Subscribe to Gizbot

ಐಪಿಎಲ್‌ನಲ್ಲಿ ನಿಮ್ಮ ಫೇವರೆಟ್ ತಂಡ ಗೆದ್ದರೆ 168 GB ಜಿಯೋ ಡೇಟಾ ಫ್ರೀ..!!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಮೇಲಿಂದ ಮೇಲೆ ಹೊಸ ಹೊಸ ಕೊಡುಗೆಯನ್ನು ನೀಡುತ್ತಿದೆ. ಸದ್ಯ ಅದೇ ಮಾದರಿಯಲ್ಲಿ ಉಚಿತ 168 GB ಡೇಟಾವನ್ನು ನೀಡಲು ಮುಂದಾಗಿದೆ. ಆದರೆ ಇದಕ್ಕಾಗಿ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ.

ಐಪಿಎಲ್‌ನಲ್ಲಿ ನಿಮ್ಮ ಫೇವರೆಟ್ ತಂಡ ಗೆದ್ದರೆ 168 GB ಜಿಯೋ ಡೇಟಾ ಫ್ರೀ..!!!!

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ವಿವೋ-ಜಿಯೋ ಒಟ್ಟಾಗಿ 'ವಿವೋ-ಜಿಯೋ ಕ್ರಿಕೆಟ್ ಮೆನಿಯಾ' ಆಫರ್ ಇದಾಗಿದ್ದು, ಇದರಲ್ಲಿ ಕ್ರಿಕೆಟ್ ಫ್ಯಾನಗಳು ಜಿಯೋ ದಿಂದ ಉಚಿತ 168 GB 4G ಡೇಟಾವನ್ನು ತಮ್ಮದಾಗಿಸಿಕೊಳ್ಳವ ಅವಕಾಶ ಕೊಟ್ಟಿದೆ. ಅದುವೇ ನಿಮ್ಮ ಮೆಚ್ಚಿನ ಐಪಿಎಲ್ ಟೀಮ್‌ ಅನ್ನು ಸಫೋರ್ಟ್ ಮಾಡುವ ಮೂಲಕ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವೋ-ಜಿಯೋ ಕ್ರಿಕೆಟ್ ಮೆನಿಯಾ' ಆಫರ್ ಯಾರಿಗೆ ಲಭ್ಯ:

ವಿವೋ-ಜಿಯೋ ಕ್ರಿಕೆಟ್ ಮೆನಿಯಾ' ಆಫರ್ ಯಾರಿಗೆ ಲಭ್ಯ:

'ವಿವೋ-ಜಿಯೋ ಕ್ರಿಕೆಟ್ ಮೆನಿಯಾ' ಆಫರ್ ವಿವೋ-ಜಿಯೋ ಒಟ್ಟಾಗಿ ಘೋಷನೆ ಮಾಡಿರುವುದಾಗಿದ್ದು, ಇದು ವಿವೋ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಅದುವೇ ಒಮ್ಮೆ ಮಾತ್ರ.

ಎಲ್ಲಿಯವರೆಗೆ ಆಫರ್ ಲಭ್ಯ:

ಎಲ್ಲಿಯವರೆಗೆ ಆಫರ್ ಲಭ್ಯ:

ವಿವೋ-ಜಿಯೋ ಒಟ್ಟಾಗಿ ನೀಡಿರುವ 'ವಿವೋ-ಜಿಯೋ ಕ್ರಿಕೆಟ್ ಮೆನಿಯಾ' ಆಫರ್ ಪಡೆಯಲು ಮೇ 10 ಕೊನೆ ದಿನವಾಗಿದ್ದು, ಅಲ್ಲಿಯ ವರೆಗೆ ವಿವೋ ಬಳಕೆದಾರು ಜಿಯೋ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಐಪಿಎಲ್ ಮ್ಯಾಚ್ ಗೆದ್ದರೇ ದೊರೆಯುವ ಲಾಭವೇನು..?

ಐಪಿಎಲ್ ಮ್ಯಾಚ್ ಗೆದ್ದರೇ ದೊರೆಯುವ ಲಾಭವೇನು..?

ನೀವು ಆಯ್ಕೆ ಮಾಡಿಕೊಳ್ಳುವ ತಂಡವು ಒಂದು ಪಂದ್ಯವನ್ನು ಗೆದ್ಧರೆ ನಿಮ್ಮ ಆಕೌಂಟ್‌ಗೆ 3GB 4G ಡೇಟಾ ಸೇರಲಿದೆ, ಪಂದ್ಯ ಡ್ರಾ ಆದರೆ 2GB ಡೇಟಾ ಒಂದು ವೇಳೆ ನಿಮ್ಮ ನೆಚ್ಚಿನ ತಂಡ ಸೋತರೆ 1 GB ಡೇಟಾ ದೊರೆಯಲಿದೆ. ಅಲ್ಲದೇ ನಿಮ್ಮ ನೆಚ್ಚಿನ ತಂಡ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದರೇ ನಿಮ್ಮ ಡೇಟಾ ಡಬ್ಬಲ್ ಆಗಲಿದೆ. ಇದು ಒಟ್ಟಾದರೆ 168 GB ಆಗಲಿದೆ.

ಆಫರ್ ಪಡೆಯುವುದು ಹೇಗೆ:

ಆಫರ್ ಪಡೆಯುವುದು ಹೇಗೆ:

ಜಿಯೋ ಸಿಮ್ ಬಳಕೆ ಮಾಡುತ್ತಿರುವ ವಿವೋ ಸ್ಮಾರ್ಟ್‌ಫೋನ್ ಬಳಕೆದಾರು ಮೇ 10 ರ ಒಳಗೆ ತಮ್ಮ ನೆಚ್ಚಿನ ಐಪಿಎಲ್ ಟೀಮ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಜಿಯೋ ವೈಬ್ ಸೈಟ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Within days of announcing its "Dhan Dhana Dhan" plans, Jio is offering up to 168GB of 4G data to Vivo smartphone users. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot