Subscribe to Gizbot

ಡ್ಯುಯಲ್ ಕ್ಯಾಮೆರಾ ಹೊಂದಿರುವ ನೋಕಿಯಾ 8 ಲಾಂಚ್: ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ.!

Written By:

ಮೊದಲಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದ ನೋಕಿಯಾ ಈ ಬಾರಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡಿದೆ. ನೋಕಿಯಾ 8 ಸ್ಮಾರ್ಟ್‌ಫೋನ್ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಟಾಪ್ ಕ್ಲಾಸ್ ವಿಶೇಷತೆಗಳನ್ನು ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಹೊಂದಿರುವ ನೋಕಿಯಾ 8 ಲಾಂಚ್: ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ

ಓದಿರಿ: SMS ಮೂಲಕ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಸದ್ಯ ಬಿಡುಗಡೆಯಾಗಿರುವ ನೋಕಿಯಾ 8 ಬೆಲೆ 599 ಯೂರೊ ಗಳಾಗಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಬೆಲೆ ರೂ. 45,000ವಾಗಲಿದೆ. ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ ನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಬ್ಲೂ, ಕಾಪರ್ ಮತ್ತು ಸ್ಟಿಲ್ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 8 ವಿನ್ಯಾಸ:

ನೋಕಿಯಾ 8 ವಿನ್ಯಾಸ:

ನೋಕಿಯಾ 8 ಸ್ಮಾರ್ಟ್‌ಫೋನ್ ಅಲೂಮಿನಿಯಮ್ ನಿಂದ ನಿರ್ಮಿಸಿರುವುದಾಗಿದ್ದು, ಯುನಿಬಾಡಿ ಡಿಸೈನ್ ಅನ್ನು ಹೊಂದಿದೆ. ನೋಡಲು ನೋಕಿಯಾ 5 ಮಾದರಿಯಲ್ಲಿ ಕಾಣಿಸಿಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಪಟ್ ಕಾಣಬಹುದಾಗಿದೆ. ಹೋಮ್ ಬಟನ್ ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ನೋಕಿಯಾ 8 ಟಾಪ್ ಎಂಡ್ ಸ್ಮಾರ್ಟ್ ಪೋನ್ ಆಗಿದ್ದು, ಇದರಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಕಾರ್ಲ್ ಜೀಯಸ್ ಲೆನ್ಸ್ ನೊಂದಿಗೆ 13 + 13 MP ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಡಿಸ್‌ಪ್ಲೇ ಫ್ಲಾಸ್ ಅನ್ನು ನೀಡಲಾಗಿದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಡಿಸ್‌ಪ್ಲೇ ಮತ್ತು ಪ್ರೋಸೆಸರ್:

ಡಿಸ್‌ಪ್ಲೇ ಮತ್ತು ಪ್ರೋಸೆಸರ್:

5.3 ಇಂಚಿನ IPS 2K ಗುಣಮಟ್ಟದ ಡಿಸ್‌ಪ್ಲೇಯ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿದೆ. ಇದಲ್ಲದೇ ಈ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ನೀಡಲಾಗಿದ್ದು, ಜೊತೆಗೆ 4G RAM ಮತ್ತು 64 GB ಇಂಟರ್ನಲ್ ಮೆಮೊರಿ ಇದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.

ಮೂರು ಮೈಕ್ರೋ ಫೋನ್:

ಮೂರು ಮೈಕ್ರೋ ಫೋನ್:

ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುವ ಸಲುವಾಗಿ ಈ ಫೋನಿನಲ್ಲಿ ಮೂರು ಮ್ರೈಕ್ರೋ ಫೋನ್‌ಗಳನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದು. ಜೊತೆಗೆ ಈ ಸ್ಮಾರ್ಟ್‌ ಫೋನ್ ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯಚಟುವಟಿಕೆ ನಡೆಸಲಿದೆ. ಅಲ್ಲದೇ ಆಂಡ್ರಾಯ್ಡ್ O ಆಪ್‌ಡೇಟ್ ಸಹ ಪಡೆದುಕೊಳ್ಳಲಿದೆ.

ಉತ್ತಮ ಬ್ಯಾಟರಿ:

ಉತ್ತಮ ಬ್ಯಾಟರಿ:

ಇದಲ್ಲದೇ ನೋಕಿಯಾ 8 ನಲ್ಲಿ 3090 ಬ್ಯಾಟರಿಯನ್ನು ಕಾಣಬಹುದಾಗಿದ್ದು, ಅಲ್ಲದೇ ಕ್ವೀಕ್ ಚಾರ್ಜರ್ 3ಯನ್ನು ನೀಡಲಾಗಿದೆ. 4G LET, USB - C ಪೋರ್ಟ್, ಬ್ಲೂಟುತ್ 5.0 ಮತ್ತು Wi-Fi ಆಯ್ಕೆಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಆನ್‌ಲೈನಿನಲ್ಲಿ ಹೆಚ್ಚಿನ ಬೆಲೆಗೆ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ ಮಾರುವುದು ಹೇಗೆ.?

English summary
As expected, HMD Global has today taken the wraps off its first Nokia-branded flagship device. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot