Subscribe to Gizbot

ಮೇ 5 ರಿಂದ ಭಾರತದಲ್ಲಿ ನೋಕಿಯಾ 3310 ಫೋನ್ ಮಾರಾಟ ಆರಂಭ

Written By:

ಇಷ್ಟು ದಿನ ಭಾರತೀಯ ಮಾರುಕಟ್ಟೆಗೆ ಎಂದು ನೋಕಿಯಾ ಆಗಮನವಾಗುವುದೋ ಎಂದು ಕಾಯುತ್ತಿದ್ದವರಿಗೆ ಇಲ್ಲಿದೇ ಸಿಹಿ ಸುದ್ದಿ, ನೋಕಿಯಾ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಕಾಲಿಡಲು ಮೂಹುರ್ತ ಫಿಕ್ಸ್ ಆಗಿದೆ. ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಮೇ 5ರಿಂದ ನೋಕಿಯಾ 3310 ಫೋನ್ ಮೊದಲಿಗೆ ಕಾಣಿಸಿಕೊಳ್ಳಲಿದೆ.

ಮೇ 5 ರಿಂದ ಭಾರತದಲ್ಲಿ ನೋಕಿಯಾ 3310 ಫೋನ್ ಮಾರಾಟ ಆರಂಭ

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ಮೇ ತಿಂಗಳಿನಿಂದ ನೋಕಿಯಾ ಅಬ್ಬರ ಭಾರತೀಯ ಮಾರುಕಟ್ಟೆಯಲ್ಲಿ ಶುರುವಾಗಲಿದ್ದು, ಮೇ 5ಕ್ಕೆ ನೋಕಿಯಾ 3310 ಫೋನ್ ಭಾರತದಲ್ಲಿ ಲಭ್ಯವಿರಲಿದೆ ಎಂದು ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು HMD ಗ್ಲೋಬಲ್ ಸಂಸ್ಥೆಯೂ ತಿಳಿಸಿದೆ.

ಓದಿರಿ: 10,000 ರೂ. ಹೊಸ ಆಫರ್ ಬಿಡುಗಡೆ ಮಾಡಿದೆ ಜಿಯೋ..!! ಏನು ಗೊತ್ತಾ..??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲಿಗೆ ನೋಕಿಯಾ 3310:

ಮೊದಲಿಗೆ ನೋಕಿಯಾ 3310:

ನೋಕಿಯಾ ಈ ಹಿಂದೆ ಭಾರತದಲ್ಲಿ ಲಾಂಚ್ ಆದ ಸಂದರ್ಭದಲ್ಲಿಯೂ ನೋಕಿಯಾ 3310 ಫೋನ್ ಭಾರೀ ಸದ್ದು ಮಾಡಿತ್ತು, ಹಾಗಾಗಿ ಮೊದಲಿಗೆ ಆದೇ ಫೋನ್ ಅನ್ನು ರೀ ಲಾಂಚ್ ಮಾಡಲು ನೋಕಿಯಾ ಮುಂದಾಗಿದೆ. ಇದಾದ ನಂತರದಲ್ಲಿ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಗೆ ಬರಲಿವೆ.

ನೋಕಿಯಾ 3310 ಫೋನ್ ಬೆಲೆ:

ನೋಕಿಯಾ 3310 ಫೋನ್ ಬೆಲೆ:

ಸದ್ಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ನೋಕಿಯಾ 3310 ಫೋನ್ ಬೆಲೆ ರೂ. 3,899ಗಳಾಗಿದೆ. ಇದು ಕೊಂಚ ಜಾಸ್ತಿ ಎನ್ನಿಸಬಹುದಾದರು ನೋಕಿಯಾ ಬೇಕೆ ಬೇಕು ಎನ್ನುವವರಿಗೆ ಇದು ಹೆಚ್ಚೆನಿಸುವುದಿಲ್ಲ.

ನೋಕಿಯಾ 3310 ಬಣ್ಣಗಳು:

ನೋಕಿಯಾ 3310 ಬಣ್ಣಗಳು:

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 3310 ಮೊದಲಿಗೆ ಕಾಣಿಸಿಕೊಳ್ಳಲಿದ್ದು, ವಾರ್ಮ್ ರೆಡ್, ಹಳದಿ, ಡಾರ್ಕ್ ಬ್ಲೂ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ.

ನೋಕಿಯಾ 3310 ವಿಶೇಷತೆಗಳು:

ನೋಕಿಯಾ 3310 ವಿಶೇಷತೆಗಳು:

S30+ ಅಪರೇಟಿಂಗ್ ಸಿಸ್ಟಮ್ ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ. ಅಲ್ಲದೇ 2.5G ಕನೆಕ್ಟವಿಟಿಯನ್ನು ಈ ಫೋನ್ ಹೊಂದಿದೆ. 2MP ಹಿಂಬದಿ ಕ್ಯಾಮೆರಾ ಸಹ ಈ ಫೋನಿನಲ್ಲಿದೆ.

ಸ್ನೇಕ್ ಗೇಮ್‌ಗೆ ಮರುಜೀವ:

ಸ್ನೇಕ್ ಗೇಮ್‌ಗೆ ಮರುಜೀವ:

ಅಲ್ಲದೇ ಟೈಮ್ ಪಾಸಿಗಾಗಿ ಹಳೇ ಸ್ನೇಕ್ ಆಟಕ್ಕೆ ಹೊಸ ರೂಪ ನೀಡಲಾಗಿದೆ. ಹೊಸ ಮಾದರಿಯ ಸ್ನೇಕ್ ಗೇಮ್ ಬಳಕೆದಾರರಿಗೆ ಹೊಸ ಅನುಭವನ್ನು ನೀಡುವುದು ಖಂಡಿತ. ಹಳೇ ನೋಕಿಯಾ 3310 ಬ್ಲಾಕ್ ಅಂಡ್ ವೈಟ್ ಡಿಸ್‌ಪ್ಲೇ ಇದ್ದರೇ ಇದು ಬಣ್ಣ-ಬಣ್ಣದಾಗಿದೆ.

ಒಂದು ತಿಂಗಳ ಬ್ಯಾಟರಿ ಸ್ಟ್ಯಾಂಡ್ ಬೈ:

ಒಂದು ತಿಂಗಳ ಬ್ಯಾಟರಿ ಸ್ಟ್ಯಾಂಡ್ ಬೈ:

ನೋಕಿಯಾ 3310 ಪೋನಿನಲ್ಲಿ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದ್ದು, 22 ಗಂಟೆಗಳ ಟಾಕ್ ಟೈಂ ಹೊಂದಿರುವ ಈ ಬ್ಯಾಟರಿ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ.

ಎಫ್‍ಎಂ ರೇಡಿಯೋ ಸಹ ನೀಡಲಾಗಿದೆ:

ಎಫ್‍ಎಂ ರೇಡಿಯೋ ಸಹ ನೀಡಲಾಗಿದೆ:

ನೋಕಿಯಾ 3310 ಪೋನಿನಲ್ಲಿ ಎಫ್‍ಎಂ ರೇಡಿಯೋ ನೀಡಲಾಗಿದ್ದು, ಪೋನಿನಲ್ಲಿ 16 MB ಆಂತರಿಕ ಮೆಮೊರಿ ಇದ್ದು, ಗ್ರಾಹಕರು ಮೈಕ್ರೊ SD ಕಾರ್ಡ್‌ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಮೈಕ್ರೋ USB ಚಾರ್ಜಿಂಗ್:

ಮೈಕ್ರೋ USB ಚಾರ್ಜಿಂಗ್:

ನೋಕಿಯಾ 3310 ಪೋನು ಮೈಕ್ರೋ USB ಚಾರ್ಜಿಂಗ್ ಹೊಂದಿದ್ದು, ಇದನ್ನು ಕಂಪ್ಯೂಟರ್‌ಗೆ ಸಂಪರ್ಕಿಸ ಬಹುದಾಗಿದ್ದು, 3.5 ಹೆಡ್‌ಪೋನ್ ಜ್ಯಾಕ್ ನೀಡಲಾಗಿದೆ.

ನೋಕಿಯಾ 3310 ಪೋನಿನ ವಿಡಿಯೋ ನೋಡಿ:

ನೋಕಿಯಾ ತನ್ನ ನೂತನ ಪೋನು ನೋಕಿಯಾ 3310ದ ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಪೋನಿನ ವಿಷೇಶತೆಗಳನ್ನು ವಿವಿವರಿಸಿದ್ದು, ನೀವು ನೋಡಲೇ ಬೇಕಾದ ವಿಡಿಯೋ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 3310 is all set to make a comeback. As per a report, Nokia 3310 (2017) will be available for orders from May 5 at a price of Rs 3,899. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot