Subscribe to Gizbot

ನೋಕಿಯಾಗಾಗಿ ಕಾಯುವಿಕೆ ಅಂತ್ಯ: ಬಿಡುಗಡೆ ದಿನಾಂಕ ಘೋಷಣೆ

Written By:

ಭಾರತೀಯ ಮೊಬೈಲ್ ಮಾರುಕಟ್ಟೆಗೆ ನೋಕಿಯಾ ಶೀಘ್ರವೇ ಬರಲಿದೆ ಎಂಬ ಕಾಯುವಿಕೆಗೆ ಕೊನೆಯಾಗಿದ್ದು, ಈ ವರ್ಷದ ಎರಡನೇ ಅವಧಿಗೆ ಭಾರತದಲ್ಲಿ ನೋಕಿಯಾ ಫೋನುಗಳು ದೊರೆಯಲಿದೆ ಎನ್ನುವ ಮಾತು ಸತ್ಯವಾಗಿದೆ. ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಕೊಳ್ಳಲು ಭಾರತೀಯ ಹೆಚ್ಚಿನ ದಿನ ಕಾಯುವ ಅವಶ್ಯಕತೆ ಇಲ್ಲ.

ನೋಕಿಯಾಗಾಗಿ ಕಾಯುವಿಕೆ ಅಂತ್ಯ: ಬಿಡುಗಡೆ ದಿನಾಂಕ ಘೋಷಣೆ

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಈ ಹಿಂದೆ ಹೇಳಿದಂತೆ ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ನೋಕಿಯಾ ಫೋನುಗಳನ್ನು ಮಾರಾಟ ಮಾಡುವ ಹಕ್ಕನ್ನು ಪಡೆದುಕೊಂಡಿರುವ HDM ಗ್ಲೂಬಲ್ ಸಂಸ್ಥೆಯೂ ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಫೋನುಗಳನ್ನು ಭಾರತ, ಮಲೆಷ್ಯಾ, ರಷ್ಯಾ, ಯುರೋಪ್ ಮತ್ತು ಯುಕೆಗಳಲ್ಲಿ ಒಂದೇ ಕಾಲಕ್ಕೆ ಬಿಡುಗಡೆ ಮಾಡಲಿದೆ.ಐಪಿಎಲ್‌ನಲ್ಲಿ

ಓದಿರಿ: ನಿಮ್ಮ ಫೇವರೆಟ್ ತಂಡ ಗೆದ್ಧರೆ 168 GB ಜಿಯೋ ಡೇಟಾ ಫ್ರೀ..!!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಮ್ಮೆಗೆ ಮಾರುಕಟ್ಟೆಗೆ:

ಒಮ್ಮೆಗೆ ಮಾರುಕಟ್ಟೆಗೆ:

ಭಾರತ, ಮಲೆಷ್ಯಾ, ರಷ್ಯಾ, ಯುರೋಪ್ ಮತ್ತು ಯುಕೆಗಳಲ್ಲಿ HDM ಗ್ಲೂಬಲ್ ಸಂಸ್ಥೆಯೂ ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಫೋನುಗಳನ್ನು ಒಮ್ಮೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆಯಂತೆ.

ಬಿಡುಗಡೆ ದಿನಾಂಕ:

ಬಿಡುಗಡೆ ದಿನಾಂಕ:

ಇದರಲ್ಲಿ ನೋಕಿಯಾ 3310 ಫೋನು ಮಾರುಕಟ್ಟೆಗೆ ಮೊದಲು ಬರಲಿದ್ದು, ಇದರ ಹಿಂದೆ ನೋಕಿಯಾ 3, ನೋಕಿಯಾ 5, ನೋಕಿಯಾ 6 ಆಂಡ್ರಾಯ್ಡ್ ಫೋನುಗಳು ಮಾರುಕಟ್ಟೆಗೆ ಬರಲಿದೆ. ಖಚಿತ ಮಾಹಿತಿಯ ಪ್ರಕಾರ ಮೇ 15 ರ ಒಳಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಏಪ್ರಿಲ್ ಕೊನೆ ವಾರದಲ್ಲಿ ನೋಕಿಯಾ 3310:

ಏಪ್ರಿಲ್ ಕೊನೆ ವಾರದಲ್ಲಿ ನೋಕಿಯಾ 3310:

ಮೊದಲು ಮಲೆಷ್ಯಾದಲ್ಲಿ ಏಪ್ರಿಲ್ ಕೊನೆ ವಾರದಲ್ಲಿ ನೋಕಿಯಾ 3310 ಬಿಡುಗಡೆಯಾಗಲಿದ್ದು, ಇದರ ಹಿಂದೆ ಆಂಡ್ರಾಯ್ಡ್ ಫೋನಿಗಳು ಒಟ್ಟಾಗಿ ಎಲ್ಲಾ ದೇಶದಲ್ಲಿಯೂ ಕಾಣಿಸಿಕೊಳ್ಳಲಿದೆ.

ಮೊದಲಿಗೆ ಆನ್‌ಲೈನ್‌:

ಮೊದಲಿಗೆ ಆನ್‌ಲೈನ್‌:

ಸದ್ಯ ನೋಕಿಯಾ ಸ್ಮಾರ್ಟ್‌ಫೋನುಗಳನ್ನು ಖರೀದಿಸಲು ಕಾಯ್ದು ಕುಳಿತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಮೊದಲಿಗೆ ನೋಕಿಯಾ ಆನ್‌ಲೈನಿನಲ್ಲಿ ಫೋನ್ ಸೇಲ್ ಮಾಡಲಿದೆ. ನಂತರದ ದಿನದಲ್ಲಿ ಸಾಮಾನ್ಯ ಮಾರುಕಟ್ಟೆಗೆ ಕಾಲಿಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಕೊಳ್ಳಲು ಭಾರತೀಯ ಹೆಚ್ಚಿನ ದಿನ ಕಾಯುವ ಅವಶ್ಯಕತೆ ಇಲ್ಲ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot