ನೋಕಿಯಾ 3310 ಪೋನಿನ ಬೆಲೆ 1 ಲಕ್ಷ ಅಂತೆ..!! ಅಂತದೇನಿದೆ ಇದರಲ್ಲಿ..??
ಸದ್ಯ ನೋಕಿಯಾ 3310 ಸುಪ್ರಿಮೋ ಪುಟೀನ್ ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಬ್ಲಾಕ್ ಮತ್ಯು ಗೋಲ್ಡನ್ ಬಾಡಿ ಹೊಂದಿರುವ ಈ ಪೋನಿನ ಬಟನ್‌ಗಳನ್ನು ಟೆಟಾನಿಮ್ ನಿಂದ ಮಾಡಲಾಗಿದೆ.
ಮೊನ್ನೆ ತಾನೇ ನೋಕಿಯಾ ರಿಲಾಂಚ್ ಮಾಡಿದ್ದ ನೋಕಿಯಾ 3310 ಹೊಸದೊಂದು ಮಾದರಿಯಲ್ಲಿ ಬಿಡುಗಡೆ ಮಾಡಿದೆ. ಈ ಪೋನನ್ನು ಗೋಲ್ಡ್ ಮತ್ತು ಟೆಟಾನಿಯಮ್ ನಿಂದ ಮಾಡಲಾಗಿದ್ದು, ಈ ಪೋನಿನ ಬೆಲೆ l ಲಕ್ಷ ಎನ್ನಲಾಗಿದೆ.

ಓದಿರಿ: ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!
ನೋಕಿಯಾ 3310 ಸಾಮಾನ್ಯ ಪೋನಾದರು ಈ ಹಿಂದೆ ನೋಕಿಯಾ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನದೇ ವಿಶೇಷತೆಗಳಿಂದ ಗುರುತಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ 17 ವರ್ಷಗಳ ನಂತರ ಬಿಡುಗಡೆಯಾದರು ಸಖತ್ ಸುದ್ದಿಯಾಗುತ್ತಿದೆ.
ಸದ್ಯ ನೋಕಿಯಾ 3310 ಸುಪ್ರಿಮೋ ಪುಟೀನ್ ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಬ್ಲಾಕ್ ಮತ್ಯು ಗೋಲ್ಡನ್ ಬಾಡಿ ಹೊಂದಿರುವ ಈ ಪೋನಿನ ಬಟನ್‌ಗಳನ್ನು ಟೆಟಾನಿಮ್ ನಿಂದ ಮಾಡಲಾಗಿದೆ. ರಷ್ಯಾದಲ್ಲಿ ಮಾತ್ರ ಈ ಪೋನು ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ರೂಪಾಯಿಗಳಲ್ಲಿ ಈ ಫೊನಿನ ಬೆಲೆ 1,13,200 ರೂಗಳಾಗಲಿದೆ.

ಓದಿರಿ: ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999
ಈ ಪೋನನ್ನು Caviar ಎಂಬ ಸಂಸ್ಥೆಯೂ ಡಿಸೈನ್ ಮಾಡಿದ್ದು, ಪ್ರಪಂಚದಲ್ಲಿ ಐಕಾನ್ ಪೋನುಗಳನ್ನು ಡಿಸೈನ್ ಮಾಡುವುದರಲ್ಲಿ ಈ ಸಂಸ್ಥೆ ಹೆಸರುವಾಸಿಯಾಗಿದೆ. ನೋಕಿಯಾ 3310 ಪೋನಿನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಈ ಪೋನನ್ನು ವಿನ್ಯಾಸಗೊಳಿಸಿದೆ ಎನ್ನಲಾಗಿದೆ.


Click it and Unblock the Notifications








