Home
ಮೊಬೈಲ್

OPPO A60 5G: ಬಂತು ಗಟ್ಟಿಮುಟ್ಟಾದ 5G ಫೋನ್‌.. ಬೆಲೆ ಇಷ್ಟೇನಾ?

ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಒಪ್ಪೋ (Oppo) ಎತ್ತಿದ ಕೈ. ಅದರಲ್ಲೂ ಕ್ಯಾಮೆರಾಗೆ ಒಪ್ಪೋ ವಿಶೇಷ ಒತ್ತು ನೀಡುತ್ತದೆ. ಈ ಸಾಲಿಗೆ ಕಂಪನಿ ಮತ್ತೊಂದು ಹೊಸ ಫೋನ್ ಸೇರ್ಪಡೆಯಾಗಿದೆ. ಹೌದು, ಒಪ್ಪೋ ತನ್ನ A3 ಸರಣಿಯನ್ನು ವಿಸ್ತರಿಸಿದೆ. ಇದರ ಅಡಿಯಲ್ಲಿ ನೂತನ ಒಪ್ಪೋ A60 5G (Oppo A60 5G) ಫೋನನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಒಪ್ಪೋ A60 5G ಮೊಬೈಲ್ ಭಾರತದಲ್ಲಿ ಬಿಡುಗಡೆಯಾದ ಒಪ್ಪೋ A3 5Gಯ ​​ಮರುಬ್ರಾಂಡೆಡ್ ಆವೃತ್ತಿಯಾಗಿದೆ. ಇದು 6.67 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಷನ್ 6300 ಚಿಪ್‌ಸೆಟ್, 50 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. 6GB RAM ಮತ್ತು 128GB ಸ್ಟೋರೇಜ್, 5100mAh ಬ್ಯಾಟರಿ, 45W SuperVOOC ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.

OPPO A60 5G: ಬಂತು ಗಟ್ಟಿಮುಟ್ಟಾದ 5G ಫೋನ್‌.. ಬೆಲೆ ಇಷ್ಟೇನಾ?

ಒಪ್ಪೋ A60 5G ಫೋನಿನ ಬೆಲೆ

ಒಪ್ಪೋ A60 5G ಫೋನನ್ನು ಯುಎಇಯ ಅಮೆಜಾನ್ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದನ್ನು ಸಿಂಗಲ್ ಸ್ಟೋರೇಜ್‌ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. 6GB RAM ಮತ್ತು 128GB ಸ್ಟೋರೇಜ್‌ ರೂಪಾಂತರದ ಬೆಲೆ 15,000 ರೂ. (AED 678) ಇದೆ. ನೀವು ನೆಬ್ಯುಲಾ ರೆಡ್ (Nebula Red) ಮತ್ತು ಓಷನ್ ಬ್ಲೂ (Ocean Blue) ಬಣ್ಣದಲ್ಲಿ ಖರೀದಿಸಬಹುದು.

ಡಿಸ್ಪ್ಲೇ: ಒಪ್ಪೋ A60 5G ಫೋನ್ 6.67 ಇಂಚಿನ HD ಪ್ಲಸ್ LCD ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದ ಸೌಲಭ್ಯವನ್ನು ಪಡೆದಿದೆ.

ಪ್ರೊಸೆಸರ್: ಈ ಫೋನ್‌ನಲ್ಲಿನ ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮೆನ್ಶನ್ 6300 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಈ ಚಿಪ್‌ನೊಂದಿಗೆ Mali-G57 MC2 GPU ಅನ್ನು ಸಹ ಒದಗಿಸಲಾಗಿದೆ. ಇದು ಉತ್ತಮ ಗ್ರಾಫಿಕ್ ಮತ್ತು ಗೇಮಿಂಗ್‌ಗೆ ಸೂಕ್ತ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ColorOS 14.0.1 ನೊಂದಿಗೆ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.

ಸ್ಟೋರೇಜ್: ಹೊಸ ಒಪ್ಪೋ ಫೋನ್‌ 6​​GB LPDDR4X RAM ಮತ್ತು 128GB eMMC 5.1 ಇಂಟರ್ನಲ್ ಸ್ಟೋರೇಜ್‌ ಅನ್ನು ಒಳಗೊಂಡಿದೆ. ವರ್ಚುವಲ್ ತಂತ್ರಜ್ಞಾನದ ಸಹಾಯದಿಂದ RAM ಅನ್ನು 6GB ವರೆಗೆ ವಿಸ್ತರಿಸಬಹುದು. ಅಂದರೆ, ಒಟ್ಟು 12 GB ವರೆಗೆ ಬಳಸಲು ಸಾಧ್ಯವಿದೆ.

ಈ ಸುದ್ದಿ ಓದಿದ್ದೀರಾ?: Realme 13+ 5G ಮಾರಾಟಕ್ಕೆ ಸಿದ್ಧ: 3,000 ಅಗ್ಗ.. 1,500 ಕ್ಯಾಶ್‌ಬ್ಯಾಕ್! ಈ ಅವಕಾಶ ಬಿಡಬೇಡಿ

ಕ್ಯಾಮೆರಾ: ಒಪ್ಪೋ A60 5G ಮೊಬೈಲ್ 50 ಮೆಗಾಪಿಕ್ಸೆಲ್ AF ಸಂವೇದಕವನ್ನು ಹೊಂದಿದ್ದು, ಹಿಂದಿನ ಪ್ಯಾನೆಲ್‌ನಲ್ಲಿ LED ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ: ಕಂಪನಿಯು ಒಪ್ಪೋ A60 5G ಅನ್ನು 5100mAh ಸಾರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್ ಮಾಡಲು 45W SuperVOOC ಚಾರ್ಜಿಂಗ್ ಸೌಲಭ್ಯವಿದೆ. ನೀವು ಉತ್ತಮ ಬ್ಯಾಟರಿ ಬ್ಯಾಕಪ್ ಪಡೆಯಬಹುದು. ಇದು ಸುಮಾರು 7.7 ಎಂಎಂ ದಪ್ಪ ಮತ್ತು 187 ಗ್ರಾಂ ತೂಕ ಹೊಂದಿದೆ.

ಇತರೆ ವೈಶಿಷ್ಟ್ಯಗಳು: ಒಪ್ಪೋ A60 5G ಮೊಬೈಲ್ ಡ್ಯುಯಲ್ ಸಿಮ್ 5G, Wi-Fi 5, ಬ್ಲೂಟೂತ್ 5.3, ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ. ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸಂವೇದಕ ಇದೆ. ಇದರೊಂದಿಗೆ ಮಿಲಿಟರಿ ದರ್ಜೆಯ ಆಘಾತ ಪ್ರತಿರೋಧ ಮತ್ತು ದ್ರವ ಪ್ರತಿರೋಧ ತಂತ್ರಜ್ಞಾನವನ್ನು ಒದಗಿಸಲಾಗಿದೆ.

Best Mobiles in India

English summary
Oppo A60 5G launched globally with 50MP camera, 5100mAh battery: know price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+