ಕ್ಯಾನ್‌ವಾಸ್ 5: ಅಕ್ಟಾಕೋರ್,ಕಿಟ್‌ಕ್ಯಾಟ್ ಓಎಸ್‌ನಲ್ಲಿ ಬರುತ್ತಂತೆ!
ವಿದೇಶಿ ಬ್ರ್ಯಾಂಡ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಮೊದಲೇ ಸುದ್ದಿಯಾಗುತ್ತಿರುತ್ತದೆ. ಈಗ ದೇಶೀಯ ಮೈಕ್ರೋಮ್ಯಾಕ್ಸ್ ಕಂಪೆನಿ ಈ ವರ್ಷ ಬಿಡುಗಡೆ ಮಾಡಲಿರುವ ಕ್ಯಾನ್‌ವಾಸ್ 5 ಸ್ಮಾರ್ಟ್‌ಫೋನ್ ಸುದ್ದಿಯಾಗಲು ಆರಂಭಿಸಿದೆ.
ಕ್ಯಾನ್‌ವಾಸ್ ಟರ್ಬೋ ಫುಲ್ ಎಚ್‌ಡಿ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ ಬಳಿಕ ಅಕ್ಟಾ ಕೋರ್ ಪ್ರೊಸೆಸರ್ ಸ್ಮಾರ್ಟ್‌ಫೋನ್ ತಯಾರಿಸುವುದಾಗಿ ಹೇಳಿತ್ತು. ಮೈಕ್ರೋಮ್ಯಾಕ್ಸ್ ಸುದ್ದಿಗಳನ್ನು ಪ್ರಕಟಿಸುವ micromaxcanvas.co.in ತನ್ನ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ವಿಶೇಷತೆ ಬಗ್ಗೆ ಕೆಲವು ಮಾಹಿತಿ ಪ್ರಕಟಿಸಿದ್ದು ಕ್ಯಾನ್‌ವಾಸ್ 5 ಮೀಡಿಯಾ ಟೆಕ್ ಅಕ್ಟಾಕೋರ್ ಸ್ಮಾರ್ಟ್‌ಫೋನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಜೊತೆಗೆ ಸ್ಮಾರ್ಟ್‌ಫೋನ್ ಕಿಟ್‌ಕ್ಯಾಟ್ ಓಎಸ್ ಹೊಂದಿರುತ್ತದೆ ಎಂದು ಹೇಳಿದೆ.

2GB RAM, 16ಜಿಬಿ ಆಂತರಿಕ ಮೆಮೊರಿ,32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,ಹಿಂದುಗಡೆ 16 ಎಂಪಿ ಅಥವಾ 13 ಎಂಪಿ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ ವನ್ನು ಒಳಗೊಂಡಿರುತ್ತದೆ ಎಂದು ವೆಬ್‌ಸೈಟ್ ಹೇಳಿದೆ.
ಸ್ಮಾರ್ಟ್‌ಫೋನ್ 5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್,65X82.8X8 ಮಿ.ಮೀಟರ್ ಗಾತ್ರ,190 ಗ್ರಾಂ ತೂಕವನ್ನು ಹೊಂದಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ.
ಸ್ಮಾರ್ಟ್‌ಫೋನ್ ಬಿಡುಗಡೆ ಮತ್ತು ಬೆಲೆಯ ಬಗ್ಗೆ ವೆಬ್‌ಸೈಟ್ ಯಾವುದೇ ಮಾಹಿತಿ ಪ್ರಕಟಿಸಿಲ್ಲ.ಈಗಾಗಲೇ ಇಂಟೆಕ್ಸ್ ಮತ್ತು iberry ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಅಕ್ಟಾ ಕೋರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಹೀಗಾಗಿ ಮೈಕ್ರೋಮ್ಯಾಕ್ಸ್ ಅಂದಾಜು 20 ಸಾವಿರ ರೂ. ಒಳಗಡೆ ಈ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ


Click it and Unblock the Notifications