Subscribe to Gizbot

ಆಪಲ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ ಶಿಯೋಮಿ..!!!!

Written By:

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ ದಿನೇ ದಿನೇ ಬೆಳವಣಿಗೆಯನ್ನು ಸಾಧಿಸುತ್ತಿದೆ. ಭಾರತೀಯಾ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸಿದ ಮಾದರಿಯಲ್ಲೇ ಜಾಗತೀಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಈ ಬಾರಿ ಆಪಲ್ ಕಂಪನಿಯನ್ನು ಹಿಂದೆ ಹಾಕಿ ಧರಿಸಬಹುದಾಧ ಗ್ಯಾಜೆಟ್ಸ್ ಮಾರಾಟದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಆಪಲ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ ಶಿಯೋಮಿ..!!!!

ಓದಿರಿ: ಹಿಂದೆಂದೂ ಕಾಣದ ಬೆಲೆಗೆ ಐಫೋನ್ ಫೋನ್ ಮಾರಾಟ: ಫ್ಲಿಪ್ ಕಾರ್ಟಿನಲ್ಲಿ ರೂ.21,999ಕ್ಕೆ ಐಫೋನ್ 6..!

ಶಿಯೋಮಿ ವಿಶ್ವದಲ್ಲದೇ ಅತಿ ಹೆಚ್ಚು ವೆರಬಲ್ (ಧರಿಸಬಹುದಾದ) ಸಾಧನಗಳನ್ನು ಮಾರಾಟ ಮಾಡಿದ್ದು, ವಿಶ್ವದ ಟಾಪ್ 5 ಕಂಪನಿಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ ಎಂದು ಶಿಯೋಮಿ ಭಾರತದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಜೈನ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

ವಿಶ್ವದ ಟಾಪ್ 5 ವೆರಬಲ್ ಕಂಪನಿಗಳಲ್ಲಿ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಶಿಯೋಮಿ ಇದ್ದು, ನಂತರದ ಸ್ಥಾನದಲ್ಲಿ ಆಪಲ್, ಫಿಟ್ ಬಿಟ್, ಸ್ಯಾಮ್‌ಸಂಗ್ ಮತ್ತು ಗಾರ್ಮಿನ್ ಕಂಪನಿಗಳನ್ನು ಕಾಣಬಹುದಾಗಿದೆ.

ಓದಿರಿ: ಯಾರಿಗಾದರು ವಾಟ್ಸ್ಆಪ್ ಅಲ್ಲಿ ತಪ್ಪಾಗಿ ಮೇಸೆಜ್ ಕಳುಹಿಸಿದ್ದೀರಾ..? ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಡಿ...!!

ಆಪಲ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ ಶಿಯೋಮಿ..!!!!

ವೆರಬಲ್ ಸಾಧನಗಳ ಮಾರುಕಟ್ಟೆಯಲ್ಲಿ ಶಿಯೋಮಿ 14.1 % ಪ್ರಮಾಣದ ಹಿಡಿತವನ್ನು ಸಾಧಿಸಿದರೆ, ಆಪಲ್ 14.6 % ಹಿಡಿತವನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ಫಿಟ್ ಬಿಟ್ 12.3%, ಸ್ಯಾಮ್ ಸಂಗ್ 5.5%, ಗಾರ್ಮಿನ್ 4.6%, ನಷ್ಟು ಹಿಡಿತ ಸಾಧಿಸಿವೆ.

ಶಿಯೋಮಿ ಮಿ ಬಾಂಡ್ 2 ಸದ್ಯ ಹೊಸದಾಗಿ ಲಾಂಚ್ ಆಗಿರುವ ಧರಿಸಬಹುದಾದ ಸಾಧನಾವಾಗಿದೆ. ಇದು ರೂ.1,999 ಗಳಿಗೆ ದೊರೆಯಲಿದ್ದು, ಒಂದು ಚಾರ್ಜ್ ನಲ್ಲಿ 20 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಇದರಲ್ಲಿ OLED ಡಿಸ್‌ಪ್ಲೇಯನ್ನು ನೀಡಲಾಗಿದೆ.

Read more about:
English summary
list of top 5 wearable companies in the world posted by Jain, Xiaomi is definitely the first one. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot