ನೋಕಿಯಾದಿಂದ 20 ಎಂಪಿ ಕ್ಯಾಮೆರಾ ಸ್ಮಾರ್ಟ್‌‌ಫೋನ್‌ ಬಿಡುಗಡೆ

By Ashwath
|

ನೋಕಿಯಾ ಕಂಪೆನಿ ಅಮೆರಿಕದ ಮಾರುಕಟ್ಟೆಗೆ ಹೊಸ 20 ಎಂಪಿ ಕ್ಯಾಮೆರಾವಿರುವ ಸಿಂಗಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಸಿಂಗಲ್‌ ಸಿಮ್‌ ಹಾಕಬಹುದಾದ ಈ ಸ್ಮಾರ್ಟ್‌ ಫೋನ್‌ ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ ಬಿಡುಗಡೆಯಾಗಿದ್ದು,550 ಡಾಲರ್‌(ಅಂದಾಜು 34 ಸಾವಿರ ರೂ.) ಬೆಲೆಯನ್ನು ನಿಗದಿ ಮಾಡಿದೆ.

ಮಾರುಕಟ್ಟೆಗೆ ಈಗಾಗಲೇ 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ ಸೋನಿ ಮತ್ತು ನೋಕಿಯಾ ಈಗಾಗಲೇ ಪರಿಚಯಿಸಿದೆ. ಸೋನಿ ಎಕ್ಸ್‌ಪೀರಿಯಾ ಝಡ್‌ 1 ಸ್ಮಾರ್ಟ್‌‌ಫೋನಿಗೆ 20 ಎಂಪಿ ಕ್ಯಾಮೆರಾವನ್ನು ನೀಡಿತ್ತು.ನೋಕಿಯಾ ಈ ಹಿಂದೆ ಬಿಡುಗಡೆ ಮಾಡಿದ್ದ ಲೂಮಿಯಾ 1520 ಸಹ 20 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿತ್ತು. ಆದರೆ ಈ ಸ್ಮಾರ್ಟ್‌ಫೋನಿನ ಸ್ಕ್ರೀನ್‌ ಆರು ಇಂಚು ಹೊಂದಿತ್ತು.ಹೀಗಾಗಿ ವಿಂಡೋಸ್‌ ಓಎಸ್‌‌ನಲ್ಲಿ ಐದು ಇಂಚಿನ ಸ್ಕ್ರೀನ್‌ಲ್ಲಿ 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರು ಈ ಸ್ಮಾರ್ಟ್‌‌‌‌‌ಫೋನ್‌ ಖರೀದಿಸಬಹುದು.

ಈ ಸ್ಮಾರ್ಟ್‌ಫೋನಿನ ಕೆಲವೊಂದು ವಿಶೇಷತೆಗಳನ್ನು ಒಳಗೊಂಡಿದೆ. ಸಾಧಾರಣವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಅಥವಾ ಎರಡು ಮೈಕ್ರೋಫೋನ್‌ಗಳಿರುತ್ತವೆ.ಆದರೆ ಇದಕ್ಕೆ ನಾಲ್ಕು ಮೈಕ್ರೋಫೋನ್‌ಗಳನ್ನು ನೋಕಿಯಾ ನೀಡಿದೆ. ಮುಂದುಗಡೆ ಕರೆಗಾಗಿ ಎರಡು ಮೈಕ್ರೋಫೋನ್‌, ಹಿಂದುಗಡೆ ವಿಡಿಯೋ ಮಾಡುವಾಗ ಸ್ಪಷ್ಟವಾಗಿ ಧ್ವನಿಯನ್ನು ರೆಕಾರ್ಡ್‌‌ ಮಾಡಲು ಮತ್ತೆರಡು ಮೈಕ್ರೋಫೋನ್‌ಗಳನ್ನು ನೋಕಿಯಾ ಈ ಸ್ಮಾರ್ಟ್‌‌‌ಫೋನಿಗೆ ನೀಡಿದೆ.ಇನ್ನೂ ಲೂಮಿಯಾ ಐಕಾನ್‌ PureView ZEISS 6-lens ಕ್ಯಾಮೆರಾ ಸೆನ್ಸರ್‌ ಒಳಗೊಂಡಿದೆ.

1

1

137* 71* 9.8 ಮಿ.ಮೀ ಗಾತ್ರ, 167 ಗ್ರಾಂ ತೂಕದ ಸ್ಮಾರ್ಟ್‌‌‌ಫೋನ್‌ ,441 ಪಿಪಿಐ 1920 x 1080 ಪಿಕ್ಸೆಲ್‌ ರೆಸೂಲೂಶನ್‌‌ ಹೊಂದಿರುವ 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಒಳಗೊಂಡಿದೆ.

2

2


ಲೈಟ್‌‌ ಸೆನ್ಸರ್‌,ಎಕ್ಸಲರೋಮೀಟರ್‌,ಗೈರೋಸ್ಕೋಪ್‌,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಸ್ಮಾರ್ಟ್‌‌ಫೋನ್‌ ಹೊಂದಿದೆ.ಎಲ್‌ಟಿಇ,3ಜಿ,ಬ್ಲೂಟೂತ್‌,ಎನ್‌ಎಫ್‌ಸಿ,ಜಿಪಿಎಸ್‌‌,ವೈಫೈ ಕನೆಕ್ಟಿವಿಟಿ ವಿಶೇಷತೆಗಳನ್ನು ನೋಕಿಯಾ ಲೂಮಿಯಾ ಐಕಾನ್‌ ಹೊಂದಿದೆ.

3

3


2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸಸರ್‌,Adreno 330 ಗ್ರಾಫಿಕ್‌ 2 GB RAMನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

4

4


2420 mAh ಬ್ಯಾಟರಿ,32 GB ಆಂತರಿಕ ಮೆಮೊರಿಯನ್ನು ಲೂಮಿಯಾ ಐಕಾನ್‌ ಹೊಂದಿದೆ. ಹೆಚ್ಚವರಿ ಮೆಮೊರಿಗೆ ನೋಕಿಯಾ ಸ್ಮಾರ್ಟ್‌ಫೋನಿಗೆ ಎಸ್‌ಡಿ ಕಾರ್ಡ್ ಸ್ಲಾಟ್‌ ನೀಡಿಲ್ಲ. ಆದರೆ ಸ್ಕೈ ಡ್ರೈವ್‌ನಲ್ಲಿ 7 GB ಡೇಟಾವನ್ನು ಉಚಿತವಾಗಿ ಸಂಗ್ರಹ ಮಾಡಬಹುದು ಎಂದು ತಿಳಿಸಿದೆ.

5

5


ಹಿಂದುಗಡೆ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 20 ಎಂಪಿ ಕ್ಯಾಮೆರಾ, ಮುಂದುಗಡೆ 1.2- ಎಂಪಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X