ಗೂಗಲ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನ ಬೆಲೆ 17,089 ರೂಪಾಯಿ!
ಗೂಗಲ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಭಾರತದ ಆನ್‌ಲೈನ್ ತಾಣದಲ್ಲಿ ಲಭ್ಯವಿದೆ. ಗೂಗಲ್ ಮಾಲೀಕತ್ವದ ಮೋಟರೋಲಾ ಕಂಪೆನಿಯ ಮೋಟೋ ಜಿ ಸ್ಮಾರ್ಟ್‌ಫೋನ್ ಆನ್‌ಲೈನ್ ತಾಣ shopyourworld.com ಪ್ರತ್ಯಕ್ಷವಾಗಿದ್ದು,ಸ್ಮಾರ್ಟ್‌ಫೋನಿಗೆ 17,089 ರೂಪಾಯಿ ಬೆಲೆ ನಿಗದಿ ಮಾಡಿದೆ.
shopyourworld.com ತಾಣ ಮಾತ್ರ ಈ ಸ್ಮಾರ್ಟ್‌ಫೋನಿನ ಸುದ್ದಿಯನ್ನು ಪ್ರಕಟಿಸಿದ್ದು ದೇಶದಲ್ಲಿರುವ ಇತರೆ ಯಾವುದೇ ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ಪ್ರಕಟಿಸಿಲ್ಲ.
ಮೋಟರೋಲಾ ಕಂಪೆನಿ ಇನ್ನೂ ಈ ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.2014ರ ಜನವರಿಯಲ್ಲಿ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಎಚ್‌ಡಿ ಸ್ಕ್ರೀನ್ ಹೊಂದಿರುವ ಕಡಿಮೆ ಬೆಲೆಯ ಮೋಟೋ ಜಿ ಸ್ಮಾರ್ಟ್‌ಫೋನ್ ನವೆಂಬರ್‌ನಲ್ಲಿ ಬ್ರಝಿಲ್‌ನಲ್ಲಿ ಬಿಡುಗಡೆಯಾಗಿದ್ದು, 2014ರ ಆರಂಭದಲ್ಲಿ 30 ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೋಟರೋಲಾ ನಿರ್ಧರಿಸಿದೆ.
ಇದನ್ನೂ ಓದಿ: ಗೂಗಲ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

ಮೋಟೋ ಜಿ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
ಮೋಟೋ ಜಿ
ವಿಶೇಷತೆ:
ಸಿಂಗಲ್ ಸಿಮ್/ಡ್ಯುಯಲ್ ಸಿಮ್
4.5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್, 329ಪಿಪಿಐ)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
Adreno 305 ಗ್ರಾಫಿಕ್ ಪ್ರೊಸೆಸರ್
1GB ರ್‍ಯಾಮ್
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಗ್ಲೋನಾಸ್,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ
ಇದನ್ನೂ ಓದಿ: ಹೊಸ ಲುಕ್‌ನಲ್ಲಿ ಮೋಟರೋಲಾ ಲೋಗೋ


Click it and Unblock the Notifications





