Subscribe to Gizbot

20 ದಿನದೊಳಗೆ ಮೋಟೋಜಿ ಫ್ಲಿಪ್‌ ಕಾರ್ಟ್‌ನಲ್ಲಿ ಲಭ್ಯ

Posted By:

ಕಳೆದ ವಾರ ಬಿಡುಗಡೆಯಾದ ಮೋಟೋ ಜಿ 16 GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ 10 ರಿಂದ 20 ದಿನದೊಳಗೆ ಲಭ್ಯವಾಗಲಿದೆ ಎಂದು ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮೋಟೋ ಜಿ ಮಾರಾಟದ ಎಕ್ಸ್‌‌‌ಕ್ಲೂಸಿವ್‌ ಹಕ್ಕು ಪಡೆದಿರುವ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌‌ ಫೋನ್‌ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 20 ಸಾವಿರ ಸ್ಮಾರ್ಟ್‌ಫೋನ್‌ ಮಾರಾಟವಾಗಿತ್ತು. ಅದರಲ್ಲೂ 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ 15 ನಿಮಿಷದಲ್ಲಿ ಖಾಲಿಯಾಗಿತ್ತು.

ಮೋಟೋ ಜಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್‌ ಮುಂದಿನ ದಿನಗಳಲ್ಲಿ ಮೋಟರೋಲಾದ ಜೊತೆಗೆ ಆನ್‌‌‌ಲೈನ್‌‌ ಮಾರಾಟದ ಬಗ್ಗೆ ಮತ್ತಷ್ಟು ಒಪ್ಪಂದಗಳನ್ನು ನಡೆಸಲಿದ್ದೇವೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಮೋಟರೋಲಾ ಈ ಹಿಂದೆ ಬಿಡುಗಡೆ ಮಾಡಿದ್ದ ಮೋಟೋ ಎಕ್ಸ್‌ ಸ್ಮಾರ್ಟ್‌ಫೋನಿನ ಆನ್‌ಲೈನ್‌ ಮಾರಾಟದ ಎಕ್ಸ್‌ಕ್ಲೂಸಿವ್‌ ಹಕ್ಕನ್ನು ಫ್ಲಿಪ್‌ಕಾರ್ಟ್‌‌‌ ಪಡೆದುಕೊಳ್ಳುವ ಸಾಧ್ಯತೆ ಯಿದೆ.

ಫ್ಲಿಪ್‌ಕಾರ್ಟ್‌ ಸಿಸಿಒ ಸಚಿನ್‌ ಬನ್ಸಾಲ್‌ ಪಿಟಿಐ ಜೊತೆ ಮಾತನಾಡಿ ದೀಪಾವಳಿ ಸಂದರ್ಭದಲ್ಲಿ ಸಾಮಾನ್ಯವಾಗಿ ನಮ್ಮ ತಾಣಕ್ಕೆ ಹೆಚ್ಚಿನ ಗ್ರಾಹಕರು ಭೇಟಿ ನೀಡುತ್ತಾರೆ. ಆದರೆ ಮೋಟೋ ಜಿ ಬಿಡುಗಡೆಯಾದ ಫೆ.6 ರಂದು ಅದಕ್ಕಿಂತ ಹೆಚ್ಚಿನ ಭೇಟಿ ನೀಡಿದ್ದಾರೆ. ಟ್ರಾಫಿಕ್‌ ಹೆಚ್ಚಾಗಿ ಕೆಲ ಕಾಲ ನಮ್ಮ ತಾಣ ಡೌನ್‌ ಆಗಿತ್ತು ಎಂದು ಹೇಳಿದ್ದಾರೆ. ಸದ್ಯಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ 8GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ ಮಾತ್ರ ಲಭ್ಯವಿದೆ.ಮಾರ್ಚ್‌ ತಿಂಗಳಿನಲ್ಲಿ ಈ ಸ್ಮಾರ್ಟ್‌‌ಫೋನ್‌‌ ರಿಟೇಲ್‌ ಅಂಗಡಿಯಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: ಮೋಟೋ ಜಿ ಎಫೆಕ್ಟ್‌:ದೇಶೀಯ ಚೈನಾ ಕಂಪೆನಿ ಸ್ಮಾರ್ಟ್‌‌ಫೋನ್‌ ಬೆಲೆ ದಿಢೀರ್‌ ಇಳಿಕೆ
ಇದನ್ನೂ ಓದಿ: ಮೋಟೋ ಜಿ ಖರೀದಿಸಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಯಾಕೆ?

20ದಿನದೊಳಗೆ ಮೋಟೋಜಿ ಫ್ಲಿಪ್‌ ಕಾರ್ಟ್‌ನಲ್ಲಿ ಲಭ್ಯ

ಮೋಟೋ ಜಿ
ವಿಶೇಷತೆ:
ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB RAM
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot