Subscribe to Gizbot

ಭಾರತದಲ್ಲಿ ಮೊಟೊ Z2 ಸ್ಮಾರ್ಟ್‌ಫೋನ್‌ ಲಾಂಚ್: ಪ್ರಿ ಬುಕ್ ಮಾಡಿದವರಿಗೆ ಭರ್ಜರಿ ಆಫರ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ ಸ್ಮಾರ್ಟ್‌ಫೋನ್‌ಗಳು ಭಾರೀ ಸದ್ದು ಮಾಡುತ್ತಿವೆ. ಇದೇ ಹಿನ್ನಲೆಯಲ್ಲಿ ಗುರುವಾರ ಮೊಟೊ Z2 ಸ್ಮಾರ್ಟ್‌ಫೋನ್‌ ಅನ್ನು ಮೊಟೊ ಲಾಂಚ್ ಮಾಡಿದೆ. ಜೂನ್ 14ರಿಂದ ಈ ಫೋನಿನ ಪ್ರಿ-ಬುಕಿಂಗ್ ಆರಂಭವಾಗಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್ ಕಾರ್ಟಿನಲ್ಲಿ ದೊರೆಯಲಿದೆ.

ಭಾರತದಲ್ಲಿ ಮೊಟೊ Z2 ಸ್ಮಾರ್ಟ್‌ಫೋನ್‌ ಲಾಂಚ್

ಓದಿರಿ: ಆಪಲ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ ಶಿಯೋಮಿ..!!

ಮೊಟೊ Z2 ಸ್ಮಾರ್ಟ್‌ಫೋನ್ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಡ್ಯುಯಲ್ ಸಿಮ್ ಕಾರ್ಡ್ ಹಾಕಬಹುದಾದ ಈ ಫೋನಿನ ಬೆಲೆ ರೂ.27,999 ಆಗಿದೆ. ಇದಲ್ಲದೇ ಲಾಚಿಂಗ್ ಆಫರ್ ನಲ್ಲಿ ಮೊದಲು 2000 ರೂ. ಕಟ್ಟಿ ನಂತರ 10 ತಿಂಗಳು ಉಳಿದ ಹಣವನ್ನು ಯಾವುದೇ ಬಡ್ಡಿ ಇಲ್ಲದೇ ಕಟ್ಟಬಹುದಾಗಿದೆ.

ಇಲ್ಲದೇ ಪ್ರೀ ಬುಕಿಂಗ್ ಮಾಡುವ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಲಾಗಿದೆ. ಮೊಟೊ Z2 ಜೊತೆಗೆ ಅಲುಮಿನಿಯಮ್ ಕೇಸ್, ಸೆಲ್ಫಿ ಸ್ಟಿಕ್, ಪ್ರೋಟೆಕ್ಟಿವ್ ಫಿಲ್ಮ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.

ಭಾರತದಲ್ಲಿ ಮೊಟೊ Z2 ಸ್ಮಾರ್ಟ್‌ಫೋನ್‌ ಲಾಂಚ್

ಓದಿರಿ: ಯಾರಿಗಾದರು ವಾಟ್ಸ್ಆಪ್ ಅಲ್ಲಿ ತಪ್ಪಾಗಿ ಮೇಸೆಜ್ ಕಳುಹಿಸಿದ್ದೀರಾ..? ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಡಿ..

ಮೊಟೊ ಓಡೆತನವನ್ನು ಹೊಂದಿರುವ ಲಿನೋವೊ ಈ ಹೊಸ ಫೋನಿನೊಂದಿಗೆ ರಿಲಯನ್ಸ್ ಜಿಯೋ ದಿಂದ 100GB ಡೇಟಾ ಆಫರ್ ಕೊಡಿಸುವ ಭರವಸೆಯನ್ನು ನಿಡಿದೆ. ಈ ಕೊಡುಗೆಯೂ ಪ್ರೀ ಬುಕ್ ಮಾಡಿದವರಿಗೆ ಮತ್ತು ಹಾಗೇ ಖರೀದಿಸಿದವರಿಗೂ ದೊರೆಯಲಿದೆ.

ಮೊಟೊ Z2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, 5.5 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 626 ಪ್ರೋಸೆಸರ್, 4GB RAM ಹೊಂದಿದೆ. 12 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಈ ಪೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 2TB ವರೆಗೂ ಮೆಮೊರಿ ವಿಸ್ತರಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

English summary
Moto Z2 Play smartphone with modular Moto Mods has been launched in India on Thursday. Available for pre-booking starting Thursday till June 14. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot