ಮೊಬೈಲ್‌ನಲ್ಲೇ ಮನಿ ಆರ್ಡರ್‍ ಕಳುಹಿಸಿ

Posted By:

ಭಾರತೀಯ ಅಂಚೆ ಇಲಾಖೆ ಮತ್ತುಷ್ಟು ಗ್ರಾಹಕ ಸ್ನೇಹಿಯಾಗಿದೆ. ಮನಿಯಾರ್ಡರ್ ಕಳಿಸುವುದನ್ನು ಸರಳಗೊಳಿಸಿರುವ ಇಲಾಖೆ, ಮೊಬೈಲ್ ಮೂಲಕ ಹಣವನ್ನು ಕಳಿಸುವ ನೂತನ ಮೊಬೈಲ್ ಮಿನಿ ಟ್ರಾನ್ಸ್‌ಫ‌ರ್ ಸೇವೆಯನ್ನು ಪ್ರಾರಂಭಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮೊಬೈಲ್ ಮಿನಿ ಟ್ರಾನ್ಸ್‌ಫ‌ರ್ ಸೇವೆ ಆರಂಭಗೊಂಡಿದ್ದು ಮೊಬೈಲ್‌ನಲ್ಲಿ ಕರೆ ಮಾಡುವಷ್ಟು ಅಥವಾ ಸಂದೇಶ ಕಳುಹಿಸಿದಷ್ಟೇ ಕೆಲವೇ ಕ್ಷಣಗಳಲ್ಲಿ ಮನಿಯಾರ್ಡರ್ ಕಳುಹಿಸಬಹುದಾಗಿದೆ. ಇದರಿಂದಾಗಿ ಮನಿಯಾರ್ಡರ್ ಕಳಿಸುವುದು ಸರಳವಾಗಿದೆ.

ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಮೂಲಕ ಹಣ ಕಳುಹಿಸುವುದು ತುಂಬಾ ಸರಳ. ಮೊದಲು ನೀವು ಈ ಸೇವೆ ಇರುವ ಹತ್ತಿರದ ಅಂಚೆ ಕಚೇರಿಗೆ ತೆರಳಿ, ಯಾರಿಗೆ ಎಷ್ಟು ಹಣ ಕಳುಹಿಸಬೇಕು ಎಂದು ಬರೆದು ಜತೆಗೆ ಮೊಬೈಲ್‌ ಸಂಖ್ಯೆ ನಮೂದಿಸಿ ಕಳುಹಿಸಬೇಕಾದ ಹಣದ ಜತೆಗೆ ಸೇವಾ ಶುಲ್ಕ ಪಾವತಿಸಬೇಕು.

 ಮೊಬೈಲ್‌ನಲ್ಲೇ ಮನಿ ಆರ್ಡರ್‍ ಕಳುಹಿಸಿ

ತಕ್ಷಣ ಯಾರಿಗೆ ಹಣ ತಲುಪಬೇಕೋ ಅವರಿಗೆ ಮತ್ತು ಹಣ ಕಳುಹಿಸಿದ ಇಬ್ಬರೂ ವ್ಯಕ್ತಿಗಳಿಗೆ ಕೂಡಲೇ ಸಂದೇಶ ರವಾನೆಯಾಗುತ್ತದೆ. ಸಂದೇಶ ಸ್ವೀಕರಿಸಿದ ವ್ಯಕ್ತಿ ಕೂಡಲೇ ಹತ್ತಿರದ ಅಂಚೆ ಕಚೇರಿಗೆ ಹೋಗಿ ಗೌಪ್ಯ ಸಂಖ್ಯೆಯನ್ನೊಳಗೊಂಡ ಮೊಬೈಲ್‌ ಸಂದೇಶವನ್ನು ನೀಡಿದರೆ ಕೈಗೆ ಹಣ ದೊರೆಯಲಿದೆ.

ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಮೂಲಕ ಹಣ ಕಳಿಸುವವರು ಸೇವಾಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅದರಂತೆ, 1000ದಿಂದ 1500 ರೂ. ಕಳುಹಿಸುವವರು 45 ರೂ., 1, 501ರಿಂದ 5000 ರೂ.ವರೆಗೆ ಕಳುಹಿಸುವವರು 75 ರೂ. ಮತ್ತು 5001ರಿಂದ 10,000 ಕಳುಹಿಸುವ ಜನರು 112 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ.


ಇದನ್ನೂ ಓದಿ: 155223ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot