ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸಾಧನಗಳ ಮುಂದೆ ಬೇಡಿಕೆ ಕುಸಿದಿರುವ ನೋಕಿಯಾ ಕಂಪೆನಿಗೆ ಪುನಶ್ಚೇತನ ನೀಡಲು ಮೈಕ್ರೋಸಾಫ್ಟ್ ಮುಂದಾಗಿದ್ದು, ನೋಕಿಯಾ ಕಂಪೆನಿಯನ್ನು5.44 ಬಿಲಿಯನ್ ಯುರೋ ನೀಡಿ ಖರೀದಿಸಿದೆ.
ಈ ಸಂಬಂಧ ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ ಅಧಿಕೃತವಾಗಿ ಪ್ರಕಟಿಸಿದ್ದು, ನೋಕಿಯಾದ ಎಲ್ಲಾ ಉದ್ಯೋಗಿಗಳು ಇನ್ನು ಮುಂದೆ ಮೈಕ್ರೋಸಾಫ್ಟ್ ಅಡಳಿತ ಮಂಡಳಿಯ ನಿಯಂತ್ರಣದಲ್ಲಿರುತ್ತಾರೆ.
ಮೊಬೈಲ್ ಉದ್ಯಮದಲ್ಲಿ ಒಂದು ಕಂಪೆನಿಯನ್ನು ಇನ್ನೊಂದು ಕಂಪೆನಿ ಖರೀದಿಸುವುದು ಹೊಸದೆನಲ್ಲ. ಈ ಹಿಂದೆ ಗೂಗಲ್ 2012ರಲ್ಲಿ ಮೋಟರೋಲಾವನ್ನು 12.5 ಶತಕೋಟಿ ಡಾಲರ್ ನೀಡಿ ಖರೀದಿಸಿತ್ತು. ಕಳೆದ ಅಗಸ್ಟ್‌ನಲ್ಲಿ ಗೂಗಲ್ ಮೋಟರೋಲಾ ಬ್ಯಾನರ್ ಅಡಿಯಲ್ಲಿ ಗೂಗಲ್ ಹೊಸ ಸ್ಮಾರ್ಟ್‌ಫೋನ್ ಮೋಟೋ ಎಕ್ಸ್ ಬಿಡುಗಡೆ ಮಾಡಿತ್ತು.
ಸರ್ಚ್ ಇಂಜಿನ್,ಆಪರೇಟಿಂಗ್ ಸಿಸ್ಟಂ, ಬ್ರೌಸರ್‌ನಲ್ಲಿ ಗೂಗಲ್‌ಗೆ ಯಾವಾಗಲೂ ಭಾರೀ ಸ್ಪರ್ಧೆ ನೀಡುತ್ತಿರುವ ಮೈಕ್ರೋಸಾಫ್ಟ್ ಈಗ ನೋಕಿಯಾ ಕಂಪೆನಿಯನ್ನು ಖರೀದಿಸುವ ಮೂಲಕ ಗೂಗಲ್‌ಗೆ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಪ್ರಭಲ ಸ್ಪರ್ಧೆ ನೀಡಲು ಮುಂದಾಗಿದೆ.
2010ರಲ್ಲಿ ಸಿಇಒ ಹುಡುಕಾಟದಲ್ಲಿದ್ದ ನೋಕಿಯಾ ಕಂಪೆನಿಯಲ್ಲಿ ತನ್ನ ಉದ್ಯೋಗಿಯನ್ನು ಸ್ಥಾಪಿಸಿ ನಂತರ ಇಡೀ ಕಂಪೆನಿಯನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಮೈಕ್ರೋಸಾಫ್ಟ್ ತಂತ್ರ ರೂಪಿಸುತ್ತಿದೆ. ಈ ಕಾರಣಕ್ಕಾಗಿ ಮಾಜಿ ಮೈಕ್ರೋಸಾಫ್ಟ್ ಉದ್ಯೋಗಿ ಸ್ಟೀಫನ್ ಎಲೋಪ್ ರೀತಿ ನೋಕಿಯಾ ಸಿಇಒ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಎರಡು ವರ್ಷದ ಹಿಂದೆಯೇ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದ ಸ್ಟೀಫನ್ ಎಲೋಪ್ ಮೈಕ್ರೋಸಾಫ್ಟ್ ನಿಂದ ನೋಕಿಯಾ ಖರೀದಿ ಸುದ್ದಿ ಆಧಾರ ರಹಿತ ಎಂದು ಹೇಳಿದ್ದರು. ಆದರೆ ಈಗ ಮೈಕ್ರೋಸಾಫ್ಟ್ ನೋಕಿಯಾ ಕಂಪೆನಿಯ ಖರೀದಿಸುವ ಮೂಲಕ ಈ ವರದಿ ನಿಜವಾಗಿದೆ.
ವಿಶ್ವದ ಟಾಪ್ 10 ಮೊಬೈಲ್ ಕಂಪೆನಿಗಳಲ್ಲಿ ನೋಕಿಯಾ ಎರಡನೇ ಸ್ಥಾನ ಪಡೆದಿದ್ದರೂ ಮೈಕ್ರೋಸಾಫ್ಟ್ ಕಂಪೆನಿ ನೋಕಿಯಾ ಕಂಪೆನಿಯನ್ನು ಯಾಕೆ ಖರೀದಿಸಿದೆ ಮತ್ತು ಈ ಖರೀದಿ ಒಪ್ಪಂದಗಳೇನು ಎನ್ನುವುದಕ್ಕೆ ಇಲ್ಲಿ ಕೆಲವು ಮಾಹಿತಿಯಿಂದೆ ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ: ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್ ನೋಕಿಯಾ ಮೊಬೈಲ್‌ಗಳು

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಲೂಮಿಯಾ ಸ್ಮಾರ್ಟ್‌ಫೋನ್‌ಗಳಿಗೆ ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಂ ನೀಡುವ ಸಂಬಂಧ 2011 ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್ ಮತ್ತು ನೋಕಿಯಾ ಕಂಪೆನಿಗಳ ಮಧ್ಯೆ ಒಪ್ಪಂದವಾಗಿತ್ತು.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ವಿಶ್ವದ ವಿವಿಧ ಉದ್ಯಮಗಳನ್ನು ಅಧ್ಯಯನ ಮಾಡುವ ಗಾರ್ಟ್‌ನರ್ ಇತ್ತೀಚಿನ ವರದಿಯಂತೆ ಕಳೆದ ವರ್ಷದ ಉತ್ಪಾದನೆಯಾದ ವಿಶ್ವದ ಸ್ಮಾರ್ಟ್‌ಫೋನ್‌ಗಳ ಆಪರೇಟಿಂಗ್ ಸಿಸ್ಟಂನಲ್ಲಿ ಆಂಡ್ರಾಯ್ಡ್ ಪಾಲು ಶೇ.79.0 ,ಐಓಎಸ್ ಪಾಲು ಶೇ.14.2 ಇದ್ದರೆ ವಿಂಡೋಸ್ ಪಾಲು ಕೇವಲ ಶೇ.3.3 ಮಾತ್ರ. ಹೀಗಾಗಿ ವೀಡೋಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಂಡೋಸ್ ಫೋನ್‌ನ ದೊಡ್ಡ ತಯಾರಕಾ ಕಂಪೆನಿ ನೋಕಿಯಾವನ್ನು ಮೈಕ್ರೋಸಾಫ್ಟ್ ಖರೀದಿಸಲು ಮುಂದಾಗಿದೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ನೋಕಿಯಾ ಕಂಪೆನಿ ಲೂಮಿಯಾ ಸರಣಿಯ ಫೋನ್‌ಗಳನ್ನು ಮಾತ್ರ ವಿಂಡೋಸ್ ಫೋನ್8 ಆಪರೇಟಿಂಗ್‌ಸಿಸ್ಟಂ ಬಿಡುಗಡೆ ಮಾಡುತ್ತಿದ್ದರೂ ಅದರ ಸಿಂಬಿಯನ್ ಓಎಸ್ ಫೋನ್‌ಗಳ ಬೇಡಿಕೆ ಅಷ್ಟೇನು ಕುಸಿದಿಲ್ಲ ಎಂದು ಗಾರ್ಟ್‌ನರ್ ತಿಳಿಸಿತ್ತು.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ವಿಂಡೋಸ್ ಫೋನ್‌ಗಳ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೋಕಿಯಾ ತನ್ನದೇ ಆದ ಇನ್ನೊಂದು ಆಪರೇಟಿಂಗ್ ಸಿಸ್ಟಂ ನೋಕಿಯಾ ಆಶಾವನ್ನು ಅಭಿವೃದ್ಧಿ ಪಡಿಸಿದ್ದು ಈ ಮೂಲಕ ಫೀಚರ್ ಫೋನ್‌ಲ್ಲಿದ್ದ ಹಿಡಿತವನ್ನು ಮತ್ತೊಮ್ಮೆ ಸಾಧಿಸಲು ಮುಂದಾಗುತ್ತಿತ್ತು.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಹೀಗಾಗಿ ಈ ಸಿಂಬಿಯನ್ ಮತ್ತು ಆಶಾ ಎರಡು ಓಎಸ್‌ಗಳಿಂದಾಗಿ ನೋಕಿಯಾ ಕಂಪೆನಿ ಇನ್ನೂ ವಿಶ್ವದಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿರುವ ಹಿನ್ನಲೆಯಲ್ಲಿ ಮೈಕ್ರೋಸಾಫ್ಟ್ ಇದೀಗ ನೋಕಿಯಾ ಕಂಪೆನಿಯನ್ನು ಖರೀದಿಸಿದೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಮೈಕ್ರೋಸಾಫ್ಟ್ ನೋಕಿಯಾದ ಎಲ್ಲಾ ಮೊಬೈಲ್ ಸಾಧನಗಳನ್ನು, ಸೇವೆಗಳನ್ನು, ನೋಕಿಯಾ ಪೇಟೆಂಟ್ ಹೊಂದಿರುವ ಲೈಸೆನ್ಸ್‌ಗಳನ್ನು,ಜೊತಗೆ ನೋಕಿಯಾ ಮ್ಯಾಪಿಂಗ್ ಸೇವೆಗಳನ್ನು ಮೈಕ್ರೋಸಾಫ್ಟ್ ಖರೀದಿಸಿದೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
3.79 ಬಿಲಿಯನ್ ಯುರೋ ನೋಕಿಯಾ ಸಾಧನಗಳು ಮತ್ತು ಸೇವೆಗಳಿಗಾಗಿ,1.65 ಬಿಲಿಯನ್ ಯುರೋ ನೋಕಿಯಾದ ಪೇಟೆಂಟ್‌ಗಳಿಗಾಗಿ, ಒಟ್ಟು 5.44 ಬಿಲಿಯನ್‌ಯುರೋ ನೀಡಿ ಮೈಕ್ರೋಸಾಫ್ಟ್ ನೋಕಿಯಾ ಕಂಪೆನಿಯನ್ನು ಖರೀದಿಸಿದೆ

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಇಲ್ಲಿಯವರೆಗೆ ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 32 ಸಾವಿರ ಉದ್ಯೋಗಿಗಳು, ನೋಕಿಯಾದ ಕೇಂದ್ರ ಸ್ಥಳ ಫ್ಲಿನ್ಲೆಂಡ್‌ನಲ್ಲಿದ್ದ 4,700 ಉದ್ಯೋಗಿಗಳು ಜೊತೆಗೆ ನೋಕಿಯಾ ಮೊಬೈಲ್ ಉತ್ಪಾದನಾ ಘಟಕದಲ್ಲಿದ್ದ18,300 ಉದ್ಯೋಗಿಗಳು ಇನ್ನು ಮುಂದೆ ಮೈಕ್ರೋಸಾಫ್ಟ್ ಕಂಪೆನಿಯ ನಿಯಂತ್ರಣದಲ್ಲಿರುತ್ತಾರೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಈ ಖರೀದಿಯ ಜೊತೆಗೆ ಯುರೋಪ್‌ನ ಮೈಕ್ರೋಸಾಫ್ಟ್ ಬಳಕೆದಾರರ ಮಾಹಿತಿಯನ್ನು ಸಂರಕ್ಷಿಸಲು ಫಿನ್ಲೆಂಡ್‌ನಲ್ಲಿ ಡೇಟಾ ಸೆಂಟರ್‌ನ್ನು ತೆರೆಯಲು ಮೈಕ್ರೋಸಾಫ್ಟ್ ಯೋಜನೆ ರೂಪಿಸಿದೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಮುಂದಿನ ವರ್ಷ ಮೈಕ್ರೋಸಾಫ್ಟ್‌ನಿಂದ ನಿವೃತ್ತರಾಗಲಿರುವ ಹಾಲಿ ಸಿಇಒ ಸ್ಟೀವ್ ಬಲ್ಮರ್ ಯಾಕೆ ನೋಕಿಯಾ ಕಂಪೆನಿಯನ್ನು ಖರೀದಿಸಿದ್ದೇವೆ ಎನ್ನುವುದರ ಬಗ್ಗೆ ಇಮೇಲ್‌ನಲ್ಲಿ ತನ್ನ ಸಿಬ್ಬಂದಿಗಳಿಗೆ ವಿವರ ನೀಡಿದ್ದಾರೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ
ಮೈಕ್ರೋಸಾಫ್ಟ್ ನೋಕಿಯಾ ಕಂಪೆನಿಯ ಖರೀದಿ ಒಪ್ಪಂದದ ಸಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಬಹುದು.www.microsoft.com


Click it and Unblock the Notifications








