ಬದಲಾಗಿದೆ ಜಿಯೋ ಆಫರ್‌ಗಳು: ರೂ, 309, 399, 459 ಮತ್ತು 499 ಪ್ಲಾನ್‌ಗಳ ಮಾಹಿತಿ ಇಲ್ಲಿದೆ..!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ ತಾನು ಮಾತ್ರವೇ ಬಳಕೆದಾರರಿಗೆ ಆಫರ್ ನೀಡುವುದಲ್ಲದೇ ಇತರ ಟೆಲಿಕಾಂ ಕಂಪನಿಗಳು ಸಹ ಹೊಸ ಆಫರ್ ಗಳನ್ನು ಕಡಿಮೆ ಬೆಲೆಗೆ ನೀಡುವಂತೆ ಮಾಡಿದೆ.

ಬದಲಾಗಿದೆ ಜಿಯೋ ಆಫರ್‌ಗಳು: ರೂ, 309, 399, 459 ಮತ್ತು 499 ಪ್ಲಾನ್‌ಗಳ ಮಾಹಿತಿ

ಓದಿರಿ: ಟ್ರೋಲ್ ಎಂದರೆ ಇದು: ವಿಡಿಯೋದಲ್ಲಿ ಆಪಲ್ ಕಾಲೆಳೆದ ಸ್ಯಾಮ್‌ಸಂಗ್

ಮೊದಲು ಉಚಿತ ಸೇವೆಯನ್ನು ಆರಂಭಿಸಿದ್ದ ಜಿಯೋ ಸದ್ಯ ತನ್ನ ಆಫರ್ ಗಳ ಬೆಲೆಯನ್ನು ಏರಿಕೆ ಮಾಡಿದೆ. ಈ ಹಿನ್ನಲೆಯಲ್ಲಿ ಸದ್ಯ ಜಿಯೋದಲ್ಲಿ ಲಭ್ಯವಿರುವ ಪ್ಲಾನ್‌ಗಳ ವಿವರ ಇಲ್ಲಿದ್ದು, ಅದರಲ್ಲಿಯೂ ರೂ.500 ಪ್ಲಾನ್ ಗಳು ಯಾವುವು ಎಂದು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಲಯನ್ಸ್ ಜಿಯೋ ರೂ. 19 ಪ್ಲಾನ್:

ರಿಲಯನ್ಸ್ ಜಿಯೋ ರೂ. 19 ಪ್ಲಾನ್:

ಜಿಯೋದಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಪ್ಲಾನ್ ಇದಾಗಿದೆ. ಇದರಲ್ಲಿ ಬಳಕೆದಾರಿಗೆ 0.15 GB ಹೈಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದೆ. ಇದಲ್ಲದೇ ಇದರಲ್ಲಿ ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ನೀಡಲಿದೆ. ಜೊತೆಗೆ 20 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದಾಗಿದೆ.

ರಿಲಯನ್ಸ್ ಜಿಯೋ ರೂ. 52 ಪ್ಲಾನ್:

ರಿಲಯನ್ಸ್ ಜಿಯೋ ರೂ. 52 ಪ್ಲಾನ್:

ಇದರೊಂದಿಗೆ ರೂ.52 ಪ್ಲಾನ್ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಇದರಲ್ಲಿ ಅನ್‌ಲಿಮಿಟೆಡ್ ಡೇಟಾ ಮತ್ತು ಕರೆಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ 1.05 GB ಹೈಸ್ಪೀಡ್ ಡೇಟಾ ದೊರೆಯಲಿದ್ದು, ಅದರಲ್ಲಿ ಪ್ರತಿ ನಿತ್ಯದ ಬಳಕೆಗೆ 0.15 GB ದೊರೆಯಲಿದೆ. ಅಲ್ಲದೇ ಉಚಿತ SMS ಸಹ ಕಳುಹಿಸಬಹುದಾಗಿದೆ.

ರಿಲಯನ್ಸ್ ಜಿಯೋ ರೂ. 98 ಪ್ಲಾನ್:

ರಿಲಯನ್ಸ್ ಜಿಯೋ ರೂ. 98 ಪ್ಲಾನ್:

ಈ ಪ್ಲಾನ್ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದರಲ್ಲಿ 2.1 GB ಡೇಟಾ ಬಳಕೆಗೆ ದೊರೆಯಲಿದೆ. ಅದರಲ್ಲಿ ಪ್ರತಿ ನಿತ್ಯದ ಬಳಕೆಗೆ 0.15 GB ದೊರೆಯಲಿದೆ. ಅಲ್ಲದೇ ಉಚಿತವಾಗಿ 140 SMS ಸಹ ಕಳುಹಿಸಬಹುದಾಗಿದೆ. ಕರೆಗಳನ್ನು ಮಾಡುವ ಅವಕಾಶವು ಇದೆ.

ರಿಲಯನ್ಸ್ ಜಿಯೋ ರೂ. 149 ಪ್ಲಾನ್:

ರಿಲಯನ್ಸ್ ಜಿಯೋ ರೂ. 149 ಪ್ಲಾನ್:

28 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ನಲ್ಲಿ ಗ್ರಾಹಕರು ಅನ್‌ಲಿಮೆಟೆಡ್ ವಾಯ್ಸ್ ಕಾಲಿಂಗ್ ಲಾಭವನ್ನು ಪಡೆಯಬಹುದಾಗಿದೆ. ಇದಲ್ಲದೇ 4.2GB ಹೈಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಅದರಲ್ಲಿ ಪ್ರತಿ ನಿತ್ಯದ ಬಳಕೆಗೆ 0.15 GB ದೊರೆಯಲಿದೆ. ಅಲ್ಲದೇ ಉಚಿತವಾಗಿ 300 SMS ಸಹ ಕಳುಹಿಸಬಹುದಾಗಿದೆ. ಕರೆಗಳನ್ನು ಮಾಡುವ ಅವಕಾಶವು ಇದೆ.

ರಿಲಯನ್ಸ್ ಜಿಯೋ ರೂ. 309 ಪ್ಲಾನ್:

ರಿಲಯನ್ಸ್ ಜಿಯೋ ರೂ. 309 ಪ್ಲಾನ್:

ರಿಲಯನ್ಸ್ ಜಿಯೋ 49 ದಿನಗಳ ಆಫರ್ ಇದಾಗಿದ್ದು, ಪ್ರತಿ ನಿತ್ಯ 1GB ಡೇಟಾ ಬಳಕೆಗೆ ದೊರೆಯಲಿದೆ. ಇದರಲ್ಲಿ ಉಚಿತವಾಗಿ SMS ಸಹ ಕಳುಹಿಸಬಹುದಾಗಿದೆ. ಕರೆಗಳನ್ನು ಮಾಡುವ ಅವಕಾಶವು ಇದೆ.

ರಿಲಯನ್ಸ್ ಜಿಯೋ ರೂ. 399 ಪ್ಲಾನ್:

ರಿಲಯನ್ಸ್ ಜಿಯೋ ರೂ. 399 ಪ್ಲಾನ್:

ಈ ಆಫರ್ ನಲ್ಲಿ 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಬಳಕೆದಾರರಿಗೆ ಪ್ರತಿ ನಿತ್ಯ 1GB ಡೇಟಾ ಬಳಕೆಗೆ ದೊರೆಯಲಿದೆ. ಈ ಆಫರ್ ನಲ್ಲಿ ಉಚಿತವಾಗಿ SMS ಸಹ ಕಳುಹಿಸಬಹುದಾಗಿದೆ. ಕರೆಗಳನ್ನು ಮಾಡುವ ಅವಕಾಶವು ಇದೆ.

ರಿಲಯನ್ಸ್ ಜಿಯೋ ರೂ. 459 ಪ್ಲಾನ್:

ರಿಲಯನ್ಸ್ ಜಿಯೋ ರೂ. 459 ಪ್ಲಾನ್:

ಈ ಆಫರ್ ನಲ್ಲಿ ಗ್ರಾಹಕರು 84 ದಿನ ವ್ಯಾಲಿಡಿಟಿಗೆ ಪ್ರತಿ ನಿತ್ಯ ಒಂದು GB ಡೇಟಾವನ್ನು ಪಡೆದುಕೊಳ್ಳದ್ದಾರೆ. ಜೊತೆಗೆ ಉಚಿತವಾಗಿ SMS ಸಹ ಕಳುಹಿಸಬಹುದಾಗಿದೆ. ಕರೆಗಳನ್ನು ಮಾಡುವ ಅವಕಾಶವು ಇದೆ.

ರಿಲಯನ್ಸ್ ಜಿಯೋ ರೂ. 499 ಪ್ಲಾನ್:

ರಿಲಯನ್ಸ್ ಜಿಯೋ ರೂ. 499 ಪ್ಲಾನ್:

ಇದು 91 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಬಳಕಗೆ 91 GB ಡೇಟಾವನ್ನು ನೀಡಲಿದೆ. ಇದರಲ್ಲಿ ಉಚಿತ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Prepaid Recharge Plans. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot