Subscribe to Gizbot

ಕಿಟ್‌ಕ್ಯಾಟ್‌ ಓಎಸ್‌ಗೆ ಮೋಟೋ ಜಿ ಅಪ್‌ಡೇಟ್‌ ಮಾಡಿ

Written By:

ಮೋಟೋ ಜಿ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಸಿದವರಿಗೆ ಗುಡ್‌ನ್ಯೂಸ್‌‌. ಮೋಟೋ ಜಿ ಆಂಡ್ರಾಯ್ಡ್‌ ಜೆಲ್ಲಿ ಬೀನ್‌ನಿಂದ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ಗೆ ಈಗಅಪ್‌ಗ್ರೇಡ್‌ ಮಾಡಬಹುದು.

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಡಿಮೆ ಅವಧಿಯಲ್ಲಿ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್ ಆಗುತ್ತಿರುವ ಮೊದಲ ಫೋನ್‌ ಇದಾಗಿದ್ದು ಈ ಸ್ಮಾರ್ಟ್‌ಫೋನ್‌ ಬೇಡಿಕೆ ಹೆಚ್ಚಾಗುತ್ತಿದೆ. ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಮೋಟೋ ಜಿ ಸ್ಮಾರ್ಟ್‌ಫೋನ್‌ ಸ್ಟಾಕ್‌ ಈಗಾಗಲೇ ಖಾಲಿಯಾಗಿದ್ದು,10 ರಿಂದ 20 ದಿನದೊಳಗೆ ಲಭ್ಯವಾಗಲಿದೆ ಎಂದು ಫ್ಲಿಪ್‌ಕಾರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಮೋಟೋ ಜಿ ಮಾರಾಟದ ಎಕ್ಸ್‌‌‌ಕ್ಲೂಸಿವ್‌ ಹಕ್ಕು ಪಡೆದಿರುವ ದೇಶೀಯ ಬ್ರ್ಯಾಂಡ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌‌ ಫೋನ್‌ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 20 ಸಾವಿರ ಸ್ಮಾರ್ಟ್‌ಫೋನ್‌ ಮಾರಾಟವಾಗಿತ್ತು. ಅದರಲ್ಲೂ 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ 15 ನಿಮಿಷದಲ್ಲಿ ಖಾಲಿಯಾಗಿತ್ತು.

ಇದನ್ನೂ ಓದಿ: ಮೋಟೋ ಜಿ ಎಫೆಕ್ಟ್‌:ದೇಶೀಯ ಚೈನಾ ಕಂಪೆನಿ ಸ್ಮಾರ್ಟ್‌‌ಫೋನ್‌ ಬೆಲೆ ದಿಢೀರ್‌ ಇಳಿಕೆ
ಇದನ್ನೂ ಓದಿ: ಮೋಟೋ ಜಿ ಖರೀದಿಸಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಯಾಕೆ?

 ಕಿಟ್‌ಕ್ಯಾಟ್‌ ಓಎಸ್‌ಗೆ ಮೋಟೋ ಜಿ ಅಪ್‌ಡೇಟ್‌ ಮಾಡಿ

ಮೋಟೋ ಜಿ
ವಿಶೇಷತೆ:
ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB RAM
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot