Subscribe to Gizbot

ಗೂಗಲ್‌ನಿಂದ ಬರುತ್ತಾ ಹೊಸ ಸ್ಮಾರ್ಟ್‌ಫೋನ್‌ ?

Posted By:

ಆಂಡ್ರಾಯ್ಡ್ ಓಎಸ್‌ ತಯಾರಕ ಗೂಗಲ್‌ ಈಗ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆಯೇ ? ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಗೂಗಲ್‌ ಚಿಂತನೆ ನಡೆಸುತ್ತಿದೆಯೇ? ಸದ್ಯ ಈ ಪ್ರಶ್ನೆ ಭಾರತದ ಮೊಬೈಲ್‌ ಪಂಡಿತರಿಗೆ ಕಾಡತೊಡಗಿದೆ.

ಭಾರತದ ಪ್ರವಾಸದಲ್ಲಿರುವ ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ ನವದೆಹಲಿಯಲ್ಲಿ ಪತ್ರಕರ್ತರ ನಡುವೆ ನಡೆಸಿದ ಸಂವಾದದಲ್ಲಿ ಸದ್ಯದ ಮಾರುಕಟ್ಟೆಯಲ್ಲಿ ಬೇಸಿಕ್‌ ಸ್ಮಾರ್ಟ್‌ಫೋನ್‌ಗಳನ್ನು 50 ಡಾಲರ್‌(ರೂ.2,700) ಬೆಲೆಯಲ್ಲಿ ಗುಣಮಟ್ಟದ ಫೋನ್‌ ತಯಾರಿಸಬಹುದು ಎಂದು ಹೇಳಿದ್ದಾರೆ.

ಗೂಗಲ್‌ನಿಂದ ಬರುತ್ತಾ ಹೊಸ ಸ್ಮಾರ್ಟ್‌ಫೋನ್‌ ?

ಆದರೆ ಗೂಗಲ್‌ ಮೊಬೈಲ್‌ ನಿರ್ಮಾಣ ಕ್ಷೇತ್ರಕ್ಕೆ ಕೈ ಹಾಕಲಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ  ಉತ್ತರ ನೀಡಿದ ಸ್ಕಿಮಿಟ್‌ ಗೂಗಲ್‌ ಯಾವಾಗಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಉತ್ತೇಜನ ನೀಡುತ್ತಿದ್ದು, ಸದ್ಯಕ್ಕೆ ಈ ಮೊಬೈಲ್ ನಿರ್ಮಾಣದ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ.

ಇದೇ ಸಂದರ್ಭಲ್ಲಿ ಸ್ಕಿಮಿಟ್‌ ಆಪಲ್‌ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಬಗ್ಗೆ ಸ್ಕಿಮಿಟ್‌ ಮಾತನಾಡಿ, ಸ್ಟೀವ್‌ ಜಾಬ್ಸ್‌ ತುಂಬಾ ಪ್ರಭಾವಶಾಲಿ ವ್ಯಕ್ತಿ, ನಾನು ಸ್ಟೀವ್‌ನಿಂದ ಪ್ರಭಾವಿತನಾಗಿದ್ದೇನೆ ಎಂದು ಸ್ಟಿವ್‌ ಬಗ್ಗೆ ಹೊಗಳಿದರು.
ಹುಟ್ಟುವಾಗಲೇ ಉದ್ಯಮಿಗಳಾಗಿ ಯಾರು ಹುಟ್ಟುವುದಿಲ್ಲ, ಕೆಲಸದ ಶ್ರಮದಿಂದ ಅವರು ಉದ್ಯಮಿಗಳಾಗಿ ಬೆಳೆಯುತ್ತಾರೆ. ಗೂಗಲ್‌ನಲ್ಲಿ ಸ್ಮಾರ್ಟ್‌ ಗುಣವುಳ್ಳ ಉದ್ಯೋಗಿಗಳು ಹೆಚ್ಚಿರುವುದರಿಂದ ಗೂಗಲ್‌ ಇಂದು ವಿಶ್ವದ ದೊಡ್ಡ ಕಂಪೆನಿಯಾಗಿ ಬೆಳೆದಿದೆ ಎಂದು ಹೇಳಿ ತಮ್ಮ ಉದ್ಯೋಗಿಗಳ ಶ್ರಮವನ್ನು ಈ ಸಂದರ್ಭದಲ್ಲಿ ಸ್ಕಿಮಿಟ್‌ ಕೊಂಡಾಡಿದರು.

ಲಿಂಕ್‌ : ವಿಶ್ವದ ಟಾಪ್‌ 10 ಮೊಬೈಲ್‌ ಕಂಪೆನಿಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot