ಮೋಟೋ ಜಿ (3 ನೇ ಜನರೇಶನ್) ಗುಣ ಮತ್ತು ಅವಗುಣಗಳು

By Shwetha
|

ಮೂರನೇ ಜನರೇಶನ್ ಮೋಟೋ ಜಿ ಅಂತೂ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುವುದರ ಮೂಲಕ ನಿರೀಕ್ಷೆಯನ್ನು ಅಂತ್ಯಗೊಳಿಸಿದೆ. 8ಜಿಬಿ ಆವೃತ್ತಿಯ 1ಜಿಬಿ RAM ಉಳ್ಳ ಈ ಡಿವೈಸ್ ರೂ 11,999 ಕ್ಕೆ ಲಭ್ಯವಾಗುತ್ತಿದೆ. ಇನ್ನು 16 ಜಿಬಿ ಮಾಡೆಲ್ 2 ಜಿಬಿ RAM ಉಳ್ಳ ಡಿವೈಸ್ ರೂ 12,999 ಕ್ಕೆ ದೊರೆಯುತ್ತಿದೆ.

ಓದಿರಿ: ಮೋಟೋ ಜಿ 3 ಜನರೇಶನ್ ಫೋನ್ ಉಚಿತ ಉಚಿತ ಉಚಿತ

ಮೋಟೋ ಅಸಿಸ್ಟ್, ಮೋಟೋ ಆಕ್ಶನ್, ಮೋಟೋ ಡಿಸ್‌ಪ್ಲೇ ಮೊದಲಾದ ಫೀಚರ್‌ಗಳೊಂದಿಗೆ ಲಾಲಿಪಪ್ ಜೊತೆಗೆ ಬಂದಿದೆ. 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ರೆಸಲ್ಯೂಶನ್ 1280x720 ಪಿಕ್ಸೆಲ್ ಆಗಿದೆ. 1.2GHZ ಕ್ವಾಡ್ ಕೋರ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯುವನ್ನು ಇದು ಹೊಂದಿದೆ. ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಎಂದೆನಿಸಿದೆ.

ಓದಿರಿ: ಸರಳ ಹಂತ ಅನುಸರಿಸಿ ಮೋಟೋ ಜಿ ವೇಗ ವರ್ಧಿಸಿ

ಇಂದಿನ ಲೇಖನದಲ್ಲಿ ಫೋನ್‌ನ ಗುಣಗಳು ಮತ್ತು ಅವಗುಣಗಳ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ದೊಡ್ಡ ಡಿಸ್‌ಪ್ಲೇ

ದೊಡ್ಡ ಡಿಸ್‌ಪ್ಲೇ

5 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿದೆ. ಇದು ದೊಡ್ಡದಾದ 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1280x720 ಪಿಕ್ಸೆಲ್‌ಗಳು ಇದರಲ್ಲಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆಯನ್ನು ಡಿವೈಸ್ ಪಡೆದುಕೊಂಡಿದೆ.

2 ಜಿಬಿ RAM

2 ಜಿಬಿ RAM

ಇನ್ನು ಡಿವೈಸ್ 2 ಜಿಬಿ RAM ಅನ್ನು ಪಡೆದುಕೊಂಡಿದ್ದು, ಈ ಬೆಲೆಯಲ್ಲಿ ಇದು ಬಂಪರ್ ಲಾಟರಿ ಎಂದೆನಿಸಿದೆ. ಇನ್ನು ಎರಡು ಸಂಗ್ರಹಣಾ ಸಾಮರ್ಥ್ಯದೊಂದಿಗೆ ಡಿವೈಸ್ ಬಂದಿದೆ 8ಜಿಬಿ ಸಂಗ್ರಹಣಾ ಸಾಮರ್ಥ್ಯ 1ಜಿಬಿ RAM, ಇನ್ನೊಂದು 16ಜಿಬಿ ಸಂಗ್ರಹಣಾ ಸಾಮರ್ಥ್ಯ 2ಜಿಬಿ RAM ಅನ್ನು ಪಡೆದುಕೊಂಡಿದೆ.

ಜಲ ಪ್ರತಿರೋಧಕ

ಜಲ ಪ್ರತಿರೋಧಕ

ಮೂರನೇ ಜನರೇಶನ್ ಮೋಟೋ ಜಿ IPx7 ಪ್ರಮಾಣೀಕರಣದೊಂದಿಗೆ ಬಂದಿದ್ದು, 3 ಫೀಟ್‌ನ ನೀರಿನೊಳಗೆ 30 ನಿಮಿಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ತನ್ನ ಪ್ರಿಡ್ರೆಸಸರ್‌ನೊಂದಿಗೆ ಕ್ಯಾಮೆರಾ ವಿಭಾಗ ಹೆಚ್ಚು ಅದ್ಭುತ ಎಂದೆನಿಸಿದೆ. ಮೋಟೋ ಜಿ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ.

4 ಜಿ ಸಂಪರ್ಕ

4 ಜಿ ಸಂಪರ್ಕ

ಮೋಟೋ ಜಿ, ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು ಭಾರತದಲ್ಲಿ 4ಜಿ ಸಂಪರ್ಕವನ್ನು ಇದು ಹೊಂದಿದೆ. 4ಜಿ ಸಂಪರ್ಕ ವಿಶೇಷತೆ ಡಿವೈಸ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅದ್ಭುತ ಫೋನ್ ಎಂದೆನಿಸಿದೆ.

ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇಲ್ಲ

ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇಲ್ಲ

ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಪೂರ್ಣ ಗಾತ್ರದಲ್ಲಿಲ್ಲ. ವೀಡಿಯೊ ನೋಡಲು ಇದು ತೊಡಕನ್ನುಂಟು ಮಾಡುವುದು ನಿಜವಾಗಿದೆ.

ವಿನ್ಯಾಸ

ವಿನ್ಯಾಸ

ಸ್ಮಾರ್ಟ್‌ಫೋನ್ ಕೈಯಲ್ಲಿ ಹಿಡಿಯಲು ಅನುಕೂಲಕರವಾಗಿದ್ದರೂ ವಿನ್ಯಾಸದಲ್ಲಿ ಅಷ್ಟೊಂದು ಆಕರ್ಷಕವಾಗಿಲ್ಲ.

ಪ್ರೊಸೆಸರ್

ಪ್ರೊಸೆಸರ್

ತನ್ನ ಮೋಟೋ ಜಿ (3 ನೇ ಜನರೇಶನ್) ಪ್ರೊಸೆಸರ್ ಕುರಿತು ಮೋಟೋರೋಲಾ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಸ್ನ್ಯಾಪ್‌ಡ್ರಾಗನ್ 410 ಚಿಪ್‌ಸೆಟ್‌ನೊಂದಿಗೆ ಬಂದಿದೆ.

ಬ್ಯಾಟರಿ

ಬ್ಯಾಟರಿ

2470mAh ಬ್ಯಾಟರಿಯೊಂದಿಗೆ ಬಂದಿದ್ದು 5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ. 4ಜಿ ಎಲ್‌ಟಿಇ ಸಂಪರ್ಕ ವೈಶಿಷ್ಟ್ಯತೆ ಬ್ಯಾಟರಿಯನ್ನು ಇನ್ನಷ್ಟು ಶಕ್ತಿಯುತ ಎಂದೆನಿಸಿದೆ. ಸ್ಮಾರ್ಟ್‌ಫೋನ್‌ಗೆ ಬ್ಯಾಟರಿ ಸೇವಿಂಗ್ ಮೋಡ್ ಇಲ್ಲ.

ಸೆನ್ಸಾರ್ಸ್

ಸೆನ್ಸಾರ್ಸ್

ಮೋಟೋ ಜಿ ನಲ್ಲಿ ಟೆಂಪರೇಚರ್ ಸೆನ್ಸಾರ್, ಬ್ಯಾರೋಮೀಟರ್ ಮತ್ತು ಗ್ರಾವಿಟಿ ಸೆನ್ಸಾರ್ ಇಲ್ಲ.

Best Mobiles in India

English summary
We came up with a list of best and worst features of the Moto G (3rd Gen). Take a look at the slider below to know more about the company's latest smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X