ಒಪ್ಪೊ 5X ಡುಯಲ್ ಡಿಜಿಟಲ್ ಕ್ಯಾಮೆರಾ ಜೂಮ್ ಸಿಸ್ಟಮ್ ಹೇಗಿದೆ ಗೊತ್ತಾ..?

Written By:

ಕಳೆದ ಕೆಲ ದಿನಗಳ ಹಿಂದೆ ತಿಳಿಸಿದಂತೆ ಬಾರ್ಸಿಲೊನ ದಲ್ಲಿ ನಡೆಯಲಿರವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಚೀನಾ ಮೂಲ ಕ್ಯಾಮರಾ ಸ್ಮಾರ್ಟ್‌ಪೋನ್ ತಯಾರಕ ಕಂಪನಿ ಒಪ್ಪೋ, 5X ಡುಯಲ್ ಡಿಜಿಟಲ್ ಕ್ಯಾಮೆರಾ ಜೂಮ್ ಟೆಕ್ನಾಲಜಿಯನ್ನು ಪರಿಚಯಿಸಿದ್ದು, ಈ ವರ್ಷದಿಂದ ಮಾರುಕಟ್ಟೆಗೆ ಬರಲಿರುವ ಒಪ್ಪೊ ಪೋನುಗಳಲ್ಲಿ ಈ ಹೊಸ ಕ್ಯಾಮೆರಾ ಟೆಕ್ನಾಲಜಿಯನ್ನು ಅಳವಡಿಸಲಿದೆಯಂತೆ.

ಒಪ್ಪೊ 5X ಡುಯಲ್ ಡಿಜಿಟಲ್ ಕ್ಯಾಮೆರಾ ಜೂಮ್ ಸಿಸ್ಟಮ್ ಹೇಗಿದೆ ಗೊತ್ತಾ..?

ಓದಿರಿ: ಲಾಂಚ್ ಆಯ್ತು ಮೊಟೊ G5, ಮೊಟೊ G5 ಪ್ಲಸ್: ಮಾರ್ಚ್‌ನಲ್ಲಿ ಮಾರುಕಟ್ಟೆಗೆ..!!

ಒಪ್ಪೊ ಪರಿಚಯಿಸಿರುವ 5X ಡುಯಲ್ ಕ್ಯಾಮರೆ ಜೂಮ್ ಟೆಕ್ನಾಲಜಿ ಸ್ಮಾರ್ಟ್‌ಪೋನ್ ಡುಯಲ್ ಕ್ಯಾಮೆರಾ ವಿಭಾಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಈ ಹೊಸ ಟೆಕ್ನಾಲಜಿಯೂ ಪರಿಸ್ಕೋಪ್ ಸ್ಟೈಲ್‌ನಲ್ಲಿ ಸೆಟಪ್ ಮಾಡಲಾಗಿದ್ದು, ಸುಮಾರು 5.7mm ತಿಕ್ನೆಸ್ ಜಾಗದಲ್ಲಿ ಈ ಹೊಸ ಕ್ಯಾಮೆರಾ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಸದ್ಯ ಒಪ್ಪೊ ಪರಿಚಯಿಸಿರುವ ಈ ಹೊಸ ಕ್ಯಾಮೆರಾ ತಂತ್ರಜ್ಞಾನವು ಯಾವ ಪೋನಿನಲ್ಲಿ ಅಳವಡಿಸಲಿದೆ ಎನ್ನುವ ಗುಟ್ಟು ಇನ್ನು ತಿಳಿದಿಲ್ಲವಾಗಿದೆ.

ಒಪ್ಪೊ 5X ಡುಯಲ್ ಡಿಜಿಟಲ್ ಕ್ಯಾಮೆರಾ ಜೂಮ್ ಸಿಸ್ಟಮ್ ಹೇಗಿದೆ ಗೊತ್ತಾ..?

ಈ ಹೊಸ 5X ಡುಯಲ್ ಕ್ಯಾಮರೆ ಜೂಮ್ ಟೆಕ್ನಾಲಜಿಯನ್ನು ಒಪ್ಪೊ ಕಂಪನಿಯ ಇಂಜಿನಿಯರ್ ಗಳು ಸುಮಾರು ಒಂದು ವರ್ಷಗಳ ಕಾಲದಿಂದ ರೆಡಿ ಮಾಡಿದ್ದು, ಸುಮಾರು 5.7mm ಜಾಗದಲ್ಲಿ ಕೂರುವ ಈ ಹೊಸ ಟೆಕ್ನಾಲಜಿಯಲ್ಲಿ ಸುಮಾರು 50 ಪಾರ್ಟ್‌ಗಳನ್ನು ಇರಿಸಲಾಗಿದ್ದು, ಇದರಲ್ಲಿ ಒಂದು ಕ್ಯಾಮೆರಾ ನೇರಾವಾಗಿ ಚಿತ್ರಗಳನ್ನು ಸೆರೆ ಹಿಡಿದರೆ ಮತ್ತೊಂದು ಕ್ಯಾಮರಾ L ಶೇಪ್‌ನಲ್ಲಿ ಪೋಟೊಗಳನ್ನು ತೆಗೆಯಲಿದೆ.

ಈ 5X ಡುಯಲ್ ಕ್ಯಾಮರೆ ಜೂಮ್ ಟೆಕ್ನಾಲಜಿಯಲ್ಲಿ ಪೋಟೋ ತೆಗೆಯುವ ಸಂರ್ಭದಲ್ಲಿ 5X ಜೂಮ್ ಮಾಡಿರುವ ನೀವು ತೆಗೆಯ ಬಯಸುವ ಚಿತ್ರದಲ್ಲಿ ಯಾವುದೇ ನಷ್ಟವಾಗುದಿಲ್ಲ ಮತ್ತು ಚಿತ್ರದ ಗುಣಮಟ್ಟದಲ್ಲಿಯೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಡುಯಲ್ ಕ್ಯಾಮರೆದಲ್ಲಿ ಒಂದು ವೈಡ್ ಆಂಗಲ್ ಮತ್ತು ಟೆಲಿಪೋಟೋ ಲೈನ್ಸ್ ಸಹ ಇದರಲ್ಲಿ ಅಡಕವಾಗಿದೆ.

ಒಪ್ಪೊ 5X ಡುಯಲ್ ಡಿಜಿಟಲ್ ಕ್ಯಾಮೆರಾ ಜೂಮ್ ಸಿಸ್ಟಮ್ ಹೇಗಿದೆ ಗೊತ್ತಾ..?

ಓದಿರಿ: 2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್‌ ಬೆಲೆ 9,800 ಮಾತ್ರ..!!

ಈ ಹೊಸ ಕ್ಯಾಮೆರಾ ಟೆಕ್ನಾಲಜಿಯೋ ಸ್ಮಾರ್ಟ್‌ಪೋನ್ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಬೇರೆ ಕಂಪನಿಗಳು ಇದನ್ನು ಕಾಪಿ ಮಾಡಲಿವೆ ಎನ್ನುವದು ಒಪ್ಪೊ ಕಂಪನಿಯ ಅಭಿಪ್ರಾಯಾವಾಗಿದೆ. ಈ ಹೊಸ ಕ್ಯಾಮೆರಾ ತಂತ್ರಜ್ಞಾನವನ್ನು ಇಸ್ರೇಲ್ ಮೂಲದ ಸ್ಟ್ರಾಟಪ್ ಕಂಪನಿಯೊಂದಿಗೆ ಸೇರಿಕೊಂಡು ತಯಾರಿಸಲಾಗಿದೆ ಎಂದು ತಿಳಿಸಿದೆ.

Read more about:
English summary
Oppo, as promised, has announced its all-new 5x Smartphone Photography Technology dubbed 5x Dual Camera Zoom system, which will debut on the company's phones later this year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot