Subscribe to Gizbot

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

Posted By:

ನಷ್ಟದಲ್ಲಿದ್ದ ಮೋಟರೋಲಾ ಕಂಪೆನಿಯನ್ನು ಗೂಗಲ್‌ ಲೆನೊವೊ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿದೆ.ಗೂಗಲ್‌ ಮೋಟರೊಲಾ ಕಂಪೆನಿಯನ್ನು ಖರೀದಿಸಿದ ಮೇಲೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಕಂಪೆನಿಯಾಗಬಹುದು ಬಹಳಷ್ಟು ಜನ ನೀರಿಕ್ಷಿಸಿದ್ದರು. ಆದರೆ ಮೋಟರೋಲಾ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಅಷ್ಟೇನು ಸುದ್ದಿ ಮಾಡಲಿಲ್ಲ. ಎರಡು ವರ್ಷದ ಬಳಿಕ ಗೂಗಲ್‌ ಮೋಟರೋಲಾವನ್ನು ಖರೀದಿಸಿದ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಸಹಿ ಹಾಕಿದೆ.

ಗೂಗಲ್‌ ಮಾರಾಟದಲ್ಲಿ ನಷ್ಟವಾದರೂ ಬೇರೆ ರೀತಿಯಿಂದಾಗಿ ಲಾಭವಾಗಿದೆ.ಅದೇ ರೀತಿಯಲ್ಲಿ ಲೆನೊವೊ ಕಂಪೆನಿ ಸಹ ಈ ಒಪ್ಪಂದಿಂದ ಲಾಭವಾದರೆ,ಮೋಟರೋಲಾಗೂ ಒಂದು ರೀತಿಯಲ್ಲಿ ಒಳ್ಳೆಯದಾಗಿದೆ. ಮುಂದಿನ ಪುಟದಲ್ಲಿ ಈ ಮಾರಾಟ ಒಪ್ಪಂದಿಂದ ಯಾವ ಕಂಪೆನಿಗಳಿಗೆ ಹೇಗೆ ಲಾಭ ಎನ್ನುವ ವಿವರ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌ಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?


ಗೂಗಲ್‌ ಮೋಟರೋಲಾವನ್ನು ಖರೀದಿಸಿದ್ದು ಸ್ಮಾರ್ಟ್‌‌ಫೋನ್‌ ತಯಾರಿಸುವ ದೃಷ್ಟಿಯಿಂದಲ್ಲ.ಬದಲಾಗಿ ಮೋಟರೋಲಾ ಹೊಂದಿದ್ದ ಕೆಲವು ಪೇಟೆಂಟ್‌ಗಳಿಗಾಗಿ. ಈ ಪೇಟೆಂಟ್‌‌ ಹಕ್ಕಿನಿಂದಾಗಿ ಗೂಗಲ್‌ ತನ್ನ ಆಂಡ್ರಾಯ್ಡ್‌ ಓಎಸ್‌ನ್ನು ವಿಶ್ವದೆಲ್ಲೆಡೆ ಹೆಚ್ಚಿನ ಪ್ರಚಾರ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.ಒಂದು ವೇಳೆ ಖರೀದಿ ನಡೆಯದಿದ್ದಲ್ಲಿ ಸ್ಯಾಮ್‌ಸಂಗ್‌ನಂತೆ ಗೂಗಲ್‌ ಆಪಲ್‌,ಮೈಕ್ರೋಸಾಫ್ಟ್‌ ಜೊತೆಗೆ ಪೇಟೆಂಟ್‌ ವಿಚಾರ ಬಗ್ಗೆ ಕಾನೂನು ಸಮರ ನಡೆಸಬೇಕಿತ್ತು

ಚಿತ್ರಕೃಪೆ:www.extremetech.com

ಗೂಗಲ್‌ಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

ಗೂಗಲ್‌ ಯಾವಾಗಲೂ ಹಾರ್ಡ್‌ವೇರ್‌ ವಿಚಾರಕ್ಕಿಂತ ಸಾಫ್ಟ್‌ವೇರ್‌ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಒಂದು ವೇಳೆ ಮೋಟರೋಲಾ ತನ್ನ ವಶದಲ್ಲಿದ್ದರೆ, ಆಂಡ್ರಾಯ್ಡ್‌‌ ಓಎಸ್‌ನಲ್ಲಿ ಸ್ಮಾರ್ಟ್‌‌ಫೋನ್‌ ತಯಾರಿಸುವ ಕಂಪೆನಿಗಳಿಗೆ ಹೊಡೆತ ಬೀಳುವುದರ ಜೊತೆಗೆ ಅವರು ಬೇರೆ ಓಎಸ್‌ನತ್ತ ಒಲವು ತೋರಿಸುವ ಸಾಧ್ಯತೆಯನ್ನು ಊಹಿಸಿದ ಗೂಗಲ್‌ ಮೋಟರೋಲಾವನ್ನು ಮಾರಾಟ ಮಾಡಿದೆ ಎಂದು ಹೇಳಲಾಗುತ್ತಿದೆ.

ಗೂಗಲ್‌ಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

ಗೂಗಲ್‌ ಮೋಟರೋಲಾವನ್ನು ಕೇವಲ ಪೇಟೆಂಟ್‌ಗೆ ಮಾತ್ರ ಖರೀದಿಸಿದ್ದು ಮೋಟರೋಲಾ ಹಾರ್ಡ್‌‌ವೇರ್‌ ವಿಭಾಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ ಎನ್ನವ ಆರೋಪ ಗೂಗಲ್‌ ಮೇಲಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಗೂಗಲ್‌ ನಡವಳಿಕೆ ಸಹ ಹಾಗೇಯೆ ಇತ್ತು. ಗೂಗಲ್‌ ತನ್ನ ಅಧಿಕೃತ ಕಾರ್ಯಕ್ರಮದಲ್ಲಿ ಮೋಟರೋಲಾ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರಲಿಲ್ಲ.ಜೊತೆಗೆ ನೆಕ್ಸಸ್‌ ಸಾಧನಗಳಿಗೆ ಬೇಗನೆ ಗೂಗಲ್‌ ಕಿಟ್‌ಕ್ಯಾಟ್‌ ಅಪ್‌ಡೇಟ್‌ ಅವಕಾಶ ನೀಡಿದ್ದರೆ, ಮೋಟೋ ಎಕ್ಸ್‌ ಫೋನಿಗೆ ಕಿಟ್‌ಕ್ಯಾಟ್‌ ಅಪ್‌ಡೇಟ್‌ ನೀಡಿಲ್ಲ. ಈ ವಾರದ ಆರಂಭದಲ್ಲಿ ಕೆಲವು ದೇಶಗಳಲ್ಲಿ ಕಿಟ್‌ಕ್ಯಾಟ್‌ ಅಪ್‌ಡೇಟ್‌ ಅವಕಾಶವನ್ನು ಮೋಟೋ ಎಕ್ಸ್‌ಗೆ ಗೂಗಲ್‌ ಕಲ್ಪಿಸಿದೆ. ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆಯಾದ ಬಳಿಕ ಮೋಟೋ ಜಿ ಬಿಡುಗಡೆಯಾದರೂ ಜೆಲ್ಲಿ ಬೀನ್‌ ಓಎಸ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಿತ್ತು.

ಗೂಗಲ್‌ಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

ಗೂಗಲ್‌ ತನ್ನ ನೆಕ್ಸಸ್‌ ಸ್ಮಾರ್ಟ್‌‌ಫೋನ್‌‌/ಟ್ಯಾಬ್ಲೆಟ್‌‌ಗಳನ್ನುಸ್ಯಾಮ್‌ಸಂಗ್,ಎಲ್‌ ಜಿ,ಏಸಸ್‌ ಕಂಪೆನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಬಿಡುಗಡೆ ಮಾಡಿದೆ.ಮೋಟರೋಲಾ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದ್ದರೂ ನೆಕ್ಸಸ್‌ ಸಾಧನಗಳನ್ನು ತಯಾರಿಸಲು ಗೂಗಲ್‌ ಅನುಮತಿ ನೀಡಿರಲಿಲ್ಲ.ಈ ಮೂಲಕ ಬೇರೆ ಕಂಪೆನಿಗಳ ಜೊತೆಗೂ ಗೂಗಲ್‌ ಉತ್ತಮ ಸಹಕಾರ ಹೊಂದಿತ್ತು.

ಗೂಗಲ್‌ಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

ಮೈಕ್ರೋಸಾಫ್ಟ್‌ ವಿಂಡೋಸ್‌ ಓಎಸ್‌ ಸ್ಮಾರ್ಟ್‌ಫೋನ್‌ ತಯಾರಿಸಲು ಕಂಪೆನಿಗಳಿಗೆ ಧನ ಸಹಾಯ ನೀಡಲು ಮುಂದಾಗುತ್ತಿದೆ ಎನ್ನುವ ಸುದ್ದಿಯಿದೆ.ಹೀಗಾಗಿ ಭವಿಷ್ಯದಲ್ಲಿ ಹಾರ್ಡ್‌ವೇರ್‍ ಮತ್ತು ಸಾಫ್ಟ್‌ವೇರ್‌ ಎರಡರಲ್ಲೂ ಕೈ ಹಾಕಿ ಲಾಭ ಮಾಡಿದರೆ ಕಂಪೆನಿಗಳು ಆಂಡ್ರಾಯ್ಡ್‌ ಓಎಸ್‌ನಿಂದ ದೂರ ಸರಿಯುವ ಸಾಧ್ಯತೆ ಇರುವುದನ್ನು ಮನಗಂಡ ಗೂಗಲ್‌ ನಷ್ಟದಲ್ಲಿರುವ ಮೋಟರೋಲಾವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

 ಲೆನೊವೊಗೆ ಏನು ಲಾಭ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?


ಗೂಗಲ್‌ 2012ರಲ್ಲಿ ಮೋಟರೋಲಾವನ್ನು ಕೆಲವೊಂದು ಪೇಟೆಂಟ್‌ಗಳಿಗಾಗಿ 12.5 ಶತಕೋಟಿ ಡಾಲರ್‌ ನೀಡಿ ಖರೀದಿಸಿತ್ತು.ಆದರೆ ಲೆನೊವೊ ಮೋಟರೋಲಾ ಖರೀದಿಗೆ ನೀಡುತ್ತಿರುವುದು 2.91 ಶತಕೋಟಿ ಡಾಲರ್‌.ಹೀಗಾಗಿ ಹಣ ಲೆಕ್ಕಹಾಕಿದರೆ ಲೆನೊವೊ ಕಡಿಮೆ ಬೆಲೆಯಲ್ಲಿ ಡೀಲ್‌ ಮಾಡಿದೆ ಎಂದು ಹೇಳಬಹುದು.

 ಲೆನೊವೊಗೆ ಏನು ಲಾಭ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?


ವಿಶ್ವದ ಮೊದಲ ಫಿಂಗರ್‌ ಪ್ರಿಂಟ್‌ ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ತಯಾರಿಸಿದ ಮೋಟ ರೋಲಾದ ಬಳಿ ಮೊಬೈಲ್‌ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಬಹಳಷ್ಟು ಪೇಟೆಂಟ್‌ಗಳಿವೆ. ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಮಾಹಿತಿ ಪ್ರಕಾರ ಅಂದಾಜು 2 ಸಾವಿರ ಪೇಟೆಂಟ್‌ಗಳು ಲೆನೊವೊಗೆ ಸಿಗಲಿದೆ.ಹೀಗಾಗಿ ಸ್ಮಾರ್ಟ್‌ಫೋನ್‌ ಕಂಪೆನಿಗಳಾದ ಸ್ಯಾಮ್‌ಸಂಗ್‌,ಆಪಲ್‌‌,ಎಲ್‌ಜಿ ಮತ್ತು ಚೀನಾದ ಝಡ್‌ಟಿಇಗೆ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧೆ‌ಯನ್ನು ಲೆನೊವೊ ನೀಡಲಿದೆ.ಜೊತೆಗೆ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಲೆನೊವೊ ಮಾರುಕಟ್ಟೆಯನ್ನು ವಿಸ್ತರಿಸಲು ಈ ಖರೀದಿ ಒಪ್ಪಂದ ಹೆಚ್ಚಿನ ಲಾಭವನ್ನು ಲೆನೊವೊಗೆ ನೀಡಲಿದೆ.

 ಮೋಟರೋಲಾ ಉದ್ಯೋಗಿಗಳಿಗೆ ಲಾಭ ಹೇಗೆ?

ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?


ಮೋಟರೋಲಾದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (Research and Development Department) ಹೊರತಾಗಿ ಈ ಖರೀದಿ ಒಪ್ಪಂದ ನಡೆದಿದೆ.ಹೀಗಾಗಿ ಇನ್ನು ಮುಂದೆ ಈ ವಿಭಾಗವನ್ನು ಗೂಗಲ್‌ ಸಂಪೂರ್ಣ‌ವಾಗಿ ನಿಯಂತ್ರಿಸಲಿದೆ. ಈಗಾಗಲೇ ನಡೆಸುತ್ತಿರುವ ಸ್ಮಾರ್ಟ್ ಹಚ್ಚೆ,ಸ್ಮಾರ್ಟ್ ಮಾತ್ರೆಯ ಸಂಶೋಧನಾ ಕಾರ್ಯ‌ವನ್ನು ಈ ವಿಭಾಗದ ಉದ್ಯೋಗಿಗಳು ಮುಂದುವರೆಸಲಿದ್ದಾರೆ.ಇನ್ನೂ ಮೋಟರೋಲಾ ಸ್ಮಾರ್ಟ್‌ಫೋನ್‌ ತಯಾರಿಸುವ ಉದ್ಯೋಗಿಗಳು ಸಂಪೂರ್ಣ ಸ್ಮಾರ್ಟ್‌ಫೋನ್‌,ಕಂಪ್ಯೂಟರ್‌,ಲ್ಯಾಪ್‌ಟಾಪ್‌ ತಯಾರಿಸುವ ವಿಶ್ವದ ನಾಲ್ಕನೇಯ ಅತಿ ದೊಡ್ಡ ಕಂಪೆನಿ ಉದ್ಯೋಗಿಗಳಾಗಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot