Subscribe to Gizbot

ಮೈಕ್ರೋಮ್ಯಾಕ್ಸ್‌ನಿಂದ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ವಿಶ್ವದ ಮೊದಲ ಡ್ಯುಯಲ್‌ ಓಎಸ್‌ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದ ದೇಶೀಯ ನಂಬರ್‌2 ಸ್ಮಾರ್ಟ್‌‌ಫೋನ್‌ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್‌ ಈಗ ಪ್ರಥಮ ಅಕ್ಟಾ ಕೋರ್‌(ಎಂಟು ಕೋರ್‌) ಪ್ರೊಸೆಸರ್‌ ಹೊಂದಿರುವ ಡ್ಯುಯಲ್ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ನೈಟ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದ್ದು19,999 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ. ಮೀಡಿಯಾ ಟೆಕ್‌ ಕಂಪೆನಿ ಅಭಿವೃದ್ಧಿ ಪಡಿಸಿರುವ  2GHz MT6592T  ಅಕ್ಟಾ ಕೋರ್‌ ಪ್ರೊಸೆಸರ್‌ನ್ನು ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌‌,ಜಿಪಿಎಸ್‌ ಕನೆಕ್ಟಿವಿಟಿ ವಿಶೇಷತೆ ಒಳಗೊಂಡಿರುವ ಸ್ಮಾರ್ಟ್‌‌‌ಫೋನ್‌ ಮೂರು ಬಣ್ಣದಲ್ಲಿಈ ಬಿಡುಗಡೆಯಾಗಿದೆ.ಅಲ್ಯೂಮಿನಿಯಂ ದೇಹವನ್ನು ಹೊಂದಿರುವ ಸ್ಮಾರ್ಟ್‌‌ಫೋನ್‌ ಕಪ್ಪು ಮತ್ತು ಚಿನ್ನ,ಬಿಳಿ ಮತ್ತು ಚಿನ್ನ, ಸಂಪೂರ್ಣ‌ ಕಪ್ಪು ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಪ್ಲೇ:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ


443 ಪಿಪಿಐ,1920x1080 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 5 ಇಂಚಿನ ಐಪಿಎಸ್‌ ಫುಲ್‌ ಎಚ್‌ಡಿ ಸ್ಕ್ರೀನ್‌ ಈ ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

 ಓಎಸ್‌ ಮತ್ತು ಸೆನ್ಸರ್‌:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ


ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌, ಲೈಟ್‌ ಸೆನ್ಸರ್‌,ಪ್ರಾಕ್ಸಿಮಿಟಿ ಸೆನ್ಸರ್‌‌,ಮ್ಯಾಗ್ನಟಿಕ್‌ ಸೆನ್ಸರ್‌‌,ಗೈರೋಸ್ಕೋಪ್‌,ಗ್ರಾವಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ.

 ರ್‍ಯಾಮ್‌ ಮತ್ತು ಮೆಮೊರಿ:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ


2ಜಿಬಿ ರ್‍ಯಾಮ್‌ ಒಳಗೊಂಡಿರುವ ಸ್ಮಾರ್ಟ್‌‌ಫೋನ್‌ 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ.ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ನೀಡಿಲ್ಲ. ಆಂತರಿಕ ಮಮೊರಿಯಲ್ಲಿ 25 ಜಿಬಿವರೆಗೆ ಡೇಟಾವನ್ನು ಬಳಕೆದಾರರು ಸಂಗ್ರಹಿಸಬಹುದು ಎಂದು ಮೈಕ್ರೋಮ್ಯಾಕ್ಸ್‌ ತಿಳಿಸಿದೆ.

 ಬ್ಯಾಟರಿ:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ


2350mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.
ಸ್ಟ್ಯಾಂಡ್‌ ಬೈ ಟೈಂ- 175 ಗಂಟೆ
ಟಾ‌ಕ್‌ ಟೈಂ - 7.5 ಗಂಟೆ

 ಕ್ಯಾಮೆರಾ:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ

ಸ್ಮಾರ್ಟ್‌ಫೋನ್‌ ಹಿಂದುಗಡೆ 16 ಎಂಪಿ ಕ್ಯಾಮೆರಾ ಒಳಗೊಂಡಿದೆ.
ಬೆಳಕಿನಲ್ಲೂ ಚೆನ್ನಾಗಿ ಫೋಟೋ ಕ್ಲಿಕ್‌ ಮಾಡಲು OmniVision ಕ್ಯಾಮೆರಾ ಚಿಪ್‌ ಸೆನ್ಸರ್‌ ಮತ್ತುM8 Largan ಲೆನ್ಸ್‌‌ ಈ ಕ್ಯಾಮೆರಾಕ್ಕೆ ಮೈಕ್ರೋಮ್ಯಾಕ್ಸ್‌ ನೀಡಿದೆ.ಮುಂದುಗಡೆ 8 ಎಂಪಿ ಕ್ಯಾಮೆರಾವನ್ನು ಒಳಗೊಂಡಿದೆ. ಕಡಿಮೆ

 ಪ್ರಿ ಲೊಡೆಡ್‌ ಅಪ್ಲಿಕೇಶನ್‌:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ನೈಟ್‌ ಬಿಡುಗಡೆ


ಹೈಕ್‌‌,ಒಪೆರಾ, ಎಂಲೈವ್‌‌,ರಿಯಲ್ ಸ್ಟೀಲ್‌‌‌,ವೆರ್‌ ಇಸ್‌ ಮೈ ವಾಟರ್‌‌,ಬಿಬಿಎಂ,ಟ್ರೂ ಕಾಲರ್‌‌,ಕಿಂಗ್‌ಸಾಫ್ಟ್‌‌ ಆಫೀಸ್‌‌ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot