ಮುಂದಿನವಾರ ನೆಕ್ಸಸ್‌ 5 ಭಾರತದ ಮಾರುಕಟ್ಟೆಗೆ ಬಿಡುಗಡೆ!

By Ashwath
|

ಗೂಗಲ್‌ ಹೊಸ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌.ಗೂಗಲ್‌ನ ಹೊಸ ಸ್ಮಾರ್ಟ್‌‌ಫೋನ್‌ ನೆಕ್ಸಸ್‌ 5 ಸ್ಮಾರ್ಟ್‌‌ಫೋನ್‌ ಮುಂದಿನ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆಯಂತೆ. ಈ ಸಂಬಂಧ ಮುಂಬೈನ ಮೊಬೈಲ್‌ ರಿಟೇಲ್‌ ಮಳಿಗೆ ಮಹೇಶ್‌ ಟೆಲಿಕಾಂ ಮನೀಶ್‌ ಕಟ್ರಿ ಟ್ವೀಟ್‌ ಮಾಡಿದ್ದು ಮುಂದಿನ ವಾರ ಅಥವಾ ಈ ತಿಂಗಳ ಅಂತ್ಯಕ್ಕೆ ಭಾರತದ ಮಾರುಕಟ್ಟೆಗೆ ನೆಕ್ಸಸ್‌ ಬರಲಿದೆ ಎಂದು ಹೇಳಿದ್ದಾರೆ.

ಗೂಗಲ್‌ ಈಗಾಗಲೇ ನೆಕ್ಸಸ್‌ 5ಯ 16 GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 28,999 ರೂಪಾಯಿ 32 GB ಸ್ಮಾರ್ಟ್‌ಫೋನಿಗೆ 32,999 ಬೆಲೆಯನ್ನು ನಿಗದಿ ಪಡಿಸಿದ್ದು ತನ್ನ ಪ್ಲೇ ಸ್ಟೋರ್‌ನಲ್ಲಿ ಮಾಹಿತಿ ಪ್ರಕಟಿಸಿದೆ. ಹೊಸ ಸ್ಮಾರ್ಟ್‌ಫೋನ್‌ ಅಮೆರಿಕ,ಕೆನಡಾ,ಫ್ರಾನ್ಸ್‌,ಜರ್ಮನಿ,ಇಂಗ್ಲೆಂಡ್‌‌,ಇಟಲಿ, ಸ್ಪೈನ್‌,ಆಸ್ಟ್ರೇಲಿಯಾ,ಕೋರಿಯಾ ಮತ್ತು ಜಪಾನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗೂಗಲ್‌ನ ನೆಕ್ಸಸ್‌ 5 ಈ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಿತ್ತು. ಹೊಸ ಸ್ಮಾರ್ಟ್‌ಫೋನ್‌ ಫುಲ್‌ ಎಚ್‌ಡಿ ಸ್ಕ್ರೀನ್‌ ಮತ್ತು ಹೊಸ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಒಳಗೊಂಡಿದೆ.

ಎಲ್‌ಜಿ ನೆಕ್ಸಸ್‌ 5 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

<blockquote class="twitter-tweet blockquote"><p><a href="https://twitter.com/search?q=%23Nexus5&src=hash">#Nexus5</a> (new arrival) update - 16gb ₹29990/- with official LG warranty .stocks in two days <a href="http://t.co/8wt0QAUWC4">pic.twitter.com/8wt0QAUWC4</a></p>— Manish Khatri (@MAHESHTELECOM) <a href="https://twitter.com/MAHESHTELECOM/statuses/401644875189211136">November 16, 2013</a></blockquote> <script async src="//platform.twitter.com/widgets.js" charset="utf-8"></script>

ಎಲ್‌ಜಿ ನೆಕ್ಸಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

ಇದನ್ನೂ ಓದಿ: ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ ಒಳಗಡೆ ಹೇಗಿದೆ ನೋಡಿದ್ದೀರಾ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X