ನೋಕಿಯಾದಿಂದ ಆಂಡ್ರಾಯ್ಡ್‌ ಫೋನ್‌!

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌‌ ನಡುವೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವ ನೋಕಿಯಾ ಈಗ ವಿಂಡೋಸ್‌ ಹೊರತಾಗಿ ಆಂಡ್ರಾಯ್ಡ್‌‌ ಓಎಸ್‌‌ ಸ್ಮಾರ್ಟ್‌‌ಫೋನ್‌ ತಯಾರಿಸಲು ಮುಂದಾಗತ್ತಿದೆ ಎನ್ನುವ ಸುದ್ದಿ ಟೆಕ್‌ ಮಾಧ್ಯಮಗಳಲ್ಲಿ ಹರಿದಾಡಲು ಆರಂಭಿಸಿದೆ.

ನೋಕಿಯಾ ಆಂಡ್ರಾಯ್ಡ್‌ ಓಎಸ್‌ ನಿರ್ಮಾ‌ಣಕ್ಕೆ ಮುಂದಾಗುತ್ತಿದೆ ಎನ್ನುವ ಸುದ್ದಿ ಬಹಳ ಹಳೇಯದು. ಈಗ evleaks ಟ್ವೀಟ್‌ ಮಾಡಿ,ಚಿತ್ರಗಳನ್ನು ಪ್ರಕಟಿಸುವ ಮೂಲಕ ಆಂಡ್ರಾಯ್ಡ್‌ ಓಎಸ್‌ನಲ್ಲಿ ನೋಕಿಯಾ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ತಯಾರಿಸುತ್ತದೆ ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌‌ ಕಂಪೆನಿಗಳು ಉತ್ಪನ್ನಗಳ ವಿಶೇಷತೆ ಫೋಟೋ ಇನ್ನಿತರ ಮಾಹಿತಿಗಳನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲೇ ಆ ಮಾಹಿತಿಗಳನ್ನು ಮಾಧ್ಯಮಗಳಿವ ತಿಳಿಸುವ evleaks,ಈ ಸುದ್ದಿಯನ್ನು ಟ್ವೀಟ್‌ ಮಾಡಿರುವರಿಂದ ಈಗ ನೋಕಿಯಾ ಆಂಡ್ರಾಯ್ಡ್ ಫೋನ್‌ ತಯಾರಿಸುವ ಬಗ್ಗೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

ಮಾರುಕಟ್ಟೆಯಲ್ಲಿ ಗೂಗಲ್‌ನ ಪ್ರತಿಸ್ಪರ್ಧಿ ಕಂಪೆನಿಯಾಗಿರುವ ಮೈಕ್ರೋಸಾಫ್ಟ್‌‌ ನೋಕಿಯಾ ಕಂಪೆನಿಯನ್ನು ಖರೀದಿಸಿದೆ. ನೋಕಿಯಾ ಕಂಪೆನಿ ಮೈಕ್ರೋಸಾಫ್ಟ್‌ಗೆ ಮಾರಾಟವಾಗುವವರೆಗೆ ವಿಂಡೋಸ್‌ ಓಎಸ್‌ನಲ್ಲೇ ತನ್ನ ಎಲ್ಲಾ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿಕೊಂಡು ಬಂದಿತ್ತು.ಈಗ ಆಶಾ ಸರಣಿಯ ಫೀಚರ್‌ ಫೋನ್‌ಗಳನ್ನು ತನ್ನ ಆಶಾ ಓಎಸ್‌ನಲ್ಲಿ ಬಿಡುಗಡೆ ಮಾಡುತ್ತಿದೆ.


ಇದನ್ನೂ ಓದಿ: ಟಾಪ್ - 5 3ಜಿ ರ್‍ಯಾಮ್‌ ಸ್ಮಾರ್ಟ್‌ಫೋನ್‌‌ಗಳು

<blockquote class="twitter-tweet blockquote" lang="en"><p>Android on Nokia ( -virtual buttons) <a href="http://t.co/lZPmP4G84t">pic.twitter.com/lZPmP4G84t</a></p>— @evleaks (@evleaks) <a href="https://twitter.com/evleaks/statuses/420933979655512064">January 8, 2014</a></blockquote> <script async src="//platform.twitter.com/widgets.js" charset="utf-8"></script>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot