Subscribe to Gizbot

ಲೆನೊವೊ ದುಬಾರಿ ಬೆಲೆಯ ಫ್ಯಾಬ್ಲೆಟ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

Written By:

ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಐದನೇ ಸ್ಥಾನದಲ್ಲಿರುವ ಪಿಸಿ ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿರುವ ಲೆನೊವೊ ಕಂಪೆನಿ ದೇಶೀಯ ಮಾರುಕಟ್ಟೆಗೆ ದುಬಾರಿ ಬೆಲೆಯ ಸಿಂಗಲ್‌ ಮೈಕ್ರೋಸಿಮ್‌ ಹಾಕಬಹುದಾದ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಲೆನೊವೊ ವೈಬ್‌ ಝಡ್‌ ಬಿಡುಗಡೆ ಮಾಡಿದ್ದು, 35999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.ಈ ಫ್ಯಾಬ್ಲೆಟ್‌ ಬಿಡುಗಡೆಯಾಗಿದ್ದರೂ ಆನ್‌ಲೈನ್‌ ಶಾಪಿಂಗ್‌ ತಾಣ ಮತ್ತು ರಿಟೇಲ್‌ ಅಂಗಡಿಯಲ್ಲಿ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‌ ತಿಂಗಳಿನಲ್ಲಿ ಲಭ್ಯವಾಗಲಿದೆ.

ವಿವಿಧ ಕಂಪೆನಿಗಳ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ ಮತ್ತು ಸ್ಕ್ರೀನ್‌

1


149.1x77x7.9 ಮಿಮೀ ಗಾತ್ರದ ಫ್ಯಾಬ್ಲೆಟ್‌ 145.2 ಗ್ರಾಂ ತೂಕವನ್ನು ಹೊಂದಿದೆ.ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ 3, 401 ಪಿಪಿಐ, 1080 x 1920 ಪಿಕ್ಸೆಲ್‌ ರೆಸೂಲೂಶನ್‌‌ ಹೊಂದಿರುವ 5.5 ಇಂಚು ಹೊಂದಿರುವ ಐಪಿಎಸ್‌ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌‌ನ್ನು ಫ್ಯಾಬ್ಲೆಟ್ ಹೊಂದಿದೆ.

 ಓಎಸ್‌ ಮತ್ತು ಸೆನ್ಸರ್‌ಗಳು :

2


ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್ ಓಎಸ್‌ ಒಳಗೊಂಡಿರುವ ಫ್ಯಾಬ್ಲೆಟ್‌‌ ಪ್ರಾಕ್ಸಿಮಿಟಿ,ಗ್ರಾವಿಟೇಶನ್‌‌, ಇ-ಕಂಪಾಸ್‌‌,ಲೈಟ್‌ ಸೆನ್ಸರ್‌ಗಳನ್ನು ಹೊಂದಿದೆ

 ಪ್ರೊಸೆಸರ್‌

3


2.2 GHz ಕ್ವಾಡ್‌ ಕೋರ್‌ Krait 400 ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌‌, Adreno 330 ಗ್ರಾಫಿಕ್‌ ಪ್ರೊಸೆಸರ್‌ನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

 ಮೆಮೊರಿ ಮತ್ತು ಬ್ಯಾಟರಿ:

4


16 GB ಆಂತರಿಕ ಮೆಮೊರಿ ಹೊಂದಿರುವ ಫ್ಯಾಬ್ಲೆಟ್‌ 2 GB RAM ಒಳಗೊಂಡಿದೆ. ಆದರೆ ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಿಲ್ಲ. 3000 mAh ಬ್ಯಾಟರಿಯನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

 ಕ್ಯಾಮೆರಾ ಮತ್ತು ಕನೆಕ್ಟಿವಿಟಿ:

5


13 ಎಂಪಿ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ ಹಿಂದುಗಡೆ ಕ್ಯಾಮೆರಾ ಮುಂದುಗಡೆ 5 ಎಂಪಿ ಕ್ಯಾಮೆರಾವ ವೈಬ್‌ ಝಡ್‌ನಲ್ಲಿದೆ. 3ಜಿ,4ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌,ಎ-ಜಿಪಿಎಸ್‌ ಕನೆಕ್ಟಿವಿಟಿ ವಿಶೇಷತೆಗಳನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot