ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌‌‌ಫೋನ್‌:ಮೋಟರೋಲಾ

Posted By:

ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಗೂಗಲ್‌ ಮಾಲೀಕತ್ವದ ಮೋಟರೋಲಾ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮುಂದಾಗುತ್ತಿದೆ.

ಮೋಟರೋಲಾ ಕಂಪೆನಿ ಮುಖ್ಯ ಕಾರ್ಯನಿರ್ವಾಹಕ ಮುಖ್ಯಸ್ಥ ಡೆನ್ನಿಸ್‌ ವುಡ್‌ಸೈಡ್‌‌ TrustedReviews ನೀಡಿದ ಸಂದರ್ಶನನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದು 50 ಡಾಲರ್‌( ಅಂದಾಜು 3100 ರೂಪಾಯಿ) ಬೆಲೆಯಲ್ಲಿ ಸ್ಮಾರ್ಟ್‌‌‌‌ಫೋನ್‌ ಬಿಡುಗಡೆ ಮಾಡಲು ಮೋಟರೋಲಾ ಚಿಂತಿಸಿದೆ ಎಂದು ಹೇಳಿದ್ದಾರೆ.

ಗೂಗಲ್‌ ಮಾಲೀಕತ್ವದ ಮೋಟರೋಲಾ ಕಂಪೆನಿ ಈಗಾಗಲೇ ಎರಡು ಸ್ಮಾರ್ಟ್‌ಫೋನ್‌‌ಗಳನ್ನು ಬಿಡುಗಡೆ ಮಾಡಿದೆ. ಅಮೆರಿಕದ ಜನತೆಗಾಗಿ ಮೋಟೋ ಎಕ್ಸ್‌ನ್ನು ಬಿಡುಗಡೆ ಮಾಡಿದ್ದರೆ, ಏಷ್ಯಾ ಮತ್ತು ಆಫ್ರಿಕಾದ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಮೋಟೋ ಜಿ ಸ್ಮಾರ್ಟ್‌ಫೋನ್‌ ತಯಾರಿಸಿದ್ದು ಫೆಬ್ರವರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. 

ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌‌‌ಫೋನ್‌:ಮೋಟರೋಲಾ

ಗೂಗಲ್‌ ಯಾವಾಗಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಉತ್ತೇಜನ ನೀಡುತ್ತಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಸಬಹುದು ಎಂದು 2013 ಮಾರ್ಚ್‌ನಲ್ಲಿ ಭಾರತದ ಪ್ರವಾಸದ ಸಂದರ್ಭದಲ್ಲಿ ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ ಹೇಳಿದ್ದರು. ಅದರಂತೆ ಗೂಗಲ್‌ ಮಾಲೀಕತ್ವದ ಮೋಟರೋಲಾ ಈಗ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದ್ದು,ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುವ ಭಾರತ ಮತ್ತು ಚೀನಾದ ಕಂಪೆನಿಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ನೆಕ್ಸ್‌ಸ್ ಸ್ಮಾರ್ಟ್‌ಫೋನ್‌‌ಗೆ ದುಬಾರಿ ಬೆಲೆ, ಮೋಟರೋಲಾ ಸ್ಮಾರ್ಟ್‌‌‌ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುವ ಮೂಲಕ ಎರಡು ವರ್ಗದ ಜನರನ್ನು ತನ್ನತ್ತ ಸೆಳೆಯಲು ದೊಡ್ಡ ಯೋಜನೆಯನ್ನು ರೂಪಿಸಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲೂ ತನ್ನ ಪ್ರಭುತ್ವವನ್ನು ಸ್ಪಾಪಿಸಲು ಗೂಗಲ್‌ ಯೋಚಿಸುತ್ತಿದೆ ಎನ್ನಲಾಗಿದೆ.

Please Wait while comments are loading...
Opinion Poll

Social Counting