ಮೈಕ್ರೋಮ್ಯಾಕ್ಸ್‌ನಿಂದ 10 ಲಕ್ಷ ಕ್ಯಾನ್‌ವಾಸ್ ಸ್ಮಾರ್ಟ್‌ಫೋನ್ ಮಾರಾಟ

Posted By:

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸರಣಿಯ ಮೊಬೈಲ್‌ ಬಿಡುಗಡೆ ನಂತರ ಅದರ ಮಾರುಕಟ್ಟೆಯ ಟ್ರೆಂಡ್‌ ಬದಲಾಗಿದೆ. ಯಾಕೆಂದರೆ ಇದುವರಗೆ ಕ್ಯಾನ್‌ವಾಸ್‌ ಸರಣಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದ್ದೇವೆ ಎಂದು ಮೈಕ್ರೋಮ್ಯಾಕ್ಸ್‌ ಅಧಿಕೃತವಾಗಿ ಪ್ರಕಟಿಸಿದೆ.

ಸದ್ಯ ವಿಶ್ವದ ಟಾಪ್‌ ಕಂಪೆನಿಗಳ ಗುಣಮಟ್ಟ ಸ್ಮಾರ್ಟ್‌ಫೋನ್‌ಗಳ ನಡುವೆ ಅದಕ್ಕೆ ಸರಸಮಾನವಾಗಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ಫೇಮಸ್ಸಾಗಿರುವ ಮೈಕ್ರೋಮ್ಯಾಕ್ಸ್‌ ಕಂಪೆನಿ, ಈಗ ಈ ವರದಿಯನ್ನು ಬಹಿರಂಗ ಪಡಿಸುವ ಮೂಲಕ ಮೈಕ್ರೋಮ್ಯಾಕ್ಸ್‌ ಮತ್ತೊಮ್ಮೆ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಮತ್ತೊಮ್ಮೆ ಶಾಕ್‌ ನೀಡಿದೆ.

ಮೈಕ್ರೋಮ್ಯಾಕ್ಸ್‌ನಿಂದ 10 ಲಕ್ಷ ಕ್ಯಾನ್‌ವಾಸ್ ಸ್ಮಾರ್ಟ್‌ಫೋನ್ ಮಾರಾಟ

ಕಳೆದ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರವರಿಯವರೆಗೆ ಭಾರತದ ಗ್ರಾಹಕರು ಆನ್‌ಲೈನ್‌ನಲ್ಲಿ ಅತೀ ಹೆಚ್ಚು ಹುಡುಕಿದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಅಧ್ಯಯನ ನಡೆಸಿದ PrecisionMatch ಎನ್ನುವ ಸಂಸ್ಥೆ ಮೈಕ್ರೋಮ್ಯಾಕ್ಸ್‌ ಮೈಕ್ರೋಮ್ಯಾಕ್ಸ್‌ ಎ 110 ಕ್ಯಾನ್‌ವಾಸ್‌ 2 ಎರಡನೇ ಸ್ಥಾನ ನೀಡಿತ್ತು.

ಈಗಾಗಲೇ ದೇಶಿಯ ಕಂಪೆನಿಗಳಲ್ಲಿ ಟಾಪ್‌ ಕಂಪೆನಿಯಾಗಿರುವ ಮೈಕ್ರೋಮ್ಯಾಕ್ಸ್‌ ಕಳೆದ ವಾರವಾಷ್ಟೇ ಕ್ಯಾನ್‌ವಾಸ್‌ ಎ 115 3ಡಿ ಮೊಬೈಲ್‌ನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ಸಹ ತಿಳಿಸಿತ್ತು. ಒಟ್ಟಿನಲ್ಲಿ ಕ್ಯಾನ್‌ವಾಸ್‌ ಎ100, ಕ್ಯಾನ್‌ವಾಸ್‌ 100 ಎ, ಕ್ಯಾನ್‌ವಾಸ್‌ 116 ಎಚ್‌ಡಿ ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವದಲ್ಲಿ ಸಫಲವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot