ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999

Written By:

ಈಗಾಗಲೇ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೊಂದು ಚೀನಾ ಕಂಪನಿ ಭಾರತದಲ್ಲಿ ತನ್ನ ಸ್ಮಾರ್ಟ್‌ಪೋನುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೀನಾದ ಎಲೆಕ್ಟ್ರಾನಿಕ್ ದೈತ್ಯ ಐವೋಮಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸ್ಮಾರ್ಟ್‌ಪೋನೊಂದನ್ನು ಬಿಡುಗಡೆ ಮಾಡಿದೆ.

ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999

ಇದನ್ನು ಓದಿರಿ: ರೂ. 999 ಬೆಲೆ ಜಿಯೋ ಪೋನ್ ಬಿಡುಗಡೆ..!!

ಐವೋಮಿ iV505 ಹೆಸರಿನ ಪೋನೊಂದನ್ನು ಮಾರುಕಟ್ಟೆಗೆ ಆಗಮಿಸಿದ್ದು, ಸದ್ಯ ಈ ಪೋನು ಸ್ನಾಪ್‌ಕ್ಲೂಸ್.ಕಾಮ್‌ನಲ್ಲಿ ಲಭ್ಯವಿದೆ. ಈ ಪೋನಿನ ಬೆಲೆ 3,999 ರೂಗಳಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡುಯಲ್ 4G ಸಪೋರ್ಟ್:

ಡುಯಲ್ 4G ಸಪೋರ್ಟ್:

ಡುಯಲ್ ಸಿಮ್ ಹಾಕಬಹುದಾದ ಈ ಸ್ಮಾರ್ಟ್‌ಪೋನಿನಲ್ಲಿ ಎರಡು ಸಿಮ್‌ಗಳು 4G ಸಪೋರ್ಟ್‌ ಮಾಡಲಿವೆ. ಒಂದರಲ್ಲಿ ಜಿಯೋ ಮತ್ತೊಂದರಲ್ಲಿ ಬೇರೆದೊಂದು 4G ಸಿಮ್‌ ಬಳಸಬಹುದಾಗಿದೆ. ಜೊತೆಗೆ ಆಂಡ್ರಾಯ್ಡ್ 6.0 ದಲ್ಲಿ ಇದು ಕಾರ್ಯ ನಿರ್ವಹಿಸಲಿದೆ.

5 ಇಂಚಿನ ಡಿಸ್‌ಪ್ಲೇ:

5 ಇಂಚಿನ ಡಿಸ್‌ಪ್ಲೇ:

ಐವೋಮಿ iV505 ಸ್ಮಾರ್ಟ್‌ಪೋನಿನಲ್ಲಿ qHD (540x960 pixels) IPS ಡಿಸ್‌ಪ್ಲೇ ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ 1.3GHz ಕ್ವಾಡ್‌ಕೋರ್‌ ಪ್ರೊಸೆಸರ್ ಹೊಂದಿದ್ದು, ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತಿದೆ. ಅಲ್ಲದೇ 1GB RAM ಸಹ ಈ ಪೋನಿನಲ್ಲಿದೆ.

ಎರಡು ಕಡೆಯಲ್ಲೂ 5MP ಕ್ಯಾಮೆರಾ:

ಎರಡು ಕಡೆಯಲ್ಲೂ 5MP ಕ್ಯಾಮೆರಾ:

ಐವೋಮಿ iV505 ಸ್ಮಾರ್ಟ್‌ಪೋನಿನಲ್ಲಿ ಹಿಂಭಾಗ ಮತ್ತು ಮುಂಬಾಗ ಎರಡು ಕಡೆಗಳಲ್ಲೂ 5MP ಕ್ಯಾಮೆರಾ ಅಳವಡಿಸಲಾಗಿದ್ದು, 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, 128GB ವಿಸ್ತರಿಸಿಕೊಳ್ಳಬಹುದಾಗಿದೆ.

3000mAh ಬ್ಯಾಟರಿ:

3000mAh ಬ್ಯಾಟರಿ:

ಐವೋಮಿ iV505 ಸ್ಮಾರ್ಟ್‌ಪೋನಿನಲ್ಲಿ 3000mAh ಬ್ಯಾಟರಿ ಇದ್ದು, ಇದರೊಂದಿಗೆ Bluetooth, GPS/ A-GPS, Micro-USB port ಸಹ ಹೊಂದಿದೆ. ಬೇರೆ ಕಂಪನಿಗಳಲ್ಲಿ 10000 ನೀಡಿದರು ಇಷ್ಟು ಆಯ್ಕೆಗಳು ದೊರೆಯುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
company has launched the iVoomi iV505 at Rs. 3,999, and the smartphone is available via ShopClues. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot