Home
ಮೊಬೈಲ್

6,499 ರೂ. ದರದಲ್ಲಿ ಮೈಕ್ರೋಮ್ಯಾಕ್ಸ್‌ ಎ68 ಸ್ಮಾರ್ಟಿ ಬಿಡುಗಡೆ

By Vijeth Kumar Dn

6,499 ರೂ. ದರದಲ್ಲಿ ಮೈಕ್ರೋಮ್ಯಾಕ್ಸ್‌ ಎ68 ಸ್ಮಾರ್ಟಿ ಬಿಡುಗಡೆ

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿನ ಬಜೆಟ್‌ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಥಳೀಯ ತಯಾರಿಕಾ ಸಂಸ್ಥೆಯಾದಂತಹ ಮೈಕ್ರೋಮ್ಯಾಕ್ಸ್‌ ಇದೀಗ ಮತ್ತೊಂದು ಬಜೆಟ್‌ ರೇಂಜಿನ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ ಅನ್ನು ರೂ. 6,499 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್‌ ಇತ್ತೀಚೆಗಷ್ಟೇ ರೂ. 3,255 ದರದಲ್ಲಿ ಎ25 ಹಾಗೂ ರೂ. 9,999 ದರದಲ್ಲಿ ಎ110 ಕ್ಯಾನ್ವಾಸ್‌ 2 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು ಇದೀಗ ಎ68 ಸ್ಮಾರ್ಟಿ ಹೆಸರಿನ ನೂತನ ಆಂಡ್ರಾಯ್ಡ್‌ ಐಸಿಎಸ್‌ ಚಾಲಿತ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಅಂದಹಾಗೆ ಮಾರುಕಟ್ಟೆಯಲ್ಲಿನ ಇತರೇ ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ನೂತನ ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನೀಡಲಾಗಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.

ದರ್ಶಕ: ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ನಲ್ಲಿ 4 ಇಂಚಿನ ಐಪಿಎಸ್‌ ಕೆಪಾಸಿಟೀವ್‌ ದರ್ಶಕ ಹಾಗೂ 480 x 800 ಪಿಕ್ಸೆಲ್‌ ರೆಸೆಲ್ಯೂಷನ್‌ ನೀಡಲಾಗಿದೆ.

ಪ್ರೊಸೆಸರ್‌: 1GHz ಸಾಮರ್ತ್ಯದ ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಸ್ಮಾರ್ಟ್‌ಫೋನ್‌ ಆದ್ದರಿಂದ ಆಂಡ್ರಾಯ್ಡ್‌ 4.0.4 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಈ ವಿಚಾರದಲ್ಲಿ ನೂತನ ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ನಲ್ಲಿ ಹಿಂಬದಿಯ 5MP ಕ್ಯಾಮೆರಾ ನೀಡಲಾಗಿದ್ದು ವಿಡಿಯೋ ಕಾಲಿಂಗ್‌ಗಾಗಿ ಮುಂಬದಿಯ ಕ್ಯಾಮೆರಾ ನೀಡಲಾಗಿಲ್ಲ.

ಸ್ಟೋರೇಜ್‌: 2GB ಆಂತರಿಕ ಸ್ಟೋರೇಜ್, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ವೈ-ಫೈ, 2ಜಿ, GPRS ಹಾಗೂ ಬ್ಲೂಟೂತ್‌ ನಂತಹ ಕನೆಕ್ಟಿವಿಟಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ: ನೂತನ ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ನಲ್ಲಿ 1,600 mAh ಸಾಮರ್ತ್ಯದ ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 5 ಗಂಟೆಗಳ ಟಾಕ್‌ ಟೈಮ್‌ ಹಾಗೂ 144 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ ಹಾಗೂ ಲಭ್ಯತೆ

ಖರೀದಿಸುವುದಾದರೆ ಮೈಕ್ರೋಮ್ಯಾಕ್ಸ್‌ನ ನೂತನ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟಿ ಎ68 ಸ್ಮಾರ್ಟ್‌ಫೋನ್‌ ರೂ. 6,499 ದರದಲ್ಲಿ ಲಭ್ಯವಿದ್ದು ಆನ್‌ಲೈನ್‌ ಸೈಟ್‌ಗಳಾದ ಫ್ಲಿಪ್‌ಕಾರ್ಟ್‌ ಹಾಗೂ ಸಹೋಲಿಕ್‌ನಲ್ಲಿ ಖರಿದಿಸಬಹುದಾಗಿದೆ.

Read In English...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+