ಮೋಟೋ ಎಕ್ಸ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ದೇಶಿಯ ಮಾರುಕಟ್ಟೆಗೆ ಮೋಟೋ ಎಕ್ಸ್ ಅಧಿಕೃತವಾಗಿ 23,999 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಮೋಟೋ ಜಿಯಂತೆ ಮೋಟೋ ಎಕ್ಸ್‌ನ ಎಕ್ಸ್‌ಕ್ಲೂಸಿವ್ ಮಾರಾಟದ ಹಕ್ಕನ್ನು ಫ್ಲಿಪ್‌ಕಾರ್ಟ್ ಪಡೆದುಕೊಂಡಿದೆ.
ವಿಶ್ವದ ಮೊದಲ ಕಸ್ಟಮೈಸ್ಡ್ ಸ್ಮಾರ್ಟ್‌ಫೋನ್ ಇದಾಗಿದ್ದು ಬಳಕೆದಾರರು ಸ್ಮಾರ್ಟ್‌ಫೋನ್‌ಕವರ್,ವಾಲ್ಯೂಮ್ ಬಟನ್,ಕ್ಯಾಮೆರಾ ಕೇಸ್,ಸ್ವಿಚ್ ಬಟನ್‌ನ್ನು ಇಷ್ಟವಾದ ಬಣ್ಣದಲ್ಲಿ ಆರಿಸಿಕೊಳ್ಳಬಹುದಾಗಿದೆ. ಮೋಟೋ ಎಕ್ಸ್‌ಗಾಗಿ ಮೋಟರೋಲಾ 31 ಬಣ್ಣಗಳಿರುವ ಬ್ಯಾಕ್ ಪ್ಯಾನಲ್ ತಯಾರಿಸಿದೆ.
ತೇಗ ಮತ್ತುಅಕ್ರೋಟ (walnut)ಮರದಿಂದ ತಯಾರಿಸಿದ ಬ್ಯಾಕ್ ಪ್ಯಾನಲ್‌ನ್ನು ಮೋಟರೋಲಾ ತಯಾರಿಸಿದ್ದು, ಮರದ ಬ್ಯಾಕ್ ಪ್ಯಾನಲ್‌ನೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು,ಎರಡು ಸಾವಿರ ರೂಪಾಯಿ ಹೆಚ್ಚಿಗೆ ನೀಡಿ ಮರದ ಬ್ಯಾಕ್ ಪ್ಯಾನಲ್‌ನ್ನು ಖರೀದಿಸಬಹುದು. ಮರದ ಪ್ಯಾನಲ್ ಅಲ್ಲದೇ ಬಿಳಿ,ಕಪ್ಪು,ನೀಲಿ,ಕೆಂಪು ಬಣ್ಣದ ಪ್ಯಾನಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಗೂಗಲ್ ಮೋಟರೋಲಾ ಕಂಪೆನಿಯನ್ನು ಖರೀದಿಸಿದ ಬಳಿಕ ಬಿಡುಗಡೆ ಮಾಡಿದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು ಅಮೆರಿಕದ ಮಾರುಕಟ್ಟೆಗೆ 2013 ಅಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್‌ನಲ್ಲಿ ಬಿಡುಗಡೆಯಾಗಿದ್ದರೂ ಕಿಟ್‌ಕ್ಯಾಟ್ ಓಎಸ್‌ಗೆ ಈ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ಗೂಗಲ್ ತೆಕ್ಕೆಯಲ್ಲಿದ್ದ ಮೋಟರೋಲಾವನ್ನು ಈಗ ಚೀನಾದ ಲೆನೊವೊ ಕಂಪೆನಿ ಖರೀದಿಸಿದೆ.

ಮೊಟೋ ಎಕ್ಸ್
ವಿಶೇಷತೆ:
ಸಿಂಗಲ್ ಸಿಮ್
4.7 ಇಂಚಿನ ಅಮೊಲೆಡ್ ಸ್ಕ್ರೀನ್(720 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
1.7GHz ಕ್ವಾಲಕಂ ಸ್ನಾಪ್‌ಡ್ರಾಗನ್ ಡ್ಯುಯಲ್ ಕೋರ್ ಪ್ರೊಸೆಸರ್
2GB ರ್‍ಯಾಮ್
16 ಜಿಬಿ ಆಂತರಿಕ ಮೆಮೊರಿ
10 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎನ್‌ಎಫ್‌ಸಿ
2,200mAh ಬ್ಯಾಟರಿ


Click it and Unblock the Notifications








