ಲೀಕೊದ ಸಿಡಿಎಲ್‌ಎ ತಂತ್ರಜ್ಞಾನವನ್ನು ಇದು ಹೊಂದಿದೆ.

ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ
ಲೀ ಮ್ಯಾಕ್ಸ್2, 21 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 4 ಕೆ ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯಗಳನ್ನು ಡಿವೈಸ್ ಪಡೆದುಕೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

ಲೀಕೊ ಸದಸ್ಯತ್ವ
ಲೀ ಮ್ಯಾಕ್ಸ್2 ಬಳಕೆದಾರರು 1 ವರ್ಷದ ಲೀಕೊ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದು ಇದರ ಬೆಲೆ ರೂ 4,990 ಆಗಿದೆ. ಲೀಕೊ ಸದಸ್ಯತ್ವದ ಹೆಸರಿನಲ್ಲಿ ಇಂಡಸ್ಟ್ರಿಯ ದೊಡ್ಡ ದೊಡ್ಡ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಮನರಂಜನಾ ಕಂಪೆನಿ ಇರೋಸ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ರಂಜನೆ
ಬಳಕೆದಾರರಿಗೆ 2000 + ಚಲನ ಚಿತ್ರಗಳು, 3000+ ಗಂಟೆಗಳ ಕ್ಯುರೇಟೆಡ್ ಶೋ ಮತ್ತು 150+ ಲೈವ್ ಟಿವಿ ಚಾನಲ್‌ಗಳಲ್ಲಿ ರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಲೀ ಮ್ಯಾಕ್ಸ್2 ಕೂಡ ರಿಲಾಯನ್ಸ್ ಜಿಯೋ ವೆಲ್‌ಕಮ್ ಆಫರ್‌ಗೆ ಬೆಂಬಲವನ್ನು ನೀಡುತ್ತಿದ್ದು ಉಚಿತ ವಾಯ್ಸ್ ಮತ್ತು ಡೇಟಾ ಸೇವೆಗಳಿಗೆ ಪ್ರವೇಶವನ್ನು ಡಿಸೆಂಬರ್ 31, 2016 ರವರೆಗೆ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








