Subscribe to Gizbot

ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!

Written By:

ದಿನೇ ದಿನೇ ಭಾರತೀಯ ಟೆಲಿಕಾಮ್‌ ವಲಯದಲ್ಲಿ ಡೇಟಾ ಸಮರ ಜೊರಾಗಿಯೇ ನಡೆಯುತ್ತಿದ್ದು, ದಿನಕ್ಕೊಂದು ಹೊಸ ಆಫರ್‌ಗಳು ಗ್ರಾಹರಕನ್ನು ಆಕರ್ಷಿಸುತ್ತಿದೆ.

ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!

ಓದಿರಿ: ಡುಯಲ್ 4G ಸಿಮ್ ಸಪೋರ್ಟ್ ಮಾಡುವ ಐವೋಮಿ iV505: ಬೆಲೆ 3,999

ಜಿಯೋ ತನ್ನ ಸೇವೆಗಳ ಮೇಲೆ ದರವಿಧಿಸುವುದನ್ನೇ ಕಾಯುತ್ತಿದ್ದ ಇತರೆ ಕಂಪನಿಗಳು ಜಿಯೋ ನಾಚಿಕೊಳ್ಳುವಂತಹ ಆಫರ್‌ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದ್ದು, 150 ರೂಗಳಿಗೆ ಏರ್‌ಟೆಲ್‌ನಿಂದ ಜಿಯೋ ಮಾದರಿಯಲ್ಲಿ ದಿನಕ್ಕೆ 1GB 4G ಡೇಟಾ ಆಫರ್‌ ಘೋಷಣೆ ಮಾಡಲಾಗಿದೆ.

ಈ ಹಿಂದೆ ಜಿಯೋ ಪ್ರೈಮ್ ಆಫರ್‌ಗೆ ಸೆಡ್ಡು ಹೊಡೆಯುವಂತೆ ರೂ. 345ಕ್ಕೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ಪ್ರತಿ ನಿತ್ಯ 1GB ಡೇಟಾವನ್ನು ನೀಡುವ ಆಫರ್‌ ಕೊಟ್ಟಿದ್ದ ಏರ್‌ಟೆಲ್. ಈಗ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ಘೋಷಣೆ ಮಾಡಿದೆ.

ಏರ್‌ಟೆಲ್‌ನಿಂದ 150 ರೂಗಳಿಗೆ ಪ್ರತಿನಿತ್ಯ 1GB 4G ಡೇಟಾ.!!

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರನ್ನು ಸಂತೋಷಗೊಳಿಸಲು ಡೇಟಾ ಬೂಸ್ಟರ್ ಪ್ಯಾಕ್ ಘೋಷಣೆ ಮಾಡಿದ್ದು, ಕೇವಲ 150 ರೂಗಳಿಗೆ ಪ್ರತಿ ನಿತ್ಯ 1GB ಡೇಟಾವನ್ನು ನೀಡಲು ಮುಂದಾಗಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.

ಇದು ಸಹ ಪ್ರೀಪೇಯ್ಡ್ ಆಫರ್‌ ಮಾದರಿಯಲ್ಲೇ ಇದ್ದು, ಮುಂಜಾನೆ 500 MB ಮತ್ತು ರಾತ್ರಿ 500 MB ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಲಿದೆ. ಇದರಿಂದಾಗಿ ಪೋಸ್ಟ್‌ಪೇಯ್ಡ್ ಗ್ರಾಹಕರು ಹೆಚ್ಚಿನ ಢೇಟಾ ಬೆನಿಫಿಟ್ ಪಡೆಯಬಹುದಾಗಿದೆ.

Read more about:
English summary
A new data booster pack priced at Rs 150 will offer 1GB of data every day valid for 28 days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot