Home
ಮೊಬೈಲ್

ಖುಷಿ ಸುದ್ದಿ! ಭಾರತಕ್ಕೆ ಬರುತ್ತೆ Motorola Razr 50 ಫ್ಲಿಪ್ ಫೋನ್; ಟೀಸರ್ ಬಿಡುಗಡೆ

ಫೋಲ್ಡಬಲ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಶೀಘ್ರದಲ್ಲೇ ಹೊಸ ಮೊಟೊ ಫೋನ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ (Motorola) ಶೀಘ್ರದಲ್ಲೇ Razr 50 ಸರಣಿಯಲ್ಲಿ ಹೊಸ ಫೋಲ್ಡಬಲ್ ಫೋನನ್ನು ಬಿಡುಗಡೆ ಮಾಡಲಿದೆ. ಇದುವೇ ಮೊಟೊರೊಲಾ ರೇಜರ್ 50 (Motorola Razr 50) ಫ್ಲಿಪ್ ಸ್ಮಾರ್ಟ್‌ಫೋನ್. ಈ ಹೊಸ ಫೋನಿನ ಭಾರತದ ಟೀಸರ್ ಬಿಡುಗಡೆಯಾಗಿದೆ. ಬನ್ನಿ, ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಮೊಟೊರೊಲಾ ಈಗಾಗಲೇ Razr 50 ಸರಣಿಯಲ್ಲಿ ರೇಜರ್ 50 ಅಲ್ಟ್ರಾ (Motorola Razr 50 Ultra) ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ, ಕಂಪನಿಯು ಮೊಟೊರೊಲಾ ರೇಜರ್ 50 ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಫೋನಿನ ಬಿಡುಗಡೆಯನ್ನು ಖಚಿತಪಡಿಸಿದೆ. ಸರಣಿಯ ಎರಡೂ ಫೋನ್‌ಗಳು ಈಗಾಗಲೇ ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಖುಷಿ ಸುದ್ದಿ! ಭಾರತಕ್ಕೆ ಬರುತ್ತೆ Motorola Razr 50 ಫೋನ್; ಟೀಸರ್ ಬಿಡುಗಡೆ

ಈ ತಿಂಗಳ ಕೊನೆಯಲ್ಲಿ ಮೊಟೊರೊಲಾ ರೇಜರ್ 50 ಲಾಂಚ್?

ಕಂಪನಿಯು ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್‌ನ ಲಾಂಚ್ ಟೀಸರ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಶೀಘ್ರದಲ್ಲೇ ರೇಜರ್ 50 ಬರಲಿದೆ ಎಂದು ಟೀಸರ್‌ನಲ್ಲಿ ತಿಳಿಸಲಾಗಿದೆ. ಪ್ರಸ್ತುತ ಕಂಪನಿಯು ಈ ಫೋನಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಫೋನ್ ಈ ತಿಂಗಳು (ಆಗಸ್ಟ್ ) ಅಥವಾ ಮುಂದಿನ ತಿಂಗಳ (ಸೆಪ್ಟಂಬರ್) ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ದೊಡ್ಡ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ ಸೆಟಪ್

ಭಾರತೀಯ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ಬಾಹ್ಯ ಡಿಸ್ಲ್ಪೇಯನ್ನು ಒದಗಿಸಲಾಗುವುದು ಎಂದು ಕಂಪನಿಯು ತನ್ನ ಪೋಸ್ಟ್‌ನಲ್ಲಿ ಬರೆದಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆ ಮಾಡಲಾದ ಮಾದರಿಯನ್ನು ಹೋಲುತ್ತದೆ ಎಂದು ವಿಡಿಯೋದಲ್ಲಿ ನೋಡಬಹುದು. ಇದು ದೊಡ್ಡ ಕವರ್ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಹೊಂದಿದೆ.

ಮೊಟೊರೊಲಾ ರೇಜರ್ 50 ವೈಶಿಷ್ಟ್ಯಗಳು

ಡಿಸ್ಲ್ಪೇ: ಚೀನಾದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಫೋನ್ 6.9 ಇಂಚಿನ FullHD+ ಡಿಸ್ಲ್ಪೇ, AMOLED LTPO ಪ್ಯಾನೆಲ್ ಹೊಂದಿದೆ. ಇದು 120 Hz ರಿಫ್ರೆಶ್ ರೇಟ್, 3000 nits ಗರಿಷ್ಠ ಬ್ರೈಟ್‌ನೆಸ್‌, 3.6 ಇಂಚಿನ ಸೆಕೆಂಡರಿ ಡಿಸ್ಪ್ಲೇ, 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7300X ಚಿಪ್‌ಸೆಟ್ ಅನ್ನು ಪಡೆದಿದೆ. ಇದು 12GB LPDDR4X RAM ಅನ್ನು ಹೊಂದಿದೆ. 512GB UFS 2.2 ಸ್ಟೋರೇಜ್‌ ಒಳಗೊಂಡಿದೆ.

ಈ ಸುದ್ದಿ ಓದಿದ್ದೀರಾ?: ಬಂದೇ ಬಿಡ್ತು ಹೊಸ Vivo V40 SE 4G ಫೋನ್: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜಿಂಗ್.. ಬೆಸ್ಟ್‌ ಬೆಲೆ!

ಕ್ಯಾಮೆರಾ: ಮೊಟೊರೊಲಾ ರೇಜರ್ 50 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP OIS ಪ್ರಾಥಮಿಕ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ಮೊಟೊರೊಲಾ ರೇಜರ್ 50 ಸ್ಮಾರ್ಟ್‌ಫೋನ್ 4200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ Motorola Razr 50 ಫೋನ್ IPX8 ನೀರು ಮತ್ತು ಧೂಳಿನ ನಿರೋಧಕ ರೇಟಿಂಗ್‌ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಡ್ಯುಯಲ್ ಸಿಮ್, 5G, 4G, Wi-Fi, Bluetooth ನಂತಹ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Motorola Razr 50 Flip Launching soon in India, Design Teased Officially; What to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+