Subscribe to Gizbot

ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಮತ್ತೊಂದು ಎಚ್‌ಡಿ ಸ್ಮಾರ್ಟ್‌ಫೋನ್‌

Posted By:

ಮೈಕ್ರೋಮ್ಯಾಕ್ಸ್‌ಗೆ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿದ್ದ ಕ್ಯಾನ್‌ವಾಸ್‌ ಎಚ್‌ಡಿಯನ್ನು ಮತ್ತೊಂದು ಹೆಸರಿನಲ್ಲಿ ಬಿಡುಗಡೆ ಮಾಡಲು ಮೈಕ್ರೋಮ್ಯಾಕ್ಸ್‌ ಈಗ ಮುಂದಾಗಿದೆ. ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಎ116ಐ ಹೆಸರಿನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದ್ದು ಆನ್‌ಲೈನ್‌ ಶಾಪಿಂಗ್‌ ತಾಣ ಇಬೇಯಲ್ಲಿ ಲಿಸ್ಟ್‌ ಆಗಿದೆ.

ಈ ಸ್ಮಾರ್ಟ್‌ಫೋನ್‌ಗೆ 14,299 ಬೆಲೆಯನ್ನು ಮೈಕ್ರೋಮ್ಯಾಕ್ಸ್‌ ನಿಗದಿ ಮಾಡಿದೆ. ಮೈಕ್ರೋಮ್ಯಾಕ್ಸ್‌ ಈ ವರ್ಷದ ಫೆಬ್ರವರಿಯಲ್ಲಿ ಕ್ಯಾನ್‌ವಾಸ್‌ ಎಚ್‌ಡಿಯನ್ನು13,990 ಬೆಲೆಯನ್ನು ಬಿಡುಗಡೆ ಮಾಡಿತ್ತು.ಬಿಡುಗಡೆ ಮಾಡಿದ 24 ಗಂಟೆಯಲ್ಲೇ 9 ಸಾವಿರ ಸ್ಮಾರ್ಟ್‌ಫೋನ್‌ ಮಾರಾಟವಾಗಿತ್ತು. ಅಷ್ಟೇ ಅಲ್ಲದೇ ಒಂದು ನಿಮಿಷದಲ್ಲಿ 25 ಹ್ಯಾಂಡ್‌ಸೆಟ್‌ಗಳು ಖರೀದಿಯಾಗುತಿತ್ತು ಎಂದು ಮೈಕ್ರೋಮ್ಯಾಕ್ಸ್‌ ಹೇಳಿತ್ತು. ಈ ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದರೂ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಮತ್ತು ಬೆಲೆ ಕಡಿಮೆಯಾಗಿಲ್ಲ.ಈಗಲೂ 13,512 ಬೆಲೆಯಲ್ಲಿ ಸ್ಮಾರ್ಟ್‌‌ಫೋನ್‌ ಮಾರಾಟವಾಗುತ್ತಿದೆ.

ಹೊಸ ಕ್ಯಾನ್‌ವಾಸ್‌ ಎಚ್‌ಡಿ ಜೆಲ್ಲಿಬೀನ್‌ 4.1 ಓಎಸ್‌ ಬಿಡುಗಡೆಯಾಗುತ್ತಿದ್ದರೂ 4.2ಗೆ ಅಪ್‌ಡೇಟ್‌ ಮಾಡಬಹುದಾಗಿದೆ.ಜೊತೆಗೆ ಸ್ಮಾರ್ಟ್‌‌ಫೋನ್‌ಗೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡುವ ಸಾಧ್ಯತೆ ಇದೆ. ಮೈಕ್ರೋಮ್ಯಾಕ್ಸ್‌ ಈ ಸ್ಮಾರ್ಟ್‌ಫೋನನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

 ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಮತ್ತೊಂದು ಎಚ್‌ಡಿ ಸ್ಮಾರ್ಟ್‌ಫೋನ್‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಎ116ಐ
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌)
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಇದನ್ನೂ ಓದಿ: ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot