ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

By Ashwath
|

ನೋಕಿಯಾ ಕಂಪೆನಿಯ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆ ಬಿಡುಗಡೆಯಾಗಿದೆ. ನೋಕಿಯಾ ಎಕ್ಸ್‌ 8,599 ರೂ.ಬೆಲೆಯಲ್ಲಿ ಬಿಡುಗಡೆಯಾಗಿದ್ದು,ಇಂದಿನಿಂದಲೇ ಆನ್‌ಲೈನ್‌ ಶಾಪಿಂಗ್ ಮತ್ತು ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿದ್ದು ಖರೀದಿಸಬಹುದಾಗಿದೆ.

ನೋಕಿಯಾ ಎಕ್ಸ್‌ 4 ಇಂಚಿನ ಸ್ಕ್ರೀನ್‌(480x800 ಪಿಕ್ಸೆಲ್‌),1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌ 4ಜಿಬಿ ಆಂತರಿಕ ಮೆಮೊರಿ,ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ರಹಿತ 3 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ನೋಕಿಯಾ ತನ್ನ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಮೂರು ಸ್ಮಾರ್ಟ್‌ಫೋನ್‌‌ಗಳನ್ನು ಸ್ಪೈನ್‌ನಲ್ಲಿ ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಬಿಡುಗಡೆ ಮಾಡಿತ್ತು.ಈ ಮೂರು ಸ್ಮಾರ್ಟ್‌‌ಫೋನ್‌ಗಳು ಕಸ್ಟಮೈಸ್ಡ್‌ ಆಂಡ್ರಾಯ್ಡ್‌ 'ನೋಕಿಯಾ ಎಕ್ಸ್‌'‌ ಹೆಸರಿನ ಹೊಸ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ. ಆಂಡ್ರಾಯ್ಡ್‌‌,ವಿಂಡೋಸ್‌ ಓಎಸ್‌ ಮಿಶ್ರಣಗೊಂಡಿರುವ ಹೊಸ ಯೂಸರ್‌‌ ಇಂಟರ್‌ಫೇಸ್‌ನ್ನು ನೋಕಿಯಾ ಈ ಫೋನಿಗೆ ನೀಡಿದೆ.

ಈ ಸ್ಮಾರ್ಟ್‌‌ಫೋನಲ್ಲಿ ನೇರವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ.ಬದಲಾಗಿ ಥರ್ಡ್‌ ಪಾರ್ಟಿ ಮೂಲದಿಂದ‌ ಆಂಡ್ರಾಯ್ಡ್‌‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 ನೋಕಿಯಾ  ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಎಕ್ಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ನೋಕಿಯಾ ಎಕ್ಸ್‌ ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X