ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ

By Ashwath
|

ಪ್ರಪ್ರಥಮ ಬಾರಿಗೆ ದೇಶೀಯ ಸ್ಮಾರ್ಟ್‌‌‌ಫೋನ್‌ ತಯಾರಕ‌‌ ಕಂಪೆನಿ ಮೈಕ್ರೋಮ್ಯಾಕ್ಸ್‌‌‌ ರಷ್ಯಾದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ರಷ್ಯಾದ ಪ್ರಮುಖ ವಿತರಕ ಕಂಪೆನಿ ವಿವಿಪಿ ಸಮೂಹದ ಮೂಲಕ ಮೈಕ್ರೋಮ್ಯಾಕ್ಸ್‌‌‌‌ ತನ್ನ ಸ್ಮಾರ್ಟ್‌‌‌ಫೋನ್‌ಗಳನ್ನು ವಿತರಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಮೈಕ್ರೋಮ್ಯಾಕ್ಸ್‌ ಈಗಾಗಲೇ ರಷ್ಯನ್ ಭಾಷೆಯಲ್ಲಿರುವ ವೆಬ್‌ಸೈಟ್‌ನ್ನು ತೆರೆದಿದ್ದು ಕ್ಯಾನ್‌ವಾಸ್‌ ಮತ್ತು ಬೋಲ್ಟ್‌ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಆರಂಭಿಕ ಹಂತವಾಗಿ ಮಾರಾಟ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಬಿಡುಗಡೆಯಾದ ಸ್ಮಾರ್ಟ್‌‌ಫೋನಿನ ಹೆಸರನ್ನು ಬದಲಾವಣೆ ಮಾಡಿ ಮಾರಾಟ ಮಾಡಲು ಮೈಕ್ರೋಮ್ಯಾಕ್ಸ್‌ ಮುಂದಾಗಿದ್ದು,ಇತ್ತೀಚಿಗೆ ಬಿಡುಗಡೆಯಾದ ಮೈಕ್ರೋಮ್ಯಾಕ್ಸ್ ಮ್ಯಾಡ್‌ಗೆ, ಮೈಕ್ರೋಮ್ಯಾಕ್ಸ್‌ ಸೋಶಿಯಲ್‌ ಹೆಸರು, ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 2.2ಗೆ ಕ್ಯಾನ್‌ವಾಸ್‌ ಬೀಟ್‌‌ ಹೆಸರನ್ನಿರಿಸಿದೆ.

ಕಳೆದ ನವೆಂವರ್‌ನಲ್ಲಿ ರಷ್ಯಾ ಬ್ರಝಿಲ್‌ ದೇಶಗಳ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ ಗಳನ್ನು ಜನವರಿಯಲ್ಲಿ ಬಿಡುಗಡೆ ಮಾಡುವುದಾಗಿ ಮೈಕ್ರೋಮ್ಯಾಕ್ಸ್‌ ಹೇಳಿತ್ತು.

1999ರಲ್ಲಿಸಾಫ್ಟ್‌ವೇರ್‌ ಕಂಪೆನಿಯಾಗಿ ಆರಂಭಗೊಂಡ ಮೈಕ್ರೋಮ್ಯಾಕ್ಸ್‌ ,2008ರಲ್ಲಿ ತನ್ನ ಪ್ರಥಮ ಮೊಬೈಲ್‌ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌,ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಸದ್ಯ ದೇಶದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ರಷ್ಯಾದ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ ಬಳಿಕ ಬಾಂಗ್ಲದೇಶ, ಶ್ರೀಲಂಕಾ,ನೇಪಾಳ,ಅರಬ್‌ ರಾಷ್ಟ್ರಗಳಲ್ಲಿ ಸ್ಮಾರ್ಟ್‌‌‌‌‌ಫೋನ್‌ ಬಿಡುಗಡೆ ಮಾಡಲು ಮೈಕ್ರೋಮ್ಯಾಕ್ಸ್‌ ಯೋಜನೆ ರೂಪಿಸಿದೆ.

ಮುಂದಿನ ಪುಟದಲ್ಲಿ ಮೈಕ್ರೋಮ್ಯಾಕ್ಸ್‌ಗೆ ಸಂಬಂಧಿಸಿದ ಕೆಲವು ಸ್ವಾರಸ್ಯಕರ ಸುದ್ದಿಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.ನಿಮ್ಮ ಅಭಿಪ್ರಾಯ ದಾಖಲಿಸಿ.

 ರಷ್ಯನ್‌ ಮಾರುಕಟ್ಟೆಗೆ  ಮೈಕ್ರೋಮ್ಯಾಕ್ಸ್‌ ಎಂಟ್ರಿ

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ಕಳೆದ ವರ್ಷ ಗೂಗಲ್‌ ಸರ್ಚ್‌‌ನಲ್ಲಿ ಹೆಚ್ಚು ಜನ ಹುಡುಕಿದ ಟಾಪ್‌ ಸ್ಮಾರ್ಟ್‌ಫೋನ್‌ಗಳ ಕಂಪೆನಿಯ ಸ್ಥಾನ ಪಟ್ಟಿಯಲ್ಲಿ ಮೈಕ್ರೋಮ್ಯಾಕ್ಸ್‌ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಟಾಪ್‌ -10 ಸ್ಮಾರ್ಟ್‌‌‌ಫೋನ್‌ಗಳ ಪಟ್ಟಿಯಲ್ಲಿ ಮೈಕ್ರೋಮ್ಯಾಕ್ಸ್‌ನ ಮೂರು ಸ್ಮಾರ್ಟ್‌ಫೋನ್‌ಗಳು ಸ್ಥಾನಸ್ಥಾನ ಪಡೆದುಕೊಂಡಿತ್ತು.

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ವಿಶ್ವದ ಪ್ರಥಮ ಡ್ಯುಯಲ್‌ ಓಎಸ್‌ ಟ್ಯಾಬ್ಲೆಟ್‌ನ್ನು ಮೈಕ್ರೋಮ್ಯಾಕ್ಸ್‌ ತಯಾರಿಸಿದೆ. ಕ್ಯಾನ್‌ವಾಸ್‌ ಲ್ಯಾಪ್‌ಟಾಬ್‌ನ್ನು ಮೈಕ್ರೋಮ್ಯಾಕ್ಸ್‌ ಅಭಿವೃದ್ಧಿ ಪಡಿಸಿದ್ದು ಜನವರಿಯಲ್ಲಿ ಸಿಇಎಸ್‌ಲ್ಲಿ ಈ ಲ್ಯಾಪ್‌ಟಾಬ್‌ನ್ನು ಬಿಡುಗಡೆ ಮಾಡಿದೆ. ವಿಂಡೋಸ್‌ 8 ಮತ್ತು ಆಂಡ್ರಾಯ್ಡ್ ಓಎಸ್‌ ಹೊಂದಿರುವ ಈ ಟ್ಯಾಬ್ಲೆಟ್‌‌‌‌ನ್ನು ಭಾರತದ ಮಾರುಕಟ್ಟೆಗೆ ಅಂದಾಜು 30 ಸಾವಿರದೊಳಗೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದೆ.

 ರಷ್ಯನ್‌ ಮಾರುಕಟ್ಟೆಗೆ  ಮೈಕ್ರೋಮ್ಯಾಕ್ಸ್‌ ಎಂಟ್ರಿ

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ಮೈಕ್ರೋಮ್ಯಾಕ್ಸ್‌ಗೆ 2013ರಲ್ಲಿ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸ್ಮಾರ್ಟ್‌ಫೋನ್‌ ಕ್ಯಾನ್‌ವಾಸ್‌ ಎಚ್‌ಡಿ.ಬಿಡುಗಡೆಯಾದ ಒಂದೇ ದಿನದಲ್ಲಿ 9 ಸಾವಿರ ಕ್ಯಾನ್‌ವಾಸ್‌ ಎಚ್‌ಡಿ 116 ಸ್ಮಾರ್ಟ್‌‌‌‌‌ಫೋನ್‌ ಮಾರಾಟವಾಗಿತ್ತು.

 ರಷ್ಯನ್‌ ಮಾರುಕಟ್ಟೆಗೆ  ಮೈಕ್ರೋಮ್ಯಾಕ್ಸ್‌ ಎಂಟ್ರಿ

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ಮೈಕ್ರೋಮ್ಯಾಕ್ಸ್‌ ಈಗ ದೇಶದಲ್ಲೇ ಸ್ಮಾರ್ಟ್‌‌‌ಫೋನ್‌‌ ಬಿಡಿಭಾಗಗಳನ್ನು ಜೋಡಿಸುವ ಕಾರ್ಖಾನೆ ತೆರೆಯಲು ‌‌ ಮುಂದಾಗಿದೆ. ಈಗಾಗಲೇ ಉತ್ತರಖಂಡ್‌ದ ರುದ್ರಪುರದಲ್ಲಿ ಕಾರ್ಖಾನೆ ತೆರೆದಿದ್ದು ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳ ಜೋಡಣೆಯ ಕೆಲಸ ಪ್ರಯೋಗಿಕವಾಗಿ ಆರಂಭವಾಗಿದೆ.

 ರಷ್ಯನ್‌ ಮಾರುಕಟ್ಟೆಗೆ  ಮೈಕ್ರೋಮ್ಯಾಕ್ಸ್‌ ಎಂಟ್ರಿ

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ಐಡಿಸಿ ಮತ್ತು ಭಾರತದ ಡಿಜಿಟಲ್‌ ಮೀಡಿಯಾಗಳನ್ನು ಅಧ್ಯಯನ ಮಾಡುವ ethinos.com ವರದಿ ಪ್ರಕಾರ ಭಾರತದ ಸ್ಮಾರ್ಟ್‌ಫೋನ್‌‌ ಮಾರುಕಟ್ಟೆ ಪಾಲಿನಲ್ಲಿ ಸ್ಯಾಮ್‌ಸಂಗ್‌ ನಂಬರ್‌ ಒನ್‌ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನವನ್ನು ಮೈಕ್ರೋಮ್ಯಾಕ್ಸ್‌ ಪಡೆದುಕೊಂಡಿದೆ.

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ದೇಶೀಯ ಕಂಪೆನಿಗಳ ಉತ್ಪನ್ನಗಳ ಪ್ರಚಾರಕ್ಕೆ ಹಾಲಿವುಡ್‌ ಸೆಲೆಬ್ರಿಟಿಗಳ್ಯಾರು ಇದುವರೆಗೂ ರಾಯಭಾರಿಗಳಾಗಿರಲಿಲ್ಲ.ಆದರೆ ಮೈಕ್ರೋಮ್ಯಾಕ್ಸ್‌ ತನ್ನ ಮೊದಲ ಫುಲ್‌ ಎಚ್‌ಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ ಕ್ಯಾನ್‌ವಾಸ್‌ ಟರ್ಬೋ‌ಗೆ ಆಸ್ಟ್ರೇಲಿಯಾದ ಹಾಲಿವುಡ್‌ ಸೆಲೆಬ್ರಿಟಿ ಹ್ಯೂ ಜ್ಯಾಕ್‌ಮನ್‌ರನ್ನು ನೇಮಿಸಿದೆ. ಈ ಮೂಲಕ ಪ್ರಪ್ರಥಮ ಬಾರಿಗೆ ಹಾಲಿವುಡ್‌‌ ಸೆಲೆಬ್ರಿಟಿಯನ್ನು ನೇಮಿಸಿದ ಕಂಪೆನಿ ಎಂಬ ಹಿರಿಮೆಗೆ ಮೈಕ್ರೋಮ್ಯಾಕ್ಸ್ ಪಾತ್ರವಾಗಿದೆ.

 ರಷ್ಯನ್‌ ಮಾರುಕಟ್ಟೆಗೆ  ಮೈಕ್ರೋಮ್ಯಾಕ್ಸ್‌ ಎಂಟ್ರಿ

ರಷ್ಯನ್‌ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್‌ ಎಂಟ್ರಿ


ಮೈಕ್ರೋಮ್ಯಾಕ್ಸ್‌‌ ಪ್ರಸಿದ್ದವಾಗಿದ್ದರೂ ಅದರ ಸ್ಮಾರ್ಟ್‌ಫೋನ್‌ ವಿಶೇಷತೆ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಸ್ಯಾಮ್‌ಸಂಗ್‌ ಸೇರಿದಂತೆ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು Snapdragons ಮತ್ತುExynos ಪ್ರೊಸೆಸರ್‌ಗಳನ್ನು ಬಳಸುತ್ತಿದ್ದರೆ, ಮೈಕ್ರೋಮ್ಯಾಕ್ಸ್‌ ಮಿಡಿಯಾ ಟೆಕ್‌ ಕಂಪೆನಿಯ ಕ್ವಾಡ್‌ ಪ್ರೊಸೆಸರ್‌ಗಳನ್ನೇ ಬಳಸುತ್ತಿದೆ. ಮಿಡಿಯಾ ಟಕ್‌ ಕಂಪೆನಿ ಕ್ವಾಡ್‌ ಕೋರ್‌ ಪ್ರೊಸೆಸರ್‌ Snapdragons ಮತ್ತುExynos ನ ಡ್ಯುಯಲ್‌ ಕೋರ್‌ ಪ್ರೊಸೆಸರ್‌ಗೆ ಕಾರ್ಯದಕ್ಷತೆ ಒಂದೇ ಎಂದು ಕೋರಾದಲ್ಲಿ ವಾದಿಸುವವರಿದ್ದಾರೆ. ಈ ರೀತಿ ಹೇಳಿಕೆ ಬಂದರೂ ಸದ್ಯ ಮೈಕ್ರೋಮ್ಯಾಕ್ಸ್‌ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕದೇಶದಲ್ಲಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X