ಜಾಹೀರಾತಿನಲ್ಲಿ ಸ್ಯಾಮ್‌ಸಂಗ್ ಕಾಲೆಳೆದ ಮೊಟೊ: ಮಾಡಿದ್ದೇನು ಗೊತ್ತಾ?
ಮೊನ್ನೇ ತಾನೇ ಆಪಲ್ ಕಂಪನಿ ಹೊಸದಾಗಿ ಐಫೋನ್ X ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಸ್ಯಾಮ್‌ಸಂಗ್ ವಿಡಿಯೋವೊಂದನ್ನು ಹರಿಬಿಟ್ಟಿತ್ತು. ಗ್ರೋ ಆಪ್ ಅನ್ನುವ ಹೆಸರಿನಲ್ಲಿ ಹೊಸ ಆಪಲ್ ಫೋನ್ ಗಿಂತಲೂ ಸ್ಮಾಮ್‌ಸಂಗ್ ಬೆಸ್ಟ್ ಎನ್ನುವುದನ್ನು ವಿಡಿಯೋ ಮೂಲಕ ತಿಳಿಸಿತ್ತು. ಇದೇ ಮಾದರಿಯಲ್ಲಿ ಮೊಟೊ ವಿಡಿಯೋ ಮಾಡಿ ಸ್ಯಾಮ್‌ಸಂಗ್ ಕಾಲೆಳೆಯಲು ಮುಂದಾಗಿದೆ.
ಓದಿರಿ: ಟೆಲಿಕಾಂ ಲೋಕವನ್ನು ತಲ್ಲಣಗೊಳಿಸಿದ ಏರ್‌ಟೆಲ್‌ನ ಈ ಆಫರ್ ಎಲ್ಲರಿಗೂ ಲಭ್ಯವಿಲ್ಲ...!
ಲಿನೊವೊ ಒಡೆತನಕ್ಕೆ ಸೇರಿಕೊಂಡಿರುವ ಮೊಟೊ ಸಧ್ಯ ಮಾರುಕಟ್ಟೆಯಲ್ಲಿ ಹೊಸ ಫೋನ್ ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದೇ ಸಂದರ್ಭದಲ್ಲಿ ಅಪ್-ಅಪ್‌ಗ್ರೇಡ್ ಅನ್ನುವ ಹೊಸದೊಂದು ಜಾಹೀರಾತು ನೀಡಲು ಮುಂದಾಗಿದೆ. ಈ ಮೂಲಕ ಸ್ಯಾಮ್‌ಸಂಗ್‌ನಲ್ಲಿಯೂ ಇಲ್ಲದ ಆಯ್ಕೆ ತನ್ನ ಬಳಿ ಇರುವುದನ್ನು ತೋರಿಸಿಕೊಟ್ಟಿದೆ.
ಸದ್ಯ ಮಾರುಕಟ್ಟೆಯಲ್ಲಿ ಮೊಟೊ ಟಾಪ್ ಎಂಡ್ ಫೋನ್ ಎಂದರೆ ಮೊಟೊ Z2 ಪ್ಲೇ. ಈ ಸ್ಮಾರ್ಟ್‌ಫೋನ್ ಮೊಟೊ ಮೋಡ್ ಗಳೊಂದಿಗೆ ಸಂಪರ್ಕ ಸಾಧಿಸಲಿದ್ದು, ಇದೇ ಹಿನ್ನಲೆಯಿಟ್ಟುಕೊಂಡು ಮೊಟೊ ಪ್ರೋಜೆಕ್ಟರ್ ಬಳಕೆ ಮಾಡಿ ಸಿನಿಮಾ ತೋರಿಸುವ ಮೂಲಕ ಬೇರೆ ಯಾವುದೇ ಸ್ಮಾರ್ಟ್‌ಫೋನ್ ನಲ್ಲಿ ಇಂತಹ ಆಯ್ಕೆ ಇಲ್ಲ ಎಂಬುದನ್ನು ವಿಡಿಯೋದಲ್ಲಿ ತೋರಿಸಿದೆ.
ಓದಿರಿ: ಜಿಯೋಗೆ ಮೂಗುದಾರ ಹಾಕುವರಿಲ್ಲ: ವೊಡಾಫೋನ್‌ಗೂ ಶಾಕ್ ಕೊಟ್ಟ BSNL..!!
ಸ್ಯಾಮ್ ಸಂಗ್ ಆಡ್‌ನಲ್ಲಿ ಐಫೋನ್ ಬಳಕೆ ಮಾಡಿಕೊಂಡಿದ್ದ ಮಾದರಿಯಲ್ಲಿ ಇಲ್ಲಿ ಮೊಟೊ ತನ್ನ ಫೋನ್ ಸೂಪರ್ ಎನ್ನುವ ಕಾರಣಕ್ಕೆ ಸ್ಯಾಮ್‌ಸಂಗ್ ಪೋನ್ ಅನ್ನು ವಿಡಿಯೋದಲ್ಲಿ ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸ್ಯಾಮ್‌ಸಂಗ್ ಫೋನ್ ಕಾಲೆಳೆದು ಮೊಟೊ ಫೋನ್ ಆಪ್ಗ್ರೇಡ್ ಮಾಡಿಕೊಳ್ಳಿ ಎಂಬ ಸಂದೇಶವನ್ನು ನೀಡಿದೆ.


Click it and Unblock the Notifications








